ಟ್ರೈನಿಂಗ್ ಮುಗಿಸಿ SP ಕಚೇರಿಗೆ ರಿಪೋರ್ಟ್ ಮಾಡಲು ಬರುತ್ತಿದ್ದ IPS ಅಧಿಕಾರಿ ಸಾವು
Probationary IPS officer Harshvardhan, who was about to take charge as DYSP after completing IPS training, died in an accident
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 2, 2024
ಐಪಿಎಸ್ ಟ್ರೈನಿಂಗ್ ಮುಗಿದು DYSP ಆಗಿ ಅಧಿಕಾರ ಸ್ವೀಕರಿಸಿಬೇಕಿದ್ದ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಹರ್ಷವರ್ಧನ್ ಎಂಬವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಟ್ರೈನಿಂಗ್ ಮುಗಿಸಿದ ಅವರು ಡಿವೈಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಬೇಕಿತ್ತು. ಇದರ ನಡುವೆ ಹಾಸನ ಬಳಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಮೈಸೂರಿನಲ್ಲಿರುವ ಕರ್ನಾಟಕದ ಪೊಲೀಸ್ ಅಕಾಡೆಮಿಯಲ್ಲಿ ಟ್ರೈನಿಂಗ್ ಮುಗಿಸಿದ್ದ ಹರ್ಷವರ್ಧನ್ ರವರು ಐಜಿಪಿ ಬೋರಲಿಂಗಯ್ಯ ಬಳಿ ರಿಪೋರ್ಟ್ ಮಾಡಿಕೊಂಡಿದ್ದರು. ಟ್ರೈನಿಂಗ್ ಮುಗಿಸಿದ್ದ ಅವರು ಇವತ್ತು ಡಿವೈಎಸ್ಪಿ ಆಗಿ ಚಾರ್ಜ್ ತೆಗೆದುಕೊಳ್ಳಬೇಕಿತ್ತು. ನಿನ್ನೆದಿನ ಆಕ್ಸಿಡೇಂಟ್ ಆಗಿದೆ.
ಮೈಸೂರಿನಿಂದ ಹಾಸನ ಎಸ್‌ಪಿ ಕಚೇರಿಗೆ ಹೊರಟಿದ್ದ ಅವರು ಅಲ್ಲಿ ರಿಪೋರ್ಟ್ ಮಾಡಿಕೊಳ್ಳಬೇಕಿತ್ತು. ಈ ನಡುವೆ ಹಾಸನದ ಬಳಿಯಲ್ಲಿ ಟಯರ್ ಸ್ಫೋಟಗೊಂಡು ಹರ್ಷವರ್ಧನ್ ಪ್ರಯಾಣಿಸುತ್ತಿದ್ದ ಜೀಪ್ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಹರ್ಷವರ್ಧನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮೂಲತಃ ಬಿಹಾರ ಮೂಲದ ಹರ್ಷವರ್ಧನ್ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ವಾಸವಾಗಿದ್ದರು. ಮಧ್ಯಪ್ರದೇಶದ ಐಇಟಿಯಲ್ಲಿ ಡಿಎವಿಇ ಎಂಜಿನಿಯರಿಂಗ್ ಪದವಿ ಮಾಡಿದ್ದರು. 2022-23 ರ ಐಪಿಎಸ್ ಬ್ಯಾಚ್‌ನಲ್ಲಿ ತೇರ್ಗಡೆ ಹೊಂದಿ ಕರ್ನಾಟಕ ಕೇಡರ್‌ನಲ್ಲಿ ರಾಜ್ಯಕ್ಕೆ ಆಯ್ಕೆಯಾಗಿದ್ದರು.
SUMMARY | Probationary IPS officer Harshvardhan, who was about to take charge as DYSP after completing IPS training, died in an accident.
KEY WORDS | Probationary IPS officer Harshvardhan, IPS training,