ಅಪ್ಪ ಶಿವಮೊಗ್ಗ ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳಿ ಮಗಳ ಮದುವೆ ಮುಗಿಸಿದ ಸಂಬಂಧಿಕರು | ವಿವಾಹದ ಬಳಿಕ ತಿಳಿದ ಸಾವಿನ ಸತ್ಯ
Relatives hide news of father death for daughters wedding

SHIVAMOGGA | MALENADUTODAY NEWS | ಮಲೆನಾಡು ಟುಡೆ Jan 21, 2025
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ದುಃಖದ ಭಾರ ತಡೆದುಕೊಂಡು ಸಂಭ್ರಮದ ಕಾರ್ಯವೊಂದನ್ನು ನಡೆಸಿದ ಅಪರೂಪದ ಪ್ರಸಂಗ ವರದಿಯಾಗಿದೆ. ತಂದೆಯ ಸಾವಿನ ಸುದ್ದಿಯನ್ನು ಮಗಳಿಗೆ ತಿಳಿಸಿದೇ, ಸಂಬಂಧಿಕರೇ ಹೆಣ್ಣುಮಗಳನ್ನು ದಾರೆ ಎರೆದುಕೊಟ್ಟಿದ್ದಾರೆ. ಈ ವಿಷಯ ಕೂಡ ಮದುವೆಯ ನಂತರವೇ ಹೊರಜಗತ್ತಿಗೆ ಗೊತ್ತಾಗಿದೆ.
ತರೀಕೆರೆಯ ನಾಗಪ್ಪ ಕಾಲೊನಿಯ ನಿವಾಸಿ ಗೋಣಿಚೀಲದ ವ್ಯಾಪಾರಿ ಪಾಪಣ್ಣ ಅವರ ಮಗ ಚಂದ್ರು ಎಂಬವರು ಮಗಳ ಮದುವೆಗೂ ಹಿಂದಿನ ದಿನ ಸಾವನ್ನಪ್ಪಿದ್ದರು. ಭಾನುವಾರ ಮದುವೆ ಇತ್ತು, ಶನಿವಾರ ಅವರು ಸಾವನ್ನಪ್ಪಿದ್ರು. ಸಂಬಂಧಿಕರೊಬ್ಬರನ್ನು ಮದುವೆಗೆ ಕರಯೋದು ಮರೆತಿದ್ದನ್ನ ನೆನಪು ಮಾಡಿಕೊಂಡು ಅವರಲ್ಲಿಗೆ ಆಹ್ವಾನ ಪತ್ರಿಕೆ ಕೊಡಲು ಹೋಗಿದ್ದ ಚಂದ್ರು ಬೈಕ್ ಅಪಘಾತಕ್ಕೀಡಾಗಿತ್ತು. ಮರವೊಂದಕ್ಕೆ ಡಿಕ್ಕಿಯಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಅಲ್ಲಿಯೇ ಅವರು ನಿಧನರಾಗಿದ್ದರು. ಆದರೆ ಸಾವಿನ ಸುದ್ದಿ ಚಂದ್ರುರವರ ಮಗಳ ಮದುವೆ ನಿಲ್ಲಲು ಕಾರಣವಾಗಬಾರದು ಎಂದು ನಂಬಿದ ಸಂಬಂಧಿಕರು, ವಿಷಯ ಮುಚ್ಚಿಟ್ಟು, ಗಂಡಿನ ಕಡೆಯ ಕೆಲವರಿಗೆ ವಿಚಾರ ತಿಳಿಸಿ, ಮದುವೆ ನಡೆಸಿದರು. ಮದುವೆಯಾದ ಬೆನ್ನಲ್ಲೆ ವಿಷಯ ತಿಳಿಸಿ, ಸೋಮವಾರ ಚಂದ್ರುರವರ ಅಂತ್ಯಕ್ರಿಯೆ ನಡೆಸಿದ್ದಾರೆ.
SUMMARY | Relatives hide news of father death for daughters wedding
KEY WORDS | Relatives hide news of father death for daughters wedding