ನೈಟ್‌ ಲ್ಯಾಂಡಿಂಗ್‌ ಸಂಬಂಧ ಬಿಗ್‌ ಅಪ್‌ಡೇಟ್ಸ್‌ | ಶಿವಮೊಗ್ಗ ವಿಮಾನ ನಿಲ್ದಾಣ ರೆಡಿ

night landing work at Shivamogga airport, Night landing will begin at Shivamogga airport soon

ನೈಟ್‌ ಲ್ಯಾಂಡಿಂಗ್‌ ಸಂಬಂಧ ಬಿಗ್‌ ಅಪ್‌ಡೇಟ್ಸ್‌ |  ಶಿವಮೊಗ್ಗ ವಿಮಾನ ನಿಲ್ದಾಣ ರೆಡಿ
night landing work at Shivamogga airport, Night landing will begin at Shivamogga airport soon

SHIVAMOGGA | MALENADUTODAY NEWS | ಮಲೆನಾಡು ಟುಡೆ  

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್‌ ಲ್ಯಾಂಡಿಂಗ್‌ ಕಾಮಗಾರಿ  ಬಹುತೇಕ ಪೂರ್ಣಗೊಂಡಿದೆ. ಸುಮಾರು ಎಂಟು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿ ಅಂತಿಮ ಘಟ್ಟ ತಲುಪಿದ್ದು, ಪೂರ್ಣಗೊಂಡ ಬಳಿಕ ಡಿಡಿಸಿಎ ಪರಿಶೀಲನೆ ನಡೆಸಲಿದೆ.

ಈ ಸಂಬಂಧ  ಕರ್ನಾಟಕ ರಾಜ್ಯ ಕೈಗಾರಿಕಾ ಹಾಗೂ ಮೂಲಸೌಕರ್ಯ ನಿಗಮ ಡಿಡಿಸಿಎಗೆ ಪ್ರಸ್ತಾವನೆ ಸಲ್ಲಿಸಲಿದೆ. ಇನ್ನೊಂದೆಡೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಮಧು ಬಂಗಾರಪ್ಪ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ಒದಗಿಸುವ ಸಲುವಾಗಿ ಸಿಎಂ ಸಿದ್ದರಾಮಯ್ಯರಿಗೆ ಮನವಿ ಮಾಡಲಾಗುವುದು ಎಂದಿದ್ದಾರೆ. 

ಅಂದುಕೊಂಡಂತೆ ನಡೆದ ಪಕ್ಷದಲ್ಲಿ ಕೆಲವೇ ದಿನಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್‌ ಲ್ಯಾಂಡಿಂಗ್‌ ಸೌಲಭ್ಯ ಸಿಗಲಿದೆ. ಇದರಿಂದಾಗಿ ರಾತ್ರಿ ವಿಮಾನ ಸಂಚಾರ ಆರಂಭವಾಗುವ ಸಾಧ್ಯತೆಗಳಿವೆ. ಅಲ್ಲದೆ ಮಿಸ್ಟ್‌ ನಿಂದಾಗಿ ಹಗಲು ಹೊತ್ತಿನಲ್ಲಿ ಎದುರಾಗುತ್ತಿದ್ದ ವಿಮಾನಗಳ ಲ್ಯಾಂಡಿಂಗ್‌ ಸಮಸ್ಯೆ ಬಗೆಹರಿಯಲಿದೆ.

SUMMARY |  night landing work at Shivamogga airport is nearing completion, Night landing will begin at Shivamogga airport soon

KEY WORDS |‌  night landing work at Shivamogga airport, Night landing will begin at Shivamogga airport soon