ದರ್ಶನ್‌ ತೂಗುದೀಪ ಸಂಕಷ್ಟ ಇನ್ನಷ್ಟು ಕಗ್ಗಂಟು | FSL ನಿಂದ ಮತ್ತೊಂದು ಶಾಕ್‌

More evidence is available against Darshan in the Renukaswamy murder case in Chitradurga , Hyderabad FSL

ದರ್ಶನ್‌ ತೂಗುದೀಪ ಸಂಕಷ್ಟ ಇನ್ನಷ್ಟು ಕಗ್ಗಂಟು | FSL ನಿಂದ ಮತ್ತೊಂದು ಶಾಕ್‌
More evidence against Darshan, Renukaswamy murder case , Chitradurga , Hyderabad FSL

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 22, 2024

ನಟ ತೂಗುದೀಪ ದರ್ಶನ್‌ಗೆ ಇರುವ ಸಂಕಷ್ಟ ಮತ್ತಷ್ಟು ಕಗ್ಗಂಟಾಗುತ್ತಿದೆ. ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ನಡೆದ ಸ್ಥಳದಲ್ಲಿಯೇ, ಮೃತದೇಹದ ಎದುರು ನಟ ದರ್ಶನ್ ನಿಂತಿರುವ ಫೋಟೋವೊಂದನ್ನ ಪೊಲೀಸ್‌ ಇಲಾಖೆ ರಿಟ್ರೈವ್‌ ಮಾಡಿದೆ. 

ಆರೋಪಿ ಪವನ್ ಮೊಬೈಲ್‌ನಿಂದ ತನಿಖಾ ತಂಡ ಈ ಫೋಟೋವನ್ನ ರಿಟ್ರೈವ್‌ ಮಾಡಿದೆ. ಘಟನೆ ನಡೆದ ದಿನ ಪಟ್ಟಣಗೆರೆ ಶೆಡ್‌ನಲ್ಲಿ ಆರೋಪಿಗಳ ಪೈಕಿ ಪವನ್ ಎಂಬಾತ ತನ್ನ ಮೊಬೈಲ್‌ನಿಂದ ಎರಡು ಫೋಟೊವನ್ನು ತೆಗೆದಿದ್ದ. ಬಳಿಕ ಅದನ್ನ ಡಿಲೀಟ್‌ ಮಾಡಿದ್ದ. 

ಈ ನಡುವೆ ಪ್ರಕರಣದ ತನಿಖೆ ವೇಳೆ ಪೊಲೀಸರು ಈತನ ಮೊಬೈಲ್‌ ಸೀಜ್‌ ಮಾಡಿ,  ಬೆಂಗಳೂರು ಹಾಗೂ ಹೈದರಾಬಾದ್‌ ವಿಧಿ ವಿಜ್ಞಾನ ಪ್ರಯೋಗಾಲಯಗಳಿಗೆ ರವಾನಿಸಿದ್ದರು. 

ಈ ಪೈಕಿ ಇದೀಗ ಹೈದ್ರಾಬಾದ್‌ನಿಂದ FSL ವರದಿ ಬಂದಿದ್ದು, ಅದರಲ್ಲಿ ಪವನ್‌ ಮೊಬೈಲ್‌ನಲ್ಲಿದ್ದ ದರ್ಶನ್‌ ಫೋಟೋ ರಿಟ್ರೈವ್‌ ಆಗಿದೆ. ಇದು ದರ್ಶನ್‌ಗೆ ಇನ್ನಷ್ಟು ಮುಳುವಾಗುವ ಸಾಧ್ಯತೆ ಇದೆ. 

SUMMARY|  More evidence is available against Darshan in the Renukaswamy murder case in Chitradurga , Hyderabad FSL

KEY WORDS | More evidence against Darshan, Renukaswamy murder case , Chitradurga , Hyderabad FSL