ಮೊಬೈಲ್‌ಗೆ ಬರುವ OTP ಯ ಮೂಲ ಕೇಳಿದ ಟ್ರಾಯ್ | ಕಾರಣವೇನು ಗೊತ್ತಾ?
Cases of money being siphoned off by sending OTPs have increased. Trai (Telecom Regulatory Authority of India) has taken several steps to prevent such frauds.
SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 27, 2024
ಪ್ರಸ್ತುತ ಮುಂದುವರೆದ ಜಗತ್ತಿನಲ್ಲಿ ತಂತ್ರಜ್ಞಾನ ದುರ್ಬಳಕೆಯಿಂದ ಅನೇಕ ಸ್ಕ್ಯಾಮರ್ ಗಳು ಜನರ ಮೊಬೈಲ್ ಗೆ ಓಟಿಪಿ ಕಳುಹಿಸಿ ಹಣ ಎಗರಿಸಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ಅಂತಹ ವಂಚನೆಗಳನ್ನು ತಡೆಯಲು ಟ್ರಾಯ್ (ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ )ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರ ಭಾಗವಾಗಿ ಒಟಿಪಿ ಗಳು ಎಲ್ಲಿಂದ ಬರುತ್ತವೆ ಅದರ ಮೂಲ ಯಾವುದು ಎಂಬ ಎಲ್ಲಾ ಮಾಹಿತಿಯನ್ನು ಟೆಲಿಕಾಂ ಕಂಪನಿಗಳು ಟ್ರಾಯ್ ಗೆ ನೀಡಬೇಕು ಎಂದು ಸೂಚಿಸಿದೆ. ಈ ಮಾಹಿತಿಯನ್ನು ನೀಡುವ ಒಪ್ಪಂದಕ್ಕೆ ಅನುಮತಿಸಲು ಟ್ರಾಯ್ ಟೆಲಿಕಾಂ ಕಂಪನಿಗಳಿಗೆ 2024 ರ ಆಗಸ್ಟ್ ವರೆಗೆ ಗಡವು ನಿಗದಿಪಡಿಸಿತ್ತು ಆದರೆ ಏರ್ಟೆಲ್,ಬಿಎಸ್ ಎನ್ ಎಲ್, ಜಿಯೋ ಕಂಪನಿಗಳು ಗಡುವನ್ನು ವಿಸ್ತರಿಸುವಂತೆ ಕೇಳಿಕೊಂಡಿದ್ದರಿಂದ ಆ ದಿನಾಂಕವನ್ನು ನವಂಬರ್ 30 ವರೆಗೆ ಮುಂದುವರೆಸಿತ್ತು. ಈಗ ಅದರ ಗಡುವು ಮುಗಿಯುತ್ತಾ ಬಂದಿದೆ. ಹಾಗೊಂದು ವೇಳೆ ಈ ವಿಚಾರದಲ್ಲಿ ವಿಸ್ತರಣೆಯಾಗದಿದ್ದರೇ ಮೊಬೈಲ್ ಗ್ರಾಹಕರ ಸೇವೆಗಳಿಗೆ ಬರುವ ಒಟಿಪಿ ಸಹ ನಿಂತು ಹೋಗುವ ಸಾಧ್ಯತೆ ಇದೆ.
SUMMARY| Cases of money being siphoned off by sending OTPs have increased. Trai (Telecom Regulatory Authority of India) has taken several steps to prevent such frauds.
KEY WORDS | Telecom Regulatory Authority of India, OTP, Telecom,