ಕಾಳುಮೆಣಸಿಗೆ ಕಾಯಿಲೆ, ಒಣಮೆಣಸಿಗೆ ಅಗ್ಗದ ಆಘಾತ | ಲಾಭ ಯಾರಿಗೆ, ನಷ್ಟ ಯಾರಿಗೆ?| ಕೃಷಿ ಸುದ್ದಿ

Prices of dried chilies fall, fear of disease in black pepper

ಕಾಳುಮೆಣಸಿಗೆ ಕಾಯಿಲೆ, ಒಣಮೆಣಸಿಗೆ ಅಗ್ಗದ ಆಘಾತ | ಲಾಭ ಯಾರಿಗೆ, ನಷ್ಟ ಯಾರಿಗೆ?| ಕೃಷಿ ಸುದ್ದಿ
Prices of dried chilies fall, fear of disease in black pepper

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 26, 2025 ‌‌ 

ಕೃಷಿ ಮಾರುಕಟ್ಟೆಗಳಲ್ಲಿ ಹಲವು ವಿಚಾರಗಳು ನಡೆಯುತ್ತಿದ್ದು, ಸದ್ಯ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯ ಸುದ್ದಿ ಗ್ರಾಹಕರಿಗೆ ಸಂತೋಷ ನೀಡುತ್ತಿದ್ದರೇ ರೈತರಿಗೆ ಕಸಿವಿಸಿ ತಂದಿಟ್ಟಿದೆ. ಸದ್ಯ ಬಳ್ಳಾರಿ ಸೇರಿದಂತೆ ಪ್ರಮುಖ ಒಣ ಮೆಣಸಿನಕಾಯಿ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಮೆಣಸು ಬರುತ್ತಿದೆ. ಇದರ ಬೆನ್ನಲ್ಲೆ ಮಾರುಕಟ್ಟೆಗಳಲ್ಲಿ ಬೆಲೆ ಕುಸಿಯುತ್ತಿದೆ.  ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹9 ಸಾವಿರ ರೂಪಾಯಿಯಿಂದ ಹಿಡಿದು ₹15 ಸಾವಿರ ರೂಪಾಯಿ ಬೆಲ ಇದೆ. ಕಳೆದ ವರ್ಷ 20-25 ಸಾವಿರ ರೂಪಾಯಿ ಇತ್ತು. 



ಕಾಳುಮೆಣಸಿಗೆ ಸೊರಗು ರೋಗ | ಶಿವಮೊಗ್ಗ ಜಿಲ್ಲೆಯಲ್ಲಿ ಕಾಳುಮೆಣಸು ಬೆಳೆಗೆ ಈ ಸಲ ರೋಗ ಕಾಣಿಸಿಕೊಂಡಿದೆ. ಹಾಗಾಗಿ ರೈತರಿಗೆ ಈ ವರ್ಷ ಲಾಭವಿಲ್ಲದಂತಾಗಿದೆ. ಸೊರಗು ರೋಗ ಕಾಳುಮೆಣಸಿಗೆ ವ್ಯಾಪಿಸಿದ್ದು, ಔಷಧಕ್ಕೆ ರೋಗ ಹೋಗುತ್ತಿಲ್ಲ. ಹೊಸನಗರ ಭಾಗದಲ್ಲಿ ರೋಗದಿಂದಾಗಿ ಕಾಳು ಮೆಣಸಿನ ಬಳ್ಳಿಗಳು ಒಣಗಿ ಸಾಯುತ್ತಿವೆ. ಮೇಲಾಗಿ ಈ ಸಲ ಕಾಳುಮೆಣಸಿನ ದರವೂ ಸಹ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದ ಕೆಜಿಗೆ ನೂರು ರೂಪಾಯಿಯಷ್ಟು ದರ ಕಡಿಮೆಯಾಗಿದೆ. 

  

SUMMARY |  Prices of dried chilies fall, fear of disease in black pepper

KEY WORDS | Prices of dried chilies fall, fear of disease in black pepper