ಮಾರಿಜಾತ್ರೆ ಡಿಜೆ ಡ್ಯಾನ್ಸ್ ವೇಳೆ ಕಿರಿಕ್ | ಕಟರ್‌ನಿಂದ ಹಲ್ಲೆ | Attempt to murder case?
Marijatre DJ Dance Kirik, Attacked by Cutter, Shikaripura Rural Police Station

SHIVAMOGGA | MALENADUTODAY NEWS | ಮಲೆನಾಡು ಟುಡೆ Jan 23, 2025
ಶಿಕಾರಿಪುರದಲ್ಲಿ ನಡೆಯುತ್ತಿರುವ ಮಾರಿಜಾತ್ರೆ ಈ ಸಲ ಸಖತ್ ಜೋರಾಗಿದೆ. ಬರೋಬ್ಬರಿ ವ್ಯಾಪಾರ ವಹಿವಾಟನ್ನೆ ಕಂಡಿರುವ ಶಿಕಾರಿಪುರದಲ್ಲಿ ನಿನ್ನೆ ಪ್ರಮುಖ ರಸ್ತೆಗಳು ಟ್ರಾಫಿಕ್ ಜಾಮ್ ಎದುರಿಸಿದವು. ಬಾಡೂಟಕ್ಕೆ ಬರುತ್ತಿರುವ ಹೋಗುತ್ತಿರುವ ವಾಹನಗಳ ಸಂಖ್ಯೆ ಗಂಟೆ ಹನ್ನೊಂದಾದರೂ ಕಡಿಮೆಯಾಗಿರಲಿಲ್ಲ. ಇದರ ನಡುವೆ ಮಾರಿಹಬ್ಬಕ್ಕೆ ಹಾಕಿದ ಡಿಜೆ ವಿಚಾರದಲ್ಲಿ ಕಿರಿಕ್ ಆಗಿ ಕೇಸ್‌ವೊಂದು ದಾಖಲಾಗಿದೆ.
ಇಲ್ಲಿನ ಹೋತನಕಟ್ಟೆಯ ಬಳಿಯಲ್ಲಿ ಮಾರಿಹಬ್ಬದ ನಿಮಿತ್ತ ಡಿಜೆ ಹಾಕಲಾಗಿತ್ತು. ಈ ವೇಳೆ ಎಲ್ಲರೂ ಸೇರಿಕೊಂಡು ಡ್ಯಾನ್ಸ್ ಮಾಡುತ್ತಿದ್ದರು. ಈ ಡ್ಯಾನ್ಸ್ ನಡುವೆ ಹುಡುಗರ ನಡುವೆ ತಳ್ಳಾಟ ನಡೆದಿದೆ. ಆಕಸ್ಮಿಕವಾಗಿ ನಡೆದ ತಳ್ಳಾಟದಲ್ಲಿ ಯುವಕನೊಬ್ಬ, ಆತನನ್ನು ತಳ್ಳಿದ ವ್ಯಕ್ತಿಯನ್ನು ಯಾಕೆ ತಳ್ಳಿದೆ ಎಂದು ಪ್ರಶ್ನಿಸಿದ್ದಾನೆ. ಈ ವಿಚಾರವಾಗಿ ಕಿರಿಕ್ ಆಗಿ, ವ್ಯಕ್ತಿಯು ಯುವಕನಿಗೆ ಕಟರ್‌ನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಜಗಳ ಬಿಡಿಸಲು ಬಂದಾತನಿಗೂ ಕಟರ್‌ನಿಂದ ಗಾಯಗವಾಗಿದೆ. ಸದ್ಯ ಈ ಘಟನೆ ಸಂಬಂಧ ಅಟೆಂಪ್ಟು ಮರ್ಡರ್ ಕೇಸ್ ದಾಖಲಾಗಿದೆ.
SUMMARY | Marijatre DJ Dance Kirik Attacked by Cutter, Shikaripura Rural Police Station
KEY WORDS | Marijatre DJ Dance Kirik, Attacked by Cutter, Shikaripura Rural Police Station