ಮನೆ ಕಳೆದುಕೊಂಡವರಿಗೆ ಮಧು ಬಂಗಾರಪ್ಪರವರ ಅಭಯ | ಅರಣ್ಯ ಒತ್ತುವರಿ ತೆರವು ಆದೇಶದ ಬಗ್ಗೆ ಹೇಳಿದ್ದೇನು?

Madhu Bangarappa statement in Shivamogga

ಮನೆ ಕಳೆದುಕೊಂಡವರಿಗೆ ಮಧು ಬಂಗಾರಪ್ಪರವರ ಅಭಯ | ಅರಣ್ಯ ಒತ್ತುವರಿ ತೆರವು ಆದೇಶದ ಬಗ್ಗೆ ಹೇಳಿದ್ದೇನು?
Madhu Bangarappa statement in Shivamogga

SHIVAMOGGA | MALENADUTODAY NEWS |  Aug 4, 2024

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯಿಂದಾಗಿ ವ್ಯಾಪಕ ಹಾನಿಯಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಮಳೆಯಿಂದಾಗಿ ಕುಸಿದ ಅನಧಿಕೃತ ಮನೆಗಳಿಗೆ ಪರಿಹಾರ ಸಿಗುವುದಿಲ್ಲ ಎನ್ನುವ ಆತಂಕವನ್ನ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ದೂರ ಮಾಡಿದ್ದಾರೆ.  

Madhu Bangarappa statement in Shivamogga 

ಮಳೆಯಿಂದಾಗಿ ಹಾನಿಗೊಂಡಿರುವ ಅನಧಿಕೃತ ಮನೆಗಳಿಗೆ ₹ 1.20 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದವರು ತಿಳಿಸಿದ್ದಾರೆ. ಅಲ್ಲದೆ ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಹೊಸ ಮನೆ ಮಂಜೂರು ಮಾಡಲಾಗುವುದು ಎಂದು ತಿಳಿಸಿದ್ದಾರೆ. 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ಇದೇ ವೇಳೆ ಮಧು ಬಂಗಾರಪ್ಪ ಶರಾವತಿ, ಚಕ್ರಾ, ವರಾಹಿ ಮುಳುಗಡೆ ಸಂತ್ರಸ್ತರ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ವಾದ ಮಾಡಲು ಹಿರಿಯ ನ್ಯಾಯವಾದಿ ದೇವದಾಸ್ ಕಾಮತ್‌ ನೇತೃತ್ವದಲ್ಲಿ ವಕೀಲರ ತಂಡವನ್ನ ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಅಲ್ಲದೆ ಇತ್ತೀಚೆಗೆ ಅರಣ್ಯ ಸಚಿವರು ಹೊರಡಿಸಿದ ಪ್ರಕಟಣೆ ಕುರಿತು ಪ್ರತಿಕ್ರಿಯಿಸಿದ ಸಚಿವರು ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಹೋಂ ಸ್ಟೇ, ರೇಸಾರ್ಟ್‌ ನಿರ್ಮಿಸಿದರೆ ಅವುಗಳನ್ನು ತೆರವುಗೊಳಿಸುವುದಾಗಿ ಅರಣ್ಯ ಸಚಿವರು ಹೇಳಿದ್ದಾರೆ. ಇದಕ್ಕೆ ನನ್ನ ಸಹಮತವೂ ಇದೆ ಎಂದಿದ್ದಾರೆ. 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ