unified pension scheme india | ರಾಷ್ಟ್ರೀಯ ಪಿಂಚಣಿ ಯೋಜನೆ ಬದಲು ಬರುತ್ತಿದೆ UPS | ಏನಿದು?

unified pension scheme india | ರಾಷ್ಟ್ರೀಯ ಪಿಂಚಣಿ ಯೋಜನೆ ಬದಲು ಬರುತ್ತಿದೆ ಏಕೀಕೃತ ಪಿಂಚಣಿ ಯೋಜನೆ unified pension scheme india | National Pension Scheme to be replaced by Unified Pension Scheme

unified pension scheme india | ರಾಷ್ಟ್ರೀಯ ಪಿಂಚಣಿ ಯೋಜನೆ ಬದಲು ಬರುತ್ತಿದೆ UPS | ಏನಿದು?
National Pension Scheme , Unified Pension Scheme , ರಾಷ್ಟ್ರೀಯ ಪಿಂಚಣಿ ಯೋಜನೆ, ಏಕಿಕೃತ ಪಿಂಚಣಿ ಯೋಜನೆ

SHIVAMOGGA | MALENADUTODAY NEWS | Aug 25, 2024 ಮಲೆನಾಡು ಟುಡೆ  

ಪಿಂಚಣಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) National Pension Scheme  ಬದಲು ಏಕೀಕೃತ ಪಿಂಚಣಿ ಯೋಜನೆಯನ್ನ (unified pension scheme india) ನ್ನು ಜಾರಿಗೆ ತರುವ ಸಂಬಂಧ ಕೇಂದ್ರ ಸರ್ಕಾರ ಸಂಪುಟ ಸಭೆಯಲ್ಲಿ ಪ್ರಸ್ತಾವನೆಗೆ ಅನುಮೋದನೆಯನ್ನು ನೀಡಿದೆ. 

ಏಕೀಕೃತ ಪಿಂಚಣಿ ಯೋಜನೆ  ಎಂದರೇ ಏನು?

ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ವಿವಿಧ ರಾಜ್ಯಗಳು ವಿರೋದಿಸಿದ್ದವು. ಈ ನಡುವೆ  ಪಿಂಚಣಿ ಯೋಜನೆಯ ಕುರಿತಾಗಿ ಕಳೆದ ವರ್ಷ ಹಣಕಾಸು ಕಾರ್ಯದರ್ಶಿ ಟಿ.ವಿ ಸೋಮನಾಥನ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಈ ವೇಳೆ  ರಾಷ್ಟ್ರೀಯ ಪಿಂಚಣಿ ಯೋಜನೆಯ ನಿಯಮಗಳಲ್ಲಿ ಅಗತ್ಯವಿದ್ದರೆ ಬದಲಾವಣೆಗೆ ಸೂಚಿಸಲಾಗಿತ್ತು. ಇದೀಗ ಬದಲಾವಣೆಯನ್ನ ತರಲಾಗಿದ್ದು  unified pension scheme india ಜಾರಿಗೆ ತರಲಾಗುತ್ತಿದೆ. ಈ ಸ್ಕೀಂ 2025 ಏಪ್ರಿಲ್‌ 1 ರಿಂದ ಜಾರಿಗೆ ಬರಲಿದೆ. 



unified pension scheme india ಲಾಭವೇನು?

2004 ರಿಂದ ಕೆಲಸಕ್ಕೆ ಸೇರಿದವರು ಎನ್‌ಪಿಎಸ್‌ ಯೋಜನೆಯ ಅಡಿಯಲ್ಲಿದ್ದವರು, ಅವರಿಗೆ ಈ ಯೋಜನೆ ಅನ್ವಯವಾಗಲಿದೆ 25 ವರ್ಷ ಸರ್ಕಾರಿ ನೌಕರಿಯಲ್ಲಿದ್ದವರಿ ಮೂಲ ವೇತನದ 50 % ಪಿಂಚಣಿ ಸಿಗಲಿದೆ ಎನ್ನಲಾಗುತ್ತಿದೆ. ಅಲ್ಲದೆ ಸರ್ಕಾರಿ ನೌಕರರು ನಿವೃತ್ತಿಯ ಹಿಂದಿನ 12 ತಿಂಗಳ ಸರಾಸರಿ ಮೂಲ ವೇತನದ ಕನಿಷ್ಠ ಶೇ 50ರಷ್ಟನ್ನು ಪಿಂಚಣಿಯಾಗಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಲಾಗಿದೆ. ಈ ಯೋಜನೆ  ಈಗಾಗಲೇ ನಿವೃತ್ತಿ ಹೊಂದಿದವರಿಗೆ ಮತ್ತು 2025ರ ಮಾರ್ಚ್ 31ರವರೆಗಿನ ಅವಧಿಯಲ್ಲಿ ನಿವೃತ್ತಿ ಹೊಂದಲಿರುವವರಿಗೆ ಅನ್ವಯವಾಗಲಿದೆ  




  ಇನ್ನಷ್ಟು ಸುದ್ದಿಗಳು