ಪಾರ್ಕಿಂಗ್‌ ವಿಚಾರವಾಗಿ ಜಗಳ, ಓರ್ವ ಸಾವು | ವಿಡಿಯೋ ವೈರಲ್‌

There was a fight between the neighbours over parking and the fight has now ended in a murder.

ಪಾರ್ಕಿಂಗ್‌ ವಿಚಾರವಾಗಿ ಜಗಳ, ಓರ್ವ ಸಾವು | ವಿಡಿಯೋ ವೈರಲ್‌
One killed in clash over parking

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 13, 2025

ಪಂಜಾಬ್‌ | ದೇಶದಾದ್ಯಂತ ಪಾರ್ಕಿಂಗ್‌ ವಿಚಾರವಾಗಿ ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ  ಜಗಳಗಳು ನಡೆಯುತ್ತಲೇ ಇರುತ್ತವೆ. ಈ ಹಿಂದೆ ಇದೇ ಪಾರ್ಕಿಂಗ್‌ ವಿಚಾರವಾಗಿ “ಪಾರ್ಕಿಂಗ್‌” ಎಂಬ ಹೆಸರಿನ ಒಂದು ಸಿನಿಮಾ ಸಹ ಬಂದಿತ್ತು. ಆ ಸಿನಿಮಾದಲ್ಲಿ ಪಾರ್ಕಿಂಗ್‌ ಎಂಬುವುದು ಮನುಷ್ಯರ ನಡುವೆ ಯಾವರೀತಿ ದ್ವೇಷಕ್ಕೆ ಕಾರಣವಾಗುತ್ತದೆ. ಅದರಿಂಗುವ ಪರಿಣಾಮಗಳೇನು ಎಂಬುವುದರ ಬಗ್ಗೆ ಸಂಪೂರ್ಣವಾಗಿ ತಿಳಿಸಲಾಗಿತ್ತು. ಇದೀಗ ಪಂಜಾಬ್‌ನ ಮೊಹಾಲಿ ಎಂಬಲ್ಲಿ ಪಾರ್ಕಿಂಗ್‌ ವಿಚಾರವಾಗಿ ನೆರೆಹೊರೆಯವರ ನಡುವೆ ಜಗಳವಾಗಿದ್ದು, ಆ ಜಗಳ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ. ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಆವಿಡಿಯೋಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಏನಿದು ಘಟನೆ

ಪಂಜಾಬ್‌ನ ಮೊಹಾಲಿಯಲ್ಲಿ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವಿಜ್ಙಾನಿ ಅಭಿಷೇಕ್‌ ಸ್ವರ್ಣಕರ್‌ ಎಂಬುವವರ ಬೈಕ್‌ ಬಳಿ ನೆರೆಹೊರೆಯರು ನಿಂತಿದ್ದರು. ಈ ವೇಳೆ ಅಭಿಷೇಕ್‌ ಸ್ವರ್ಣಕರ್‌ ತಮ್ಮ ಬೈಕ್‌ನ್ನು ತೆಗೆಯಲು ಬಂದಿದ್ದಾರೆ. ಆವೇಳೆ ನೆರೆಹೊರೆಯರು ಅಭಿಷೇಕ್‌ ಸ್ವರ್ಣಕರ್‌ರವರನ್ನು ತಳ್ಳಿ ಏಕಾಏಕಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅಭಿಷೇಕ್‌ ಈ ಹಲ್ಲೆಯಿಂದ ತೀವೃ ಗಾಯಗೊಂಡಿದ್ದರು. ಅವರನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಿಲಾದರೂ ಸಹ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.  ಈ ಘಟನೆ ಪಾರ್ಕಿಂಗ್‌ ವಿಚಾರವಾಗಿಯೇ ನಡೆದಿದೆ ಎಂದು ಹಲವು ರಾಷ್ಟ್ರೀಯ  ಮಾದ್ಯಮಗಳಲ್ಲಿ ಪ್ರಸಾರವನ್ನು ಮಾಡಲಾಗಿದೆ.

ವಿಜ್ಞಾನಿಯ ಕುಟುಂಬವು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ವಿವರವಾದ ತನಿಖೆಯನ್ನು ಪೊಲೀಸ್‌ ಇಲಾಖೆ ಆರಂಭಿಸಿದೆ.

SUMMARY | There was a fight between the neighbours over parking and the fight has now ended in a murder.

KEYWORDS | parking, murder, viral video, punjab,