10 ಸಾವಿರ ಪುಷ್ಪ2 ಟಿಕೇಟ್‌ ಗೀವ್‌ ಅವೇ ನೀಡಿದ ಮಿಸ್ಟರ್‌ 360 ಎಬಿಡಿ ವಿಲಿಯರ್ಸ್‌

South Africa's star player and RCB's star player AB de Villiers has given a bumper gift to cinephiles

10 ಸಾವಿರ ಪುಷ್ಪ2 ಟಿಕೇಟ್‌ ಗೀವ್‌ ಅವೇ ನೀಡಿದ ಮಿಸ್ಟರ್‌ 360 ಎಬಿಡಿ ವಿಲಿಯರ್ಸ್‌
Mr 360 AB de Villiers gives away 10,000 pushpa 2 tickets

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 3, 2024

ದಕ್ಷಿಣ ಆಫ್ರಿಕಾದ ಸ್ಟಾರ್‌ ಆಟಗಾರ ಹಾಗೂ RCB ಪಾಲಿನ ಆಪತ್ಬಾಂದವ ಎಂದೆನಿಸಿಕೊಂಡಿದ್ದ ಎಬಿಡಿ ವಿಲಿಯರ್ಸ್‌  ಸಿನಿಪ್ರಿಯರಿಗೆ ಬಂಪರ್‌ ಗಿಫ್ಟ್ ಒಂದನ್ನ ನೀಡಿದ್ದಾರೆ. 

 ಪುಷ್ಪ 2 ಚಿತ್ರ  ಪ್ರಸ್ತುತ ಪ್ಯಾನ್‌ ಇಂಡಿಯಾ ಕ್ರೇಜ್‌ ಹುಟ್ಟುಹಾಕಿದೆ. ಈ ಚಿತ್ರ ಡಿಸೆಂಬರ್‌ 5 ರಂದು ವಿಶ್ವದಾದ್ಯಂತ ರಿಲೀಸ್‌ ಆಗುತ್ತಿದೆ. ಇದರ ನಡುವೆ ಎಬಿಡಿ ವಿಲಿಯರ್ಸ್‌ ಪುಷ್ಪ 2 ಚಿತ್ರದ 10000 ಟಿಕೆಟನ್ನು ಗಿಫ್ಟ್ ನೀಡುತ್ತಿದ್ದಾರೆ. ಈ ಗಿಫ್ಟ್  ಅಲ್ಲು ಅಭಿಮಾನಿಗಳಿಗೆ ಖುಷಿಯೊಂದಿಗೆ ಅಚ್ಚರಿಯನ್ನೂ‌ ಸಹ ಮೂಡಿಸಿದೆ. ಹೌದು ಅದಕ್ಕೆ ಕಾರಣವೂ ಇದೆ.

ಎಬಿಡಿ ವಿಲಿಯರ್ಸ್‌ 10000 ಪುಷ್ಪ ಟಿಕೆಟ್‌ ನೀಡುತ್ತಿರಲು ಕಾರಣವೇನು

ಎಬಿಡಿ ವಿಲಿಯರ್ಸ್‌ ಗೀವ್‌ ಅವೇ ನೀಡಲು ಕಾರಣವಿದೆ ಅದೇನೆಂದರೆ, ಎಬಿಡಿ ಈಗ ಬೆಟ್ಟಿಂಗ್‌ ಆ್ಯಪ್‌ ಒಂದನ್ನು ಪ್ರಮೋಟ್‌ ಮಾಡುತ್ತಿದ್ದಾರೆ. ಪುಷ್ಪ ಟಿಕೆಟ್‌ ಪಡೆಯಲು ಇಚ್ಚಿಸುವವರು ಈ ಆ್ಯಪ್‌ ಅನ್ನು ಡೌನ್‌ ಲೋಡ್‌ ಮಾಡಿಕೊಂಡು ಅದರಲ್ಲಿ 100 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣ ಹೂಡಿಕೆ ಮಾಡಬೇಕು. 100 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಹಣ ಡಿಪಾಸಿಟ್‌ ಮಾಡಿದ ಮೊದಲ 10000 ಸಾವಿರ ಜನರಿಗೆ ಪುಷ್ಪ 2 ಚಿತ್ರದ ಟಿಕೆಟ್‌ ಕೊಡುತ್ತೇವೆ ಎಂದು ಎಬಿಡಿ ಹೇಳಿದ್ದಾರೆ. ಬೆಟ್ಟಿಂಗ್‌ ಆ್ಯಪ್‌ವೊಂದನ್ನ ಪ್ರಮೋಟ್‌ ಮಾಡುತ್ತಿದ್ದಾರೆಂದು ಕೆಲವರು ಎಬಿಡಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರೆ. ಇತ್ತ ಗೀವ್‌ ಅವೇ ಸಿಗುತ್ತಿರುವುದರಿಂದ ಕೆಲವರು ಸಂತೋಷ ವ್ಯಕ್ತ ಪಡಿಸಿದ್ದಾರೆ.

 

SUMMARY| South Africa's star player and RCB's star player AB de Villiers has given a bumper gift to cinephiles.

 

KEYWORDS|   RCB's star player, AB de Villiers, pushpa 2,  cricket,