Muda case Siddaramaiah | ಸಿದ್ದರಾಮಯ್ಯರ ಪರ ಶಿವಮೊಗ್ಗ ಕಾಂಗ್ರೆಸ್ | ಆತ್ಮಹತ್ಯೆಯ ಸವಾಲ್ ಹಾಕಿದ ಮುಖಂಡ | ಪಾದಯಾತ್ರೆಗೆ ಮುಂದಾದ ಕಿಮ್ಮನೆ
siddaramaiah news |Muda case Siddaramaiah Shivamogga congress protest | ಶಿವಮೊಗ್ಗದಲ್ಲಿ ಕಾಂಗ್ರೆಸ್ ಮುಖಂಡರು ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನ ಖಂಡಿಸಿ ಪ್ರತಿಭಟಿಸಿದರು
SHIVAMOGGA | MALENADUTODAY NEWS | Aug 19, 2024
ಮಲೆನಾಡು ಟುಡೆ | ಶಿವಮೊಗ್ಗದಿಂದ ಪ್ರಸಾರವಾಗುವ ಮಲೆನಾಡಿನ ವಿಶೇಷ ಡಿಜಿಟಲ್, ನ್ಯೂಸ್, ಮೀಡಿಯಾ
ಸಿಎಂ ಸಿದ್ದರಾಮಯ್ಯರವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನ ಖಂಡಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಒಗ್ಗಟ್ಟಿನ ಪ್ರತಿಭಟನೆ ನಡೆಸಿದೆ.
ಇವತ್ತು ಶಿವಮೊಗ್ಗದಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದ ಮುಖಂಡರು ಕಾರ್ಯಕರ್ತರು ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಅಮೀರ್ ಅಹಮದ್ ವೃತ್ತ, ನೆಹರು ರೋಡ್, ಗೋಪಿ ಸರ್ಕಲ್, ಬಾಲರಾಜ ಅರಸ್ ರಸ್ತೆ, ಮಹಾವೀರ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್ ಮುಖಂಡರು ಮಹಾವೀರ ಸರ್ಕಲ್ ಮಾನವ ಸರಪಳಿ ನಿರ್ಮಿಸಿ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.
ಇದಕ್ಕೂ ಮೊದಲು ಶಿವಪ್ಪನಾಯಕ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಆಯನೂರು ಮಂಜುನಾಥ್
ಬಿಜೆಪಿಯವರು ಶಿವಮೊಗ್ಗ ಮತ್ತು ಹಾಸನಕ್ಕೂ ಪಾದಯಾತ್ರೆ ಮಾಡಲಿ ಎಂದು ಮಾಜಿ ಸಂಸದ ಕಾಂಗ್ರೆಸ್ ಮುಖಂಡ ಆಯನೂರು ಮಂಜುನಾಥ್ ವ್ಯಂಗ್ಯವಾಡಿದ್ದಾರೆ. ಬಿಜೆಪಿಯವರು ಹಾಸನಕ್ಕೆ ಪಾದಯಾತ್ರೆ ಮಾಡಬೇಕು, ಅಲ್ಲಿ ಕೇವಲ ಮಹಿಳೆಯರ ಮೇಲಷ್ಟೇ ಅಲ್ಲ, ಪುರುಷರ ಮೇಲೂ ಅತ್ಯಾಚಾರ ನಡೆದಿದೆ. ಇಬ್ಬರನ್ನೂ ರಕ್ಷಣೆ ಮಾಡಬೇಕಾಗಿದೆ ಎಂದು ಟೀಕಿಸಿದರು.
ಕಿಮ್ಮನೆ ರತ್ನಾಕರ್
ಇನ್ನೂ ಪ್ರತಿಭಟನೆಯ ವೇಳೆ ಮಾತನಾಡಿದ ಹಿರಿಯ ಮುಖಂಡ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ರವರು ಮುಡಾ ಹಗರಣದ ವಿಚಾರದಲ್ಲಿ ರಾಜ್ಯಪಾಲರ ಅಂಗಳಕ್ಕೆ ದೂರನ್ನ ಕೊಂಡೊಯ್ದ ಟಿ.ಜೆ ಅಬ್ರಾಹಂ (T. J. Abraham ) ರಂತವರನ್ನ ರಾಜ್ಯಪಾಲರ ಭವನಕ್ಕೆ ಬಿಟ್ಟುಕೊಂಡಿದ್ದೆ ದೊಡ್ಡ ತಪ್ಪು. ಅವರ ವಿರುದ್ಧ ನ್ಯಾಯಾಲಯವೇ ಛೀಮಾರಿ ಹಾಕಿತ್ತು. ಕೋರ್ಟ್ ಆದೇಶ ಇಲ್ಲದೇ, ಲೋಕಾಯುಕ್ತದಂತಹ ಸಂಸ್ಥೆಯ ದೂರು ಇಲ್ಲದೇ ಕೇವಲ ಖಾಸಗಿ ವ್ಯಕ್ತಿಯೊಬ್ಬನ ದೂರಿಗೆ ರಾಜ್ಯಪಾಲರು ಮಹತ್ವ ಕೊಡುತ್ತಾರೆ ಎಂದರೆ ಇದು ಷಡ್ಯಂತ್ರವಲ್ಲದೆ ಮತ್ತೇನು ಅಲ್ಲ ಎಂದು ಟೀಕಿಸಿದರು. ಜಗತ್ತಿನ ಯಾವುದೇ ನ್ಯಾಯಾಲಯದಲ್ಲಿಯು ಸಿದ್ದರಾಮಯ್ಯ ವಿರುದ್ಧ ಕ್ರಮ ಆಗುವುದಿಲ್ಲ ಎಂದ ಕಿಮ್ಮನೆ ಬಿಜೆಪಿಯವರೇನು ಧರ್ಮರಾಯನ ಮಕ್ಕಳ, ಸತ್ಯ ಹರಿಶ್ಚಂದ್ರರಾ. ರಾಜ್ಯಪಾಲರ ನಡೆ ಖಂಡಿಸಿ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಪಾದಾಯಾತ್ರೆ ಕೈಗೊಳ್ಳುತ್ತೇನೆ ಎಂದರು.
ಆರ್ ಎಂ ಮಂಜುನಾಥ್ ಗೌಡ
ಇದೇ ಸಂದರ್ಭದಲ್ಲಿ ಮಾತನಾಡಿದ ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಸಿದ್ದರಾಮಯ್ಯರವರ ಸರ್ಕಾರ ಜನರ ಪರವಾಗಿದೆ. ಈ ಕಾರಣಕ್ಕೆ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ. ಅದಕ್ಕಾಗಿ ಬಿಜೆಪಿ, ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಹೆಚ್.ಎಸ್. ಸುಂದರೇಶ್
ಶಿವಮೊಗ್ಗ, ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಮಾತನಾಡುತ್ತಾ ಬಿಜೆಪಿ ಸರ್ಕಾರ ಇದ್ದಿದ್ದರೇ ಗ್ಯಾರಂಟಿ ಯೋಜನೆಯಲ್ಲಿಯು ನಲವತ್ತು ಪರ್ಸೆಂಟ್ ಪಡೆಯುತ್ತಿದ್ದರು ಎಂದು ವ್ಯಂಗ್ಯವಾಡಿದರು. ಅಲ್ಲದೆ ಭ್ರಷ್ಟಾಚಾರದ ಅರೋಪ ಹೊತ್ತವರು ನಮ್ಮ ಮುಖಂಡರ ವಿರುದ್ದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು
ಬಿಕೆ ಮೋಹನ್
ಭದ್ರಾವತಿ ನಗರಸಭೆ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಸಿದ್ದರಾಮಯ್ಯ ಕಪ್ಪು ಚುಕ್ಕಿ ರಹಿತ ರಾಜಕಾರಣಿ. ಸಿದ್ದರಾಮಯ್ಯ ವಿರುದ್ಧ ಆರೋಪ ಸಾಬೀತಾದರೆ ನೇಣು ಬಿಗಿದುಕೊಳ್ಳುತ್ತೇನೆ. ಈ ಧೈರ್ಯ ಬಿಜೆಪಿಯವರಿಗೆ ಇದೆಯಾ ಎಂದು ಪ್ರಶ್ನಿಸಿದರು.
ಆರ್. ಪ್ರಸನ್ನಕುಮಾರ್
ಇನ್ನೂ ಆರ್. ಪ್ರಸನ್ನಕುಮಾರ್ ರವರು ಮಾತನಾಡ್ತಾ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಹುನ್ನಾರ ಇದರಲ್ಲಿ ಅಡಗಿದೆ. ರಾಜಭವನ ಅಕ್ಷರಶಃ ಬಿಜೆಪಿ ಕಚೇರಿಯಾಗಿದೆ. ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ಕೆಲಸ ಮಾಡಿದ್ದಾರೆ ಎಂದು ದೂರಿದರು.
ಬೇಳೂರು ಗೋಪಾಲಕೃಷ್ಣ
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರವರು ಮಾತನಾಡಿ ಸಾಮಾನ್ಯ ಕಾರ್ಯಕರ್ತನೊಬ್ಬ ದೂರು ನೀಡಿದ್ದಕ್ಕೆ ರಾಜ್ಯಪಾಲರು ಈ ರೀತಿ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ಸಿದ್ದರಾಮಯ್ಯ ಪರ 136 ಶಾಸಕರು ಕೂಡ ಇದ್ದೇವೆ. ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಏನೂ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನಷ್ಟು ಸುದ್ದಿಗಳು
-
ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ | ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ
-
ಜೋಗ್ಪಾಲ್ಸ್ ಗೆ ಹೋಗುವಾಗ ಇರಲಿ ಎಚ್ಚರ | ಪ್ರಯಾಣಿಕನ ಮೇಲೆಯೇ ಹರಿಯಿತು ಬಸ್ | ನಡೆದಿದ್ದೇನು?
-
Shikaripura | ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಮನೆಗೆ ಮುತ್ತಿಗೆ ಹಾಕಲು ಯತ್ನ |
-
ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಿನ್ನೆಲೆಯಲ್ಲಿ | ಶಿವಮೊಗ್ಗ ಪೊಲೀಸ್ ಇಲಾಖೆಯಿಂದ ಏಳು ಪ್ರಮುಖ ಸೂಚನೆ
-
ಭದ್ರಾ ಭರ್ತಿ : ರೈತರ ಮೊಗದಲ್ಲಿ ಮಂದಹಾಸ | ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದ್ದೇನು?
-
ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ
ಇದನ್ನು ಸಹ ಓದಿ :ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
TAGS : Shivamogga congress ,kolkata doctor case saudi ,crown prince mohammed bin salman ,happy raksha bandhan ,united states vs canada ,india independence day ,prosecution meaning ,prosecution in kannada ,astronaut sunita Williams ,ಸಿದ್ದರಾಮಯ್ಯ ಜೀವನ ,ಸಿದ್ದರಾಮಯ್ಯ date of birth ,ಸಿದ್ದರಾಮಯ್ಯ ಫೋಟೋ ,ಸಿದ್ದರಾಮಯ್ಯ birthday ,ಸಿದ್ದರಾಮಯ್ಯ age
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ