ನದಿಯಲ್ಲಿ ಬಿದ್ದವನನ್ನ ರಕ್ಷಿಸಿದ ತೀರ್ಥಹಳ್ಳಿ ಪೊಲೀಸ್! ನಡೆದಿದ್ದೇನು?
An unidentified man who fell into a river in Thirthahalli was rescued by the police and his life was saved.
SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 18, 2024
ತೀರ್ಥಹಳ್ಳಿ| ನದಿಗೆ ಬಿದ್ದ ಅನಾಮದೇಯ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿ ಜೀವ ಉಳಿಸಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ಅನಾಮದೇಯ ವ್ಯಕ್ತಿಯೊಬ್ಬರು ಸುಂಕದಹೊಳೆ ಸಮೀಪದಲ್ಲಿ ನದಿಗೆ ಬಿದ್ದಿದ್ದರು. ಈ ಬಗ್ಗೆ ಇಂದು 112 ಪೊಲೀಸರಿಗೆ ಯಾರೋ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ ಕರೆಗೆ ಸ್ಫಂದಿಸಿದ ಸಿಬ್ಬಂದಿ ಲೋಕೇಶ್ ಹಾಗೂ ಸಾಧತ್ ಸ್ಥಳಕ್ಕೆ ದೌಡಾಯಿಸಿ ನದಿಯಲ್ಲಿ ಮುಳುಗಿದ್ದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ನಂತರ ಆಂಬುಲೆನ್ಸ್ ಗೆ ಫೊನ್ ಮಾಡಿದಾಗ ಆಂಬುಲೆನ್ಸ್ ಬೇರೆ ಕಡೆ ಇರುವುದಾಗಿ ಹೇಳಿದ ಕಾರಣ 112 ವಾಹದಲ್ಲೇ ವ್ಯಕ್ತಿಯನ್ನು ಕರೆದುಕೊಂಡು ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
SUMMARY| An unidentified man who fell into a river in Thirthahalli was rescued by the police and his life was saved.
KEYWORDS| Thirthahalli, police, news, kannadanews,