ಹುಲಿಕಲ್‌ನ 102 ಪ್ರಾಯದ ಮೀನಜ್ಜ ದೇವರು ಅಪಘಾತದಲ್ಲಿ ನಿಧನ

102-year-old man, Meenajja alias Krishna Devaru, died in an accident at Hulikal in Hosanagara taluk

ಹುಲಿಕಲ್‌ನ 102 ಪ್ರಾಯದ ಮೀನಜ್ಜ ದೇವರು ಅಪಘಾತದಲ್ಲಿ ನಿಧನ
102-year-old man, Meenajja alias Krishna Devaru, Hulikal in Hosanagara taluk

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 11, 2024 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹುಲಿಕಲ್‌ನಲ್ಲಿ ಮನೆ ಮಾತನಾಗಿದ್ದ ಶತಾಯುಷಿ 102 ವರ್ಷ ಪ್ರಾಯದ ಮೀನಜ್ಜ ಅಲಿಯಾಸ್‌ ಕೃಷ್ಣ ದೇವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 

ರಸ್ತೆ ದಾಟುತ್ತಿದ್ದ  ವೇಳೆ ಒಂದು ಕಾರು, ಟ್ಯಾಂಕರ್‌ ವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಮೀನಜ್ಜನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ  ಮೀನಜ್ಜ ತೀವ್ರ ಗಾಯಗೊಂಡಿದ್ದರು. ಅವರನ್ನ ನಗರ ಆಸ್ಪತ್ರೆಗೆ ಕರೆತರುವ ಮುನ್ನವೇ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಕಾರು ಚಾಲಕ ಕಾರನ್ನ ನಿಲ್ಲಿಸದೇ ಪರಾರಿಯಾಗಿದ್ದಾನೆ. 

102 ವರುಷವಾಗಿದ್ದರೂ ಯಾವುದೇ ಕಾಯಿಲೆ ಕಸಾಲೆ ಇಲ್ಲದೆ ತಮ್ಮ ಕೆಲಸವನ್ನು ನಿರ್ವಹಿಸಿಕೊಂಡು ಸ್ವಾವಲಂಭಿಯಾಗಿ ಬುದುಕಿದ್ದ ಮೀನಜ್ಜ ಈ ಭಾಗದಲ್ಲಿ ಚಿರಪರಿಚಿತ. ಮೀನು ಹಿಡಿದು ತಂದು ಮಾರಾಟ ಮಾಡುತ್ತಿದ್ದ ಇವರು ಮೀನಜ್ಜ ಎಂದೇ ಫೇಮಸ್‌ ಆಗಿದ್ದರು. ಇನ್ನೂ ಘಟನೆ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಿಟ್ ಅಂಡ್ ರನ್ ಮಾಡಿದ ಕಾರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. 

SUMMARY | 102-year-old man, Meenajja alias Krishna Devaru, died in an accident at Hulikal in Hosanagara taluk 


KEYWORDS | 102-year-old man, Meenajja alias Krishna Devaru, Hulikal in Hosanagara taluk