ರಸ್ತೆಯಲ್ಲಿಯೇ ಶೀರ್ಷಾಸನ ಹಾಕಿದ TR ಕೃಷ್ಣಪ್ಪ | ತಲೆಕೆಳಗೆ ಮಾಡಿದರೂ ಬದಲಾಗದೆ ಮದ್ಯ ಮಾಫಿಯಾ

Protest against sale of liquor, Ripponpete, Hosanagar taluk, Shimoga district, tr krishnappa

ರಸ್ತೆಯಲ್ಲಿಯೇ ಶೀರ್ಷಾಸನ ಹಾಕಿದ TR ಕೃಷ್ಣಪ್ಪ | ತಲೆಕೆಳಗೆ ಮಾಡಿದರೂ ಬದಲಾಗದೆ ಮದ್ಯ ಮಾಫಿಯಾ
Protest against sale of liquor, Ripponpete, Hosanagar taluk, Shimoga district, tr krishnappa

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 3, 2025 ‌‌ 

ಒಂದು ಕಡೆ ಇಲಾಖೆಯೇ ಮದ್ಯ ಮಾರಾಟವನ್ನು ಹೆಚ್ಚು ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದೆ. ಇನ್ನೊಂದೆಡೆ ಇದರ ಪರಿಣಾಮ ಪ್ರತಿ ಮನೆಗಳಲ್ಲಿಯು ಆಗುತ್ತಿದೆ. ಸಾಕ್ಷಿ ಎಂಬಂತೆ ಪ್ರತಿನಿತ್ಯ 112 ಸಹಾಯವಾಣಿಗೆ ಕುಡುಕ ಗಂಡ, ತಂದೆ, ತಮ್ಮ, ಮೈದುನ, ಮಗನ ವಿಚಾರವಾಗಿ ನೂರಾರು ಕರೆಗಳು ಬರುತ್ತಿವೆ. ಅದರಲ್ಲಿಯು ಮಲೆನಾಡ ಒಳಬಾಗದ ಹಳ್ಳಿಗಳಲ್ಲಿ ಮದ್ಯ ಮಾರಾಟದ ಹಾವಳಿ ತೀರಾ ಊರವರನ್ನೆ ಬೆದರಿಸುವ ಮಟ್ಟಕ್ಕೆ ಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆ ದಿನ ಹೊಸನಗರದ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ರಿಪ್ಪನ್ ಪೇಟೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. 

 

ಸುತ್ತಮುತ್ತಲಿನ ಗ್ರಾಮದ ಹೆಣ್ಣುಮಕ್ಕಳೆಲ್ಲಾ ಒಟ್ಟಾಗಿ ಇಲ್ಲಿನ ವಿನಾಯಕ ವೃತ್ತದಲ್ಲಿ ಬ್ಯಾನರ್‌ ಹಿಡಿದು ಅಂಗಡಿಗಳಲ್ಲಿಯು ಮದ್ಯ ಮಾರಾಟ ಮಾಡುವುದನ್ನ ಬಂದ್‌ ಮಾಡಿ ಎಂದು ಕೂಗಿ ಕೂಗಿ ಹೇಳಿದರು. ಅಬಕಾರಿ ಇಲಾಖೆಯ ಅಧಿಕಾರಿಗೆ ಮನವಿ ಸಲ್ಲಿಸಿ ಒಂದೋ ನೀವು ಕ್ರಮ ತಗಳಿ, ಇಲ್ಲಾ ನಾವೇ ತಗತೀವಿ ಎಂದು ಎಚ್ಚರಿಸಿದರು. ಈ ನಡುವೆ ಟಿಆರ್ ಕೃಷ್ಣಪ್ಪಣ್ಣ ಕಾಲು ಮೇಲೆ ಮಾಡಿ ತಲೆ ಕೆಳಗೆ ಮಾಡಿ ನಿಂತು ವ್ಯವಸ್ಥೆ ತಲೆಕೆಳಗಾಗಿದೆ ಎಂಬಂತೆ ಪ್ರತಿಭಟನೆ ನಡೆಸಿದರು.

 

ಈ ಭಾಗದಲ್ಲಿ ಹಳ್ಳಿ ಹಳ್ಳಿಗಳ ಚಿಲ್ಲರೆ ದಿನಸಿ ಅಂಗಡಿಗಳಲ್ಲಿ ಹಾಗೂ ಮನೆಗಳಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುವಾಗುತ್ತಿದೆ. ಪರಿಣಾಮ ಹಗಲು ರಾತ್ರಿ ಎನ್ನದೆ, ಹಳ್ಳಿಗಳಲ್ಲಿ ಅಮಲಿನ ಮಂದಿಯ ಸಮಸ್ಯೆ ಜಾಸ್ತಿಯಾಗುತ್ತಿದೆ. ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಜನರು ದಿನಸಿ ಬಿಟ್ಟು, ಮದ್ಯಕ್ಕೆ ಬೇಕಿರುವ ಸ್ನ್ಯಾಕ್ಸ್‌ ಮಾರಲು ನಿಂತಿದ್ದಾರೆ. ಇಲ್ಲಿ ಕುಡಿದು ಬರುವ ಮಂದಿ ಮನೆಯಲ್ಲಿ ಗಲಾಟೆ ಮಾಡಿ ಮನೆ ಮಂದಿ ನೆಮ್ಮದಿ ಹಾಳು ಮಾಡುವುದಷ್ಟೆ ಅಲ್ಲದೆ, ಮಕ್ಕಳ ಓದಿಗೂ ಪಿರಿಪಿರಿ ಮಾಡುತ್ತಾರೆ ಎಂಬುದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹೆಂಗಸರ ಅಳಲು. 

 

ಅಂಗಡಿಗಳಲ್ಲಿ ಮದ್ಯ ಮಾರುವಂತಿಲ್ಲ. ಆದರೆ ಅದನ್ನ ಮಾರದಂತೆ ತಡೆಯವ ಕೆಲಸ ಅಬಕಾರಿ ಇಲಾಖೆ ಮಾಡೋದಿಲ್ಲ.ಪೊಲೀಸ್‌ ಇಲಾಖೆಗೆ ಇವೆಲ್ಲ ಕಾಣುತ್ತಿಲ್ಲ ಎಂದು ಆರೋಪಿಸ್ತಿದ್ದ ಪ್ರತಿಭಟನಕಾರರು, ಅಂಗಡಿಗಳ  ಬಳಿ ಹೋಗಿ ಮದ್ಯ ಮಾರಾಟ ಮಾಡಬೇಡಿ ಎಂದರೆ, ಏನ್‌ ಮಾಡ್ಕೊತ್ತೀರೋ ಮಾಡಿ, ಎಂದು ಬೆದರಿಸುತ್ತಾರೆ ಎಂದು ದೂರಿದರು. ಹಾಗಾಗಿ ಒಬ್ಬೊಬ್ಬರೆ ಮಾತನಾಡಿದರೇ ಪರಿಹಾರ ಸಿಗದು ಎಂದು ಒಗ್ಗಟ್ಟಾಗಿ ಪ್ರತಿಭಟನೆಗೆ ಇಳಿದಿದ್ದಾರೆ. 

 

ಇನ್ನೂ ಕೃಷ್ಣಪ್ಪಣ್ಣ ತಲೆಕೆಳಗೆ ಮಾಡಿ ನಿಂತರೂ ಇದೆಲ್ಲಾ ಸರಿ ಹೋಗಲ್ಲ ಕಣ್ರಿ ತಾವೇ ನಡು ರೋಡಲ್ಲಿ ಶಿರಶಾಸನ ಹಾಕಿ ನಿಂತು ಬಿಟ್ಟಿದ್ದರು. ಇದು ವ್ಯವಸ್ಥೆಯ ಲೋಪಕ್ಕೆ ಹಿಡಿದ ಕನ್ನಡಿಯಾಗಿತ್ತು. 

 

SUMMARY | Protest against sale of liquor in Ripponpete, Hosanagar taluk, Shimoga district

 

KEY WORDS | Protest against sale of liquor, Ripponpete, Hosanagar taluk, Shimoga district, tr krishnappa