ಎಂಟು ನಕ್ಸಲರ ಪೈಕಿ ಓರ್ವನ ಎನ್‌ಕೌಂಟರ್‌, ಆರು ಮಂದಿ ಶರಣು | ಇನ್ನೊಬ್ಬ ನಕ್ಸಲ್‌ ಬಾಕಿ | ಯಾರು ಗೊತ್ತಾ

Naxal surrender Karnataka, six Naxals surrender along with Lata Mundagar, another Naxal has not surrendered, one Naxal is yet to surrender in Karnataka, Naxal Ravindra, Kote Honda Ravindra,

ಎಂಟು ನಕ್ಸಲರ ಪೈಕಿ ಓರ್ವನ ಎನ್‌ಕೌಂಟರ್‌, ಆರು ಮಂದಿ ಶರಣು | ಇನ್ನೊಬ್ಬ ನಕ್ಸಲ್‌ ಬಾಕಿ | ಯಾರು ಗೊತ್ತಾ
Naxal surrender Karnataka

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 10, 2025 ‌‌   ‌

ಲತಾ ಮುಂಡಗಾರು ಮತ್ತವರ ಟೀಂ ಶರಣಾಗತಿ ಬೆನ್ನಲ್ಲೆ ರಾಜ್ಯದಲ್ಲಿ ನಕ್ಸಲ್‌ರು ಉಳಿದಿಲ್ಲ ಎಂದೇ ಹೇಳಲಾಗುತ್ತಿದೆ. ಆದಾಗ್ಯು ಇನ್ನೊಬ್ಬ ನಕ್ಸಲ್‌ ಕರ್ನಾಟಕದವನು ಶರಣಾಗುವುದು ಬಾಕಿ ಇದೆ. ಆತನ ಬಗ್ಗೆ ಇದುವರೆಗೂ ಯಾವುದೆ ಸುಳಿವು ಸಿಕ್ಕಿಲ್ಲ. 

ಮಾಹಿತಿ ಪ್ರಕಾರ, ಕೇರಳದಿಂದ ರಾಜ್ಯಕ್ಕೆ ಬಂದವರ ಪೈಕಿ ಒಟ್ಟಾರೆ ಎಂಟು ಮಂದಿ ಇದ್ದರು ಎನ್ನಲಾಗಿತ್ತು. ಆ ಪೈಕಿ ವಿಕ್ರಂಗೌಡನನ್ನ ಪೊಲೀಸರು ಎನ್‌ಕೌಂಟರ್‌ ಮಾಡಿದ್ರು. ತದನಂತರ ಎರಡು ಸಲ ಎಎನ್‌ಎಫ್‌ಗೆ ಮುಖಾಮುಖಿಯಾದ ನಕ್ಸಲರ ತಂಡ ಬಹುತೇಕ ಭಯ ಹಾಗೂ ಮುಂದಿನ ಸ್ಥಿತಿಗತಿಯಿಂದಲೇ, ರಾಜ್ಯ ಸಂಘಟನೆಗಳ ಮುಖಂಡರ ಸಂಧಾನಕ್ಕೆ ಒಪ್ಪಿ ಸರ್ಕಾರದ ಮುಂದೆ ಶರಣಾಗಿತ್ತು. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಉತ್ತಮ ನಡೆಯನ್ನು ಇಟ್ಟು, ತಮ್ಮ ಸಮ್ಮುಖದಲ್ಲಿಯೇ ನಕ್ಸಲರನ್ನು ಶರಣಾಗಿಸಿಕೊಂಡಿದ್ದು, ಅವರ ಕಾನೂನು ಹೋರಾಟಕ್ಕೆ ವ್ಯವಸ್ಥೆಯ ಮಾನವೀಯ ನೆರವು ಸಿಗುವ ಸಾಧ್ಯತೆಯನ್ನು ಹೇಳಿತ್ತು. 

ಈ ನಡುವೆ ಶರಣಾದ ಆರು, ಎನ್‌ಕೌಂಟರ್‌ ಆದ ಓರ್ವ ಸೇರಿದಂತೆ ಏಳು ಜನರು ನಕ್ಸಲರ ಲೆಕ್ಕ ಸಿಕ್ಕಿದೆ, ಎಂಟರ ಪೈಕಿ ಮಿಸ್‌ ಆಗಿರುವ ಇನ್ನೊಬ್ಬ ನಕ್ಸಲ್‌ ಯಾರು ಎಂಬುದಕ್ಕೆ ಉತ್ತರ ಸಿಕ್ಕಿದೆಶೃಂಗೇರಿ ಮೂಲದ ರವೀಂದ್ರ ನಾಯ್ಕ ಸದ್ಯ ತಲೆಮರೆಸಿಕೊಂಡಿರುವ ನಕ್ಸಲ್‌. ರವೀಂದ್ರ ಅಲಿಯಾಸ್‌ ಹೋಟೆ ಹೊಂಡ ರವೀಂದ್ರ ಎಂಬಾತ ಇದುವರೆಗೂ ನಕ್ಸಲ್‌ ಶರಣಾಗತಿ ಸಮಿತಿಗಾಗಲಿ ಶಾಂತಿಗಾಗಿ ಹೋರಾಟ ವೇದಿಕೆಯ ಸಮಿತಿಗಾಗಲಿ ಸಂಪ‍ರ್ಕಕ್ಕೆ ಸಿಕ್ಕಿಲ್ಲ. ಬಹಿರಂಗವಾಗಿ ಈತ ಕಾಣಿಸಿಕೊಂಡಿದ್ದು 2007 ರಲ್ಲಿ ತೀರ್ಥಹಳ್ಳಿಯಲ್ಲಿ ನಡೆದ ಎಳ್ಳಾಮಾಸ್ಯೆಯ ಜಾತ್ರೆಯ ಸಂದರ್ಭದಲ್ಲಿ ಆಗ ನಕ್ಸಲ್‌ ಶ್ರೀಮತಿ ಜೊತೆ ಕಾಣಿಸಿಕೊಂಡಿದ್ದ ಈತ ಆ ಬಳಿಕ ಕಂಡಿಲ್ಲ. ಶ್ರೀಮತಿ ಈಗಾಗಲೇ ಶರಣಾಗಿದ್ದಾಳೆ. ಆದರೆ ರವೀಂದ್ರನ ಬಗ್ಗೆ ಮಾಹಿತಿ ಪೊಲೀಸ್‌ ಇಲಾಖೆಗೂ ಸ್ಪಷ್ಟವಾಗುತ್ತಿಲ್ಲ. 

ನಕ್ಸಲ್‌ ಶರಣಾಗತಿ ಸಮಿತಿ ಸದಸ್ಯರೊಬ್ಬರು ಟಿವಿ ಚಾನಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರವೀಂದ್ರ ಎಲ್ಲಿದ್ದಾನೋ ಎಂಬುದು ಗೊತ್ತಿಲ್ಲ, ಆತನಾಗಿಯೇ ನಮ್ಮ ಸಂಪರ್ಕಕ್ಕೆ ಸಿಗಬೇಕು. ಇವರನ್ನ ಸಂಪರ್ಕಿಸುವ ಬೇರೆ ವಿಧಾನಗಳಿಲ್ಲ.ಆದರೆ ಆತನ ಬಳಿಯಲ್ಲಿ ಯಾವುದೇ ಅಸ್ತ್ರಗಳಿಲ್ಲ ಎಂದಿದ್ಧಾರೆ. ಹೀಗಾಗಿ  ರವೀಂದ್ರ ಯಾವುದೇ ಸಶಸ್ತ್ರ ಹೋರಾಟ ನಡೆಸುವ ಸಾಧ್ಯತೆಗಳು ಕಡಿಮೆ. ಇನ್ನು ಕೆಲವು ಮಾಹಿತಿ ಪ್ರಕಾರ, ಈತ ಬೇರೆ ರಾಜ್ಯದಲ್ಲಿ ಅಜ್ಞಾತವಾಗಿ ಜೀವಿಸ್ತಿರುವ ಸಾಧ್ಯತೆಗಳಿವೆ ಎನ್ನಲಾಗುತ್ತದೆ. ಎಲ್ಲದರ ಜೊತೆಯಲ್ಲಿ ಇನ್ನು 10 ದಿನಲ್ಲಿ ಈತನೂ ಸಹ ಸೆರೆಂಡರ್‌ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

SUMMARY |  Naxal surrender Karnataka, six Naxals surrender along with Lata Mundagar, another Naxal has not surrendered, one Naxal is yet to surrender in Karnataka, Naxal Ravindra, Kote Honda Ravindra,

KEY WORDS |‌  Naxal surrender Karnataka, six Naxals surrender along with Lata Mundagar, another Naxal has not surrendered, one Naxal is yet to surrender in Karnataka, Naxal Ravindra, Kote Honda Ravindra,