NU ಆಸ್ಪತ್ರೆ ಇನ್ಮುಂದೆ ಶಿವಮೊಗ್ಗ ಕಿಡ್ನಿ ಆಸ್ಪತ್ರೆ
NU Hospital has been renamed as Shivamogga Kidney Hospital.

SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 13, 2025
ಶಿವಮೊಗ್ಗ | ಶಿವಮೊಗ್ಗದ ಮಾಚೇನಹಳ್ಳಿ ಬಳಿ ಇರುವ ಎನ್ ಯು ಆಸ್ಪತ್ರೆಯ ಹೆಸರನ್ನು ಇನ್ಮುಂದೆ ಶಿವಮೊಗ್ಗ ಕಿಡ್ನಿ ಆಸ್ಪತ್ರೆ ಎಂದು ಮರುನಾಮಕರಣ ಮಾಡಲಾಗಿದೆ. ಎಂದು ಅಸೋಶಿಯೇಶನ್ ಮೆಡಿಕಲ್ ಡೈರೆಕ್ಟರ್ ಅಂಡ್ ಟ್ರಾನ್ಸ್ ಪ್ಲಾಂಟ್ ಪಿಸಷಿಯನ್ ಆದ ಡಾ ಪ್ರವೀಣ್ ಮಾಳವದೆ ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಆಸ್ಪತ್ರೆಯ ನೂತನ ಹೆಸರನ್ನು ಅನಾವರಣಗೊಳಿಸಿ ಮಾತನಾಡಿದ ಅವರು ಇಂದು ವಿಶ್ವ ಕಿಡ್ನಿ ದಿನ ಆದ್ದರಿಂದ ಇಂದು ಆಸ್ಪತ್ರೆಯ ಹೆಸರನ್ನು ಬದಲಿಸಲು ಸೂಕ್ತ ದಿನವೆನಿಸಿ ಆಸ್ಪತ್ರೆ ಯ ಹೆಸರನ್ನು ಬದಲಿಸುತ್ತಿದ್ದೇವೆ. ಎಷ್ಟೋ ಜನ ಸಾಮಾನ್ಯ ಜನರಿಗೆ ಎನ್‌ಯು ಆಸ್ಪತ್ರೆ ಎಂದರೆ ಕಿಡ್ನಿ ಆಸ್ಪತ್ರೆ ಎಂದು ಗೊತ್ತಾಗುವುದಿಲ್ಲ. ಆದ್ದರಿಂದ ನಮ್ಮ ಎನ್‌ಯು ಎಂಬ ಹೆಸರಿನ ಆಸ್ಪತ್ರೆಯನ್ನು ಶಿವಮೊಗ್ಗ ಆಸ್ಪತ್ರೆ ಎಂದು ಮರು ನಾಮಕರಣ ಮಾಡಿದ್ದೇವೆ. ನಮ್ಮ ಎನ್ ಯು ಆಸ್ಪತ್ರೆ ಕಳೆದ ಐದು ವರ್ಷಗಳಿಂದ ಹಲವಾರು ರೋಗಿಗಳಿಗೆ ಉತ್ತಮ ವಿಶ್ವದರ್ಜೆಯ ಚಿಕಿತ್ಸೆಯನ್ನು ನೀಡುತ್ತಾ ಬಂದಿದೆ ಎಂದರು
ಶಿವಮೊಗ್ಗ ಕಿಡ್ನಿ ಆಸ್ಪತ್ರೆಯು 24X7 ಲಭ್ಯವಿರುವ ವೈದ್ಯಕೀಯ ತೀವ್ರ ನಿಗಾ ಘಟಕ (ಎಂಐಸಿಯು) ಸೇವೆಯನ್ನು ಆರಂಭಿಸಿದ್ದು, ಸಮರ್ಥ ವೈದ್ಯರ ತಂಡವು ಎಲ್ಲಾ ಸಮಯದಲ್ಲಿಯೂ ರೋಗಿಗೆ ಅಗತ್ಯವಿರುವ ಸಮಗ್ರ ಚಿಕಿತ್ಸಾ ಸೇವೆಗಳನ್ನು ನೀಡಲು ಸಜ್ಜಾಗಿದೆ. ವಿಶ್ವ ಮೂತ್ರಪಿಂಡ ದಿನ-2025 ಮಾ. 13ರ ಪ್ರಯುಕ್ತ ಕಿಡ್ನಿ ಆರೋಗ್ಯಕ್ಕೆ ಸ೦ಬ೦ಧಿಸಿದ ಬದ್ಧತೆಯನ್ನು ಮೆರೆಯಲು ಆಸ್ಪತ್ರೆಯು ಸಿದ್ಧವಾಗಿದೆ. ಕಿಡ್ನಿ ಆರೋಗ್ಯ ಕುರಿತು ಕಾಳಜಿ ಮೂಡಿಸಲು ಆಸ್ಪತ್ರೆಯು ಮುಂದಾಗಿದ್ದು, ಅಗತ್ಯ ಆರೋಗ್ಯ ಸೇವೆಗಳು ಎಲ್ಲರಿಗೂ ದೊರೆಯುವಂತೆ ಮಾಡಲು ನಿರ್ಧರಿಸಿದೆ ಎಂದರು.
ರಕ್ತದ ಗುಂಪು ಹೊಂದಾಣಿಕೆಯಾಗದ (ಎಬಿಒ ಇನ್‌ಕಂಪ್ಯಾಟಿಬಲ್) ರೋಗಿಗಳಿಗೂ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈ ಮೂಲಕ ಕಿಡ್ನಿ ಕಾಳಜಿಯಲ್ಲಿ ನಮ್ಮ ಆಸ್ಪತ್ರೆಯು ಅತ್ಯಂತ ಕಾಳಜಿಯುತವಾಗಿ ಕೆಲಸ ಮಾಡುತ್ತಿದೆ. ಕಿಡ್ನಿ ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆಯನ್ನು ನೀಡುವುದು ನಮ್ಮಧೇಯವಾಗಿದೆ ಎಂದರು.
18 ಯಶಸ್ವಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್
ಏಪ್ರಿಲ್ 2023ರಿಂದ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆಯನ್ನು ಪ್ರಾರಂಭಿಸಿದ್ದು ಶಿವಮೊಗ್ಗ ಕಿಡ್ನಿ ಆಸ್ಪತ್ರೆಯು (ಮುಂಚಿನ ಎನ್ ಯು ಆಸ್ಪತ್ರೆ) ಈವರೆಗೆ 18 ಜನರ ಬಾಳಿಗೆ ದಾರಿದೀಪವಾಗಿದೆ. ಇದರಿಂದ ಮಲೆನಾಡು ಭಾಗದಲ್ಲಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮತ್ತು ಕಿಡ್ನಿ ಆರೈಕೆಯಲ್ಲಿ ಸುಧಾರಿತ ಚಿಕಿತ್ಸೆಯನ್ನು ನೀಡುವ ಮೂಲಕ ಕೊನೆಯ ಹಂತದ ಮೂತ್ರಪಿಂಡ ಕಾಯಿಲೆ ಹೊಂದಿರುವ ರೋಗಿಗಳಿಗೂ ಹೊಸ ಭರವಸೆಯನ್ನು ತುಂಬಿದೆ ಎಂದರು.
SUMMARY | NU Hospital has been renamed as Shivamogga Kidney Hospital.
KEYWORDS | NU Hospital, Shivamogga Kidney Hospital, shivamogga,