ಸಿಗಂದೂರು ಚೌಡೇಶ್ವರಿಗೆ BSY & BYR ಪೂಜೆ | ಸೇತುವೆ ಉದ್ಘಾಟನೆ ಸಮಯ ತಿಳಿಸಿದ ಸಂಸದ!
Mp BY Raghavendra announces time for inauguration of Sigandur bridge , ಸಿಗಂದೂರು ಸೇತುವೆ, ಸಿಗಂದೂರು ಚೌಡೇಶ್ವರಿ ದೇವಸ್ಥಾನ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಂಸದ ಬಿವೈ ರಾಘವೇಂದ್ರ

SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 7, 2024 ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ನವರಾತ್ರಿಯ ಉತ್ಸವ ಸಾಂಗವಾಗಿ ನಡೆಯುತ್ತಿದೆ. ಇದರ ನಡುವೆ ಕ್ಷೇತ್ರಕ್ಕೆ ಭೇಟಿ ನೀಡಿದ ಸಂಸದ ಬಿ ವೈ ರಾಘವೇಂದ್ರ ಸಿಗಂದೂರು ಸೇತುವೆಯ ಉದ್ಘಾಟನೆ ಬಗ್ಗೆ ಮಾತನಾಡಿದ್ದಾರೆ.
ಹೊಳೆಬಾಗಿಲಿನಲ್ಲಿ ನಿರ್ಮಾಣವಾಗುತ್ತಿರುವ ಸಿಗಂದೂರು ಸೇತುವೆ, ಬರುವ ವರ್ಷದ ಮಾರ್ಚ್ ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಮುಂದಿನ ವರ್ಷದ ಮಾರ್ಚ್ ಅಂತ್ಯದ ಹೊತ್ತಿಗೆ ಸೇತುವೆ ಪೂರ್ಣಗೊಳ್ಳಲಿದ್ದು, ಜನರ ನಿರೀಕ್ಷೆಗಳು ಈಡೇರಲಿದೆ ಎಂದಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಕುಟುಂಬಸ್ಥರೊಂದಿಗೆ ಸಿಗಂದೂರು ಚೌಡೇಶ್ವರಿಯ ದರ್ಶನಕ್ಕೆ ಆಗಮಿಸಿದ್ದ ಬಿವೈ ರಾಘವೇಂದ್ರ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಆ ಬಳಿಕ ಮಾತನಾಡಿದ ಅವರು, ಸಿಗಂದೂರು ಸೇತುವೆ ದೇಶದಲ್ಲಿಯೇ ಏಳನೇ ಅತಿದೊಡ್ಡ ಕೇಬಲ್ ಆದರಿತ ಸೇತುವೆ ಆಗಲಿದೆ ಎನಿಸಲಿದೆ. ಈ ಸೇತುವೆಯಲ್ಲಿ ಒಟ್ಟು 17 ಪಿಲ್ಲರ್ ಇದ್ದು ಒಟ್ಟು 2.4 ಕಿಲೋಮೀಟರ್ ಉದ್ದದ ಸೇತುವೆ ನಿರ್ಮಾಣ ಆಗಲಿದೆ ಎಂದರು.
ಸದ್ಯ ಅಂತಿಮ ಹಂತದ ಕೆಲಸಗಳು ಬಾಕಿ ಉಳಿದಿದ್ದು ಮುಂದಿನ ವರ್ಷ ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.