BIG NEWS | ಶಿವಮೊಗ್ಗದ ಈ ತಾಲ್ಲೂಕುಗಳಿಗೆ ಮೊಬೈಲ್‌ ಮೇಡಿಕೇರ್‌ ಯುನಿಟ್‌ | ಸಚಿವರು ಹೇಳಿದ್ದೇನು?

Health and Family Welfare Minister Dinesh Gundu Rao said that mobile medical unit service will be provided to Shivamogga, Sagar, Hosanagara rural areas.

BIG NEWS | ಶಿವಮೊಗ್ಗದ ಈ ತಾಲ್ಲೂಕುಗಳಿಗೆ ಮೊಬೈಲ್‌  ಮೇಡಿಕೇರ್‌ ಯುನಿಟ್‌ | ಸಚಿವರು ಹೇಳಿದ್ದೇನು?
Mobile medical unit to be set up in Shivamogga | Dinesh Gundu Rao 

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 27, 2024

ಶಿವಮೊಗ್ಗ| ಶಿವಮೊಗ್ಗ ಸಾಗರ ಹೊಸನಗರ ಹಾಗೂ ಶಿವಮೊಗ್ಗ ಗ್ರಾಮಾಂತರ ಭಾಗಕ್ಕೆ ಮೊಬೈಲ್‌ ಮೆಡಿಕೇರ್‌ ಯುನಿಟ್‌ ಸೇವೆಯನ್ನು ಒದಗಿಸಲಾಗುತ್ತದೆ ಎಂದು ಆರೋಗ್ಯ ಹಾಗೂ  ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಇಂದು ನಗರದ ಜಿಲ್ಲಾಧಿಕಾರಿ  ಕಚೇರಿಯಲ್ಲಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶಿಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇನ್ಮುಂದೆ  ಶಿವಮೊಗ್ಗ ಗ್ರಾಮಾಂತರ ಸಾಗರ ಹಾಗೂ ಹೊಸನಗರದಲ್ಲಿ ಸಂಚಾರಿ ವೈದ್ಯಕೀಯ ಘಟಕ ಸೇವೆಯನ್ನು ಒದಗಿಸಲಾಗುತ್ತದೆ ಎಂದರು.

ಈಗಾಗಲೇ ರಾಜ್ಯದ 340 ಆರೋಗ್ಯ ಕೇಂದ್ರಗಳಿಗೆ ಆಂಬುಲೆನ್ಸ್ ನೀಡಿದ್ದೇವೆ. ಅಗತ್ಯ ಬಿದ್ದರೆ ಇನ್ನಷ್ಟು ಆಂಬುಲೆನ್ಸ್ ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದರು

ಈಗಾಗಲೇ ಅಧಿಕಾರಿಗಳೊಂದಿಗೆ ಸಾಗರ ಹಾಗೂ ಭದ್ರಾವತಿ ಆಸ್ಪತ್ರೆಗೆ ಭೇಟಿ ನೀಡಿ ಬಂದಿದ್ದೇವೆ. ಭದ್ರಾವತಿಯಲ್ಲಿ ಒಂದು ಆಸ್ಪತ್ರೆಗೆ  ಬೇಡಿಕೆ ಇದೆ ಅದನ್ನು ನಾವು ಮಾಡುತ್ತೇವೆ. ಈಗ ಚಂದ್ರಗುತ್ತಿ ಹಾಗೂ ಕೋಣಂದೂರಿನಲ್ಲಿ ಪಿ ಹೆಚ್‌ ಸಿ ಮೇಲ್ದರ್ಜೆ ಆಸ್ಪತ್ರೆ ಮಾಡುತ್ತಿದ್ದಾರೆ.  ಹಾಗೆಯೇ ಭದ್ರಾವತಿ ಹಾಗೂ ಸಾಗರ ಆಸ್ಪತ್ರೆಗಳು ಕೂಡಾ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಆದ್ದರಿಂದ ಆ ಆಸ್ಪತ್ರೆಗಳನ್ನು  ಮೇಲ್ದರ್ಜೆಗೆ ಏರಿಸಲಾಗುತ್ತದೆ ಎಂದರು.

ಎಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್‌ ಶೇ 35 ರಷ್ಟು ಕಡಿಮೆಯಾಗಬೇಕು.

ಈಗಾಗಲೇ ಎಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ಶೇಕಡಾ 70 ರಷ್ಟು ಸಿಜೇರಿಯನ್‌ ಗಳು ನಡೆಯುತ್ತಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ಶೇಕಡಾ 30 ರಷ್ಟು ಸಿಸೇರಿಯನ್‌ ಗಳು ಆಗುತ್ತಿವೆ. ಆದರೆ ಸರ್ಕಾರದ  ನಿಯಮದ ಪ್ರಕಾರ ಶೇಕಡಾ 80 ರಷ್ಟು ನಾರ್ಮಲ್‌ ಡಿಲೆವರಿ ಆಗಬೇಕು. ಆಗ ಮಾತ್ರ ತಾಯಿ ಮಗು ಆರೋಗ್ಯವಾಗಿರಲು ಸಾಧ್ಯ. ಕೆಲಸ ಕಮ್ಮಿ ಆಗುತ್ತೆ ಹಣ ಜಾಸ್ತಿ ಮಾಡಬಹುದು ಎಂಬ ಆಸೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್‌ ಮಾಡುತ್ತಿದ್ದಾರೆ. ಆದರೆ ಇನ್ಮುಂದೆ ಖಾಸಗಿ ಆಸ್ಪತ್ರೆಯಲ್ಲಿ ಶೇಕಡಾ 35 ಕ್ಕಿಂತ ಕಡಿಮೆ ಸಿಸೇರಿಯನ್‌ ಆಗಬೇಕು ಎಂದರು.

ಹಾಗೆಯೇ ಖಾಸಗಿ ಆಸ್ಪತ್ರೆಗಳಲ್ಲಿ  ಅವರು ನಿಗದಿಪಡಿಸಿರುವ ದರವನ್ನು ಜನತೆಗೆ ಕಾಣುವಂತೆ ಪ್ರದರ್ಶಿಸಬೇಕು. ದರ ಎಷ್ಟಾದರೂ ಇರಲಿ ಅದು ಜನತೆಗೆ ಕಾಣಬೇಕು ಇಲದಿದ್ದರೆ ಅವರ ವಿರುದ್ಧ ಡಿ ಹೆಚ್‌ ಓ ಕ್ರಮ ಕೈಗೊಳ್ಳಬೇಕು ಎಂದರು. ರಾಜ್ಯಾಧ್ಯಂತ ಜಿಲ್ಲಾ ಆಸ್ಪತ್ರೆಯಲ್ಲಿ ಕಿಮೋ ಥೆರಪಿ ಕೈಗೊಳ್ಳಲಾಗುತ್ತಿದ್ದು, ಈ ಯೋಜನೆಗೆ ಸಿ ಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದರು.

SUMMARY | Health and Family Welfare Minister Dinesh Gundu Rao said that mobile medical unit service will be provided to Shivamogga, Sagar, Hosanagara rural areas.



KEY WORDS |  Minister Dinesh Gundu Rao,  mobile medical unit service,  Health and Family Welfare Minister,