ನಾಗ ಚೈತನ್ಯ ಹಾಗೂ ಶೋಬಿತಾರ ಮದುವೆ ಆಲ್ಬಂ ಗೆ 50 ಕೋಟಿ ಆಫರ್
Naga Chaitanya and Sobhita's wedding will take place on December 4 in Hyderabad.
SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 27, 2024
ನಟ ನಾಗ ಚೈತನ್ಯ ಹಾಗೂ ಶೋಭಿತಾರ ವಿವಾಹ ಇದೇ ಡಿಸೆಂಬರ್ 4 ರಂದು ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ನೆರವೇರಲಿದೆ.
ಈ ಹಿಂದೆ ನಟಿ ಸಮಂತಾರೊಡನೆ ನಾಗಚೈತನ್ಯ ವಿಚ್ಛೇದನ ಪಡೆದುಕೊಂಡಿದ್ದರು. ಅದಾದ ನಂತರ ಶೋಭಿತರೊಡನೆ ಡೇಟ್ ಮಾಡುತ್ತಿದ್ದಾರೆ ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತಿತ್ತು. ಕಳೆದ ತಿಂಗಳು ಈ ಜೋಡಿ ಎಂಗೇಜ್ಮೆಂಟ್ ಆಗುವುದರ ಮೂಲಕ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿತ್ತು.
ಇದೀಗ ಡಿಸೆಂಬರ್ 4 ರಂದು ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ಈ ಜೋಡಿ ವಿವಾಹವಾಗುತ್ತಿದ್ದಾರೆ. ಈ ನಡುವೆ ವಿಶೇಷ ಅಂದರೆ ಈ ಜೋಡಿಯ ವಿವಾಹದ ಆಲ್ಬಂ ಅನ್ನು ಪ್ರಸಾರ ಮಾಡಲು ನೆಟ್‌ಪ್ಲಿಕ್ಸ್ ನಾಗಚೈತನ್ಯರಿಗೆ 50 ಕೋಟಿ ಆಫರ್ ನೀಡಿದೆ ಎನ್ನಲಾಗಿದೆ.
ಇತ್ತೀಚೆಗೆ ಒಟಿಟಿ ಪ್ಲಾಟ್ ಪಾರಂ ಗಳು ಸ್ಟಾರ್ ಗಳ ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳನ್ನ ತಮ್ಮ ಪ್ಲಾಟ್‌ಫಾರಮ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದು, ಅವುಗಳನ್ನ ಕರ್ಮಶೀಯಲ್ ಆಗಿ ಬಳಸಿಕೊಳ್ಳುತ್ತಿವೆ. ಈ ಹಿಂದೆ ನಯನತಾರಾ ಹಾಗು ವಿಘ್ನೇಶ್ ಅವರ ಮದುವೆಯ ವಿಡಿಯೋ ಆಲ್ಬಂ ಅನ್ನು ಪ್ರಸಾರ ಮಾಡಲು ನೆಟ್‌ಪ್ಲಿಕ್ಸ್ ಬರೊಬ್ಬರಿ 25 ಕೋಟಿ ನೀಡಿತ್ತು.ಇದೀಗ ನಾಗಚೈತನ್ಯ ಹಾಗು ಶೋಭಿತಾ ರ ಮದುವೆಗೆ ನೆಟ್‌ಪ್ಲಿಕ್ಸ್ 50 ಕೋಟಿ ಆಫರ್ ನೀಡಿದೆ.
ಫಿಲ್ಮ್ಸ್ ಕ್ರಿಟಿಕ್ ಹಾಗೂ ಟ್ರೇಡ್ ಎಕ್ಸ್‌ಪರ್ಟ್ ಮನೋಬಾಲನ್ ವಿಜಯಬಾಲನ್ ತನ್ನ ಎಕ್ಸ್ ಖಾತೆಯಲ್ಲಿ ಈ ಜೋಡಿಯ ಮದುವೆಯನ್ನು ನೆಟ್‌ಫ್ಲಿಕ್ ಸ್ಟ್ರೀಮಿಂಗ್ ಮಾಡುವ ವಿಷಯವನ್ನು ಹಂಚಿಕೊಂಡಿದ್ದಾರೆ.
SUMMARY | Naga Chaitanya and Sobhita's wedding will take place on December 4 in Hyderabad.
KEY WORDS | Naga Chaitanya, Sobhita, wedding, netflix,