ಆನಂದಪುರದಲ್ಲಿ ಮಾಂಗಲ್ಯ ಸರ ಕದಿದ್ದ ವ್ಯಕ್ತಿಗೆ ಶಿವಮೊಗ್ಗ ರೈಲ್ವೆ ಸ್ಟೇಷನ್‌ನಲ್ಲಿ ಶಾಕ್ | ಹೂವಿನ ಹಡಗಲಿ ಧರ್ಮ ಅರೆಸ್ಟ್
RPF and GRP staff from Shivamogga Railway station, SME ,Hoovina Hadagali, Vijaya Nagara District , gold chain
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 28, 2024
ಶಿವಮೊಗ್ಗ ರೈಲ್ವೆ ಪೊಲೀಸರು ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಚಿನ್ನದ ಸರವನ್ನ ಕದ್ದ ಆರೋಪಿಯನ್ನ ಅರೆಸ್ಟ್ ಮಾಡಿದ್ದಾರೆ. ಕಳೆದ 23 ರಂದು ನಡೆದ ಪ್ರಕರಣವೊಂದರ ಸಂಬಂಧ ಕಾರ್ಯಾಚರಣೆ ಕೈಗೊಂಡ ರೈಲ್ವೆ ಪೊಲೀಸರು, 26 ನೇ ತಾರೀಖು ಹೂವಿನಹಡಗಲಿಯ ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದಾರೆ.
ಏನಿದು ಪ್ರಕರಣ
ಕಳೆದ ಡಿಸೆಂಬರ್ 23 ರಂದು ಆನಂದಪುರ ರೈಲ್ವೆ ಸ್ಟೇಷನ್‌ನಲ್ಲಿ , ತಾಳಗುಪ್ಪ ಮೈಸೂರು ಟ್ರೈನ್‌ನಲ್ಲಿ ಮಹಿಳೆಯೊಬ್ಬರ ಸರಗಳ್ಳತನವಾದ ಬಗ್ಗೆ ದೂರು ದಾಖಲಾಗಿತ್ತು. ಮೂರು ಲಕ್ಷ ರೂಪಾಯಿ ಮೌಲ್ಯದ 60 ಗ್ರಾಮ್ ತೂಕದ ಮಾಂಗಲ್ಯಸರವನ್ನು ಅಪರಚಿತ ವ್ಯಕ್ತಿಯೊಬ್ಬ ಕದ್ದು ಎಸ್ಕೇಪ್ ಆಗಿದ್ದ. ಈ ಸಂಬಂಧ ಕೇಸ್ ದಾಖಲಿಸಿಕೊಂಡಿದ್ದ ಶಿವಮೊಗ್ಗ ರೈಲ್ವೆ ಪೊಲೀಸ್ ಶಿವಮೊಗ್ಗದ ಎಲ್ಲಾ ರೈಲ್ವೆ ಸ್ಟೇಷನ್‌ಗಳಲ್ಲಿ ಹೆಚ್ಚಿನ ನಿಗಾ ವಹಿಸಿದ್ದರು.
ಶಿವಮೊಗ್ಗದಲ್ಲಿ ಸಿಕ್ಕಿಬಿದ್ದ ಆರೋಪಿ
ಆನಂದಪುರ ರೈಲ್ವೆ ಸ್ಟೇಷನ್‌ನಲ್ಲಿ ಕಳ್ಳತನ ಮಾಡಿದ್ದ ವ್ಯಕ್ತಿಯು ವಿಜಯನಗರ ಜಿಲ್ಲೆ ಹೂವಿನಹಡಗಲಿಗೆ ತೆರಳುವ ಸಲುವಾಗಿ ಬೀರೂರಿಗೆ ಹೋಗಲು ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ. ಅದಾಗಲೇ ಸಿಸಿ ಕ್ಯಾಮರಾ ಹಾಗೂ ಇತರೇ ತಾಂತ್ರಿಕ ಮಾಹಿತಿಗಳನ್ನ ಕಲೆಹಾಕಿದ್ದ ರೈಲ್ವೆ ಪೊಲೀಸರು ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ನಿಗಾವಹಿಸಿದ್ದರು. ಅಲ್ಲದೆ ಅನುಮಾನಸ್ಪದ ವ್ಯಕ್ತಿಗಳ ಮೇಲೆ ಕಣ್ಣಿಟ್ಟಿದ್ದರು. ಈ ಮಧ್ಯೆ ಆರೋಪಿಯ ಮೇಲೆ ಪೊಲೀಸರ ಸಂಶಯ ಹೆಚ್ಚಾದ್ದರಿಂದ ಆತನನ್ನು ರೈಲ್ವೆ ನಿಲ್ದಾಣದಲ್ಲಿಯೇ ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಚಿನ್ನ ಊರಿಗೆ ಸಾಗಿಸಲು ಹೋಗಿ ಸಿಕ್ಕಿಬಿದ್ದ
ಆರೋಪಿಯು ತಾನು ಕದ್ದಿದ್ದ ಚಿನ್ನವನ್ನು ತನ್ನ ಊರು ಹೂವಿನಹಡಗಲಿಗೆ ಸಾಗಿಸಲು ಮುಂದಾಗಿದ್ದ. ಅದೇ ಕಾರಣಕ್ಕೆ ರೈಲ್‌ನಲ್ಲಿಯೇ ಪ್ರಯಾಣಿಸಲು ಮುಂದಾಗಿದ್ದ ಆತ, ರೈಲ್ವೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಒಟ್ಟಾರೆ, ರೈಲ್ವೆ ಪೊಲೀಸ್ ಇಲಾಖೆಯ ಸಣ್ಣದೊಂದು ಸಂಶಯ ಆರೋಪಿಯನ್ನು ಬಂಧಿಸಲು ಕಾರಣವಾಗಿದೆ.
ಆರೋಪಿಯನ್ನು ಧರ್ಮನಾಯ್ಕ್ ಎಂದು ಗುರುತಿಸಲಾಗಿದ್ದು, ಈತ, ವಿಚಾರಣೆಯ ಸಂದರ್ಭದಲ್ಲಿ, ಸುಮಾರು 07 ತಿಂಗಳ ಹಿಂದೆ ಬೆಂಗಳೂರು ವಿಭಾಗದ ಹೆಜ್ಜಾಲ ರೈಲು ನಿಲ್ದಾಣದಲ್ಲಿ ಚೈನ್ ಸ್ನ್ಯಾಚಿಂಗ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
SUMMARY | RPF and GRP staff from Shivamogga (SME) Railway station, detained accused on Dharma Naik of Hoovina Hadagali, Vijaya Nagara District and recovered a gold chain weighing 60 grams.
KEY WORDS | RPF and GRP staff from Shivamogga Railway station, SME ,Hoovina Hadagali, Vijaya Nagara District , gold chain