Old Town Police Station police | ಓಲ್ಡ್‌ ಟೌನ್‌ ಪೊಲೀಸರ ಕಾರ್ಯಾಚರಣೆ | ಯಕ್ಸಿನಾ ಕಾಲೋನಿಯ ಇಬ್ಬರು ಅರೆಸ್ಟ್‌

Old Town Police Station police arrested two suspects, Syed Hasan and Syed Irfan, and recovered the stolen money.

Old Town Police Station police  |  ಓಲ್ಡ್‌ ಟೌನ್‌ ಪೊಲೀಸರ ಕಾರ್ಯಾಚರಣೆ | ಯಕ್ಸಿನಾ ಕಾಲೋನಿಯ ಇಬ್ಬರು ಅರೆಸ್ಟ್‌
Old Town Police Station police

SHIVAMOGGA | MALENADUTODAY NEWS | Jul 9, 2024  ಮಲೆನಾಡು

ದಿನಾಂಕ: 17-06-2024 ರಂದು ರಾತ್ರಿ ಯಾರೋ ಕಳ್ಳರು ಭದ್ರಾವತಿ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಓಎಸ್ಎಂ ರಸ್ತೆಯ ಮಂಜುನಾಥ ಆಟೋ ಸ್ಪೇರ್ಸ್ ಅಂಗಡಿಯ ರೋಲಿಂಗ್ ಶೆಟರ್ ನ ಲಾಕ್ ಅನ್ನು  ಮೀಟಿ ತೆಗೆದು ಒಳಗೆ ಹೋಗಿ ಡ್ರಾ ನಲ್ಲಿ ಇಟ್ಟಿದ್ದ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಹಿನ್ನೆಲೆಯಲ್ಲಿ ನೀಡಿದ ದೂರಿನ ಮೇರೆಗೆ ಹಳೇನಗರ ಪೊಲೀಸ್ ಠಾಣೆಯಲ್ಲಿ  ಕಲಂ 457, 380 ಐಪಿಸಿ ಅಡಿಯಲ್ಲಿ ಕೇಸ್‌ ದಾಖಲಾಗಿತ್ತು. ಅಲ್ಲದೆ ಈ ಸಂಬಂಧ  ಶರಣಪ್ಪ ಹೆಚ್, ಪಿಎಸ್ಐ ಹಳೆನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳಾದ ಹೆಚ್ ಸಿ ಹಾಲಪ್ಪ, ಪಿಸಿ ನಾರಾಯಣ ಸ್ವಾಮಿ, ಮೌನೇಶ್ ಶೀಕಲ್, ಚಿಕ್ಕಪ್ಪ ಎಸ್ ಮತ್ತು ಪ್ರವೀಣ್ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು. 

ಓಲ್ಡ್‌ ಟೌನ್‌ ಪೊಲೀಸ್‌ ಠಾಣೆ ಭದ್ರಾವತಿ 

ಇದೀಗ ತನಿಖಾ ತಂಡ  ದಿನಾಂಕಃ 08-07-2024 ರಂದು ಪ್ರಕರಣದ ಆರೋಪಿಗಳನ್ನ ಬಂಧಿಸಿ ಆರೋಪಿತರಿಂದ ಪ್ರಕರಣದಲ್ಲಿ ಕಳ್ಳತನ ಮಾಡಿಕೊಂಡು ಹೋದ ನಗದು ಹಣ ರೂ 40,000/-  ಗಳನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ. 

ಬಂಧಿತ ಆರೋಪಿಗಳು 

1) ಸೈಯದ್ ಹಸೇನ್ @ ಜಂಗ್ಲಿ, 19 ವರ್ಷ, ಯಕಿನ್ಸಾ ಕಾಲೋನಿ ಭದ್ರಾವತಿ 

2) ಸೈಯದ್ ಇರ್ಫಾನ್ @ ಕಾಲು, 21 ವರ್ಷ, ಯಕಿನ್ಸಾ ಕಾಲೋನಿ ಭದ್ರಾವತಿ ಇವರನ್ನು ದಸ್ತಗಿರಿ ಮಾಡಿ,  

Old Town Police Station police arrested two suspects, Syed Hasan and Syed Irfan, and recovered the stolen money.

ಇದನ್ನ ಸಹ ಓದಿ : ಬೆಂಗಳೂರಿಗೆ ಹೋಗುತ್ತಿದ್ದ ಬಸ್‌ ಕರೆಂಟ್‌ ಕಂಬಕ್ಕೆ ಡಿಕ್ಕಿ | ವಾಹನದ ಮೇಲೆ ...