ಭದ್ರಾವತಿ ವಿಚಾರದಲ್ಲಿ ನೋ ಕಾಂಪ್ರಮೈಸ್ | ಮಧು ಬಂಗಾರಪ್ಪ ಹೇಳಿದ್ದೇನು 

Education Minister Madhu Bangarappa reacted to the incident that took place during illegal mining at Seege Bagi in Bhadravathi.

ಭದ್ರಾವತಿ ವಿಚಾರದಲ್ಲಿ ನೋ ಕಾಂಪ್ರಮೈಸ್ | ಮಧು ಬಂಗಾರಪ್ಪ ಹೇಳಿದ್ದೇನು 
No compromise on Bhadravathi issue

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 12, 2025

ಹೊಸನಗರ | ನಮ್ಮ ಅಧಿಕಾರಿಗಳನ್ನು ರಕ್ಷಣೆ ಮಾಡುವುದು ನಮ್ಮ ಜವಬ್ದಾರಿ ಅದರಲ್ಲೂ ಮಹಿಳಾ ಅಧಿಕಾರಿಗೆ ಮುಖ್ಯವಾಗಿ ರಕ್ಷಣೆ ಕೊಡಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಭದ್ರಾವತಿಯ ಸೀಗೇ ಬಾಗಿಯಲ್ಲಿ ಅಕ್ರಮ ಗಣಿಗಾರಿಕೆ ಸಂದರ್ಭದಲ್ಲಿ ನಡೆದ ಘಟನೆ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಚಾರವಾಗಿ ಎಸ್ಪಿ ಅವರಿಗೆ ಫೋನ್ ಮಾಡಿ ಕಾನೂನು ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಈಗಾಗಲೇ ಈ ಕೇಸ್‌ನಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ನಡೆದ ಬಳಿಕ ಕಾನೂನು ಬದ್ದವಾಗಿ ಕ್ರಮವನ್ನು ತೆಗೆದುಕೊಳ್ಳುತ್ತಾರೆ. ಈ ಕೃತ್ಯವನ್ನೂ ಯಾರೇ ಪ್ರಭಾವಿಗಳು ಮಾಡಿದ್ದರೂ ಅದರಲ್ಲಿ ಕಾಂಪ್ರಮೈಸ್‌ ಆಗುವ ಪಶ್ನೆಯೇ ಇಲ್ಲ ಎಂದರು.

SUMMARY | Education Minister Madhu Bangarappa reacted to the incident that took place during illegal mining at Seege Bagi in Bhadravathi.

KEYWORDS |  Education Minister, Madhu Bangarappa, Seege Bagi,   Bhadravathi,