RCB ಯ ನೂತನ ನಾಯಕ ಫಿಕ್ಸ್
Rcb, one of the most popular teams in the IPL, have named Rajat Patidar as the new captain of their team.

SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 13, 2025
ಐಪಿಎಲ್‌ನ ಜನಪ್ರಿಯ ತಂಡದಲ್ಲೊಂದಾದ ಆರ್‌ಸಿಬಿ ತನ್ನ ತಂಡ ನೂತನ ನಾಯಕನನ್ನಾಗಿ ರಜತ್ ಪಾಟಿದಾರ್ ರನ್ನು ಆಯ್ಕೆಮಾಡಿದೆ. ಈ ಬಾರಿಯ ಐಪಿಎಲ್ ಮಾರ್ಚ್ 2025 ರಿಂದ ಪ್ರಾರಂಭವಾಗಲಿದೆ. ಈ ಹಿನ್ನಲೆ ಆರ್‌ಸಿಬಿ ತನ್ನ ನೂತನ ನಾಯಕನ ಹೆಸರನ್ನು ಘೋಷಿಸಿದೆ ಈ ಹಿಂದೆ ಫಾಫ್ ಡುಪ್ಲೆಸಿಸ್ ಆರ್ ಸಿ ಬಿಯ ನಾಯಕನಾಗಿ ತಂಡವನ್ನು ಮುನ್ನೆಡೆಸಿದ್ದರು. ಆದರೆ ಈಗ ಅವರು ದೆಹಲಿ ಕ್ಯಾಪಿಟಲ್ ತಂಡದ ಪಾಲಾಗಿದ್ದು, ಆರ್ ಸಿ ಬಿ ತಂಡದ ನಾಯಕ ಯಾರಾಗಬಹುದು ಎನ್ನುವ ಅನುಮಾನ ಆರ್ ಸಿ ಬಿ ಅಭಿಮಾನಿಗಳ ವಲಯದಲ್ಲಿ ಮೂಡಿತ್ತು. ಇದೀಗ ಆ ಅನುಮಾನಗಳಿಗೆ ಆರ್ ಸಿ ಬಿ ತಂಡ ತೆರೆ ಎಳೆದಿದೆ.
ರಜತ್ ಪಾಟಿದಾರ್ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಧ್ಯ ಪ್ರದೇಶ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ 2021 ರಿಂದ ಆರ್ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ ತಂಡದ ಖಾಯಂ ಸದಸ್ಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಷ್ಟೆಲ್ಲಾ ಅನುಭವವಿರುವ ರಜತ್ ಪಾಟಿದಾರ್‌ಗೆ ನಾಯಕನ ಸ್ಥಾನ ನೀಡಲಾಗಿದೆ ಎನ್ನಲಾಗಿದೆ.
ಈ ಕುರಿತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಹುಪರಾಕ್ ಹೇಳೋ ಸಮಯ ಬಂದಿದೆ, ಈಗ ಪದಗ್ರಹಣ ಮಾಡ್ತಿರೋ ನಿಮ್ಮ ತಂಡದ ಅಧಿಪತಿ, ನಾಯಕ ರಜತ್ ಮನೋಹರ್ ಪಾಟಿದಾರ್ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದೆ.
ಬಹುಪರಾಕ್ ಹೇಳೋ ಸಮಯ ಬಂದಿದೆ, ಬೆಂಗಳೂರು! ????????
ಈಗ ಪದಗ್ರಹಣ ಮಾಡ್ತಿರೋ ನಿಮ್ಮ ತಂಡದ ಅಧಿಪತಿ, ನಾಯಕ ರಜತ್ ಮನೋಹರ್ ಪಾಟಿದಾರ್! ????????#PlayBold #ನಮ್ಮRCB #RCBCaptain #Rajat #RajatPatidar #IPL2025 #PatidarPattabhisheka pic.twitter.com/NDf8EjIl2H — Royal Challengers Bengaluru (@RCBTweets) February 13, 2025
SUMMARY | Rcb, one of the most popular teams in the IPL, have named Rajat Patidar as the new captain of their team.
KEYWORDS | Rcb, IPL, Rajat Patidar, new captain, cricket,