ಮೃತ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿದ ಮಧು ಬಂಗಾರಪ್ಪ
Education Minister Madhu Bangarappa said that if a soldier dies, all the family members of the country have lost a son.

SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 12, 2025
ಹೊಸನಗರ | ಒಬ್ಬ ಯೋಧ ದುರ್ಮರಣ ಹೊಂದಿದರೆ ಒಬ್ಬ ಮಗನನ್ನು ಕಳೆದುಕೊಂಡಂತೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಪ್ಯಾರಾಚೂಟ್ ಅವಘಡದಲ್ಲಿ ಸಾವನ್ನಪ್ಪಿದ ಭಾರತೀಯ ಸೇನೆಯ ಮೃತ ಯೋಧ ಮಂಜುನಾಥ್ ಹುಟ್ಟೂರು ಗೊರಗದ್ದೆಗೆ ಶಿಕ್ಷಣ ಸಚಿವ ಮಧುಬಂಗಾರಪ್ಪನವರು ತೆರಳಿ ಇಂದು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ನಂತರ ಹೊಸನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಯೋಧ ಮಂಜುನಾಥ್ ರನ್ನು ಕಳೆದುಕೊಂಡಿದ್ದು ತುಂಬಾ ದುಃಖದ ವಿಷಯ. ನಾನು ಅವರ ಅಂತ್ಯಕ್ರಿಯೆಯ ದಿನ ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಿದ್ದರಿಂದ ಅಂದು ಬರಲು ಸಾಧ್ಯವಾಗಿರಲಿಲ್ಲ.
ಆದ್ದರಿಂದ ಇಂದು ಅವರ ಮನೆಗೆ ತೆರಳಿ ಕುಟುಂಬಕ್ಕೆ ಧೈರ್ಯ ಹೇಳಿ ಬಂದಿದ್ದೇನೆ. ಆ ಸಂದರ್ಭದಲ್ಲಿ ಅವರು ಪ್ರಾಥಮಿಕ ವ್ಯಾಸಂಗ ಮಾಡಿದ್ದ ಸಂಕೂರಿನ ಶಾಲೆಯನ್ನು ಅಭಿವೃದ್ಧಿ ಮಾಡಬೇಕು ಎಂಬ ಮನವಿಗಳು ಬಂತು. ಆ ಕೆಲಸವನ್ನು ಆದಷ್ಟು ಬೇಗ ಕೈಗೊಂಡು ಶಾಲೆಯ ಅಬಿವೃದ್ಧಿ ಕಾರ್ಯವನ್ನು ಕೈಗೊಳ್ಳುತ್ತೇವೆ. ಹಾಗೆಯೇ ಅವರ ಊರಿನ ಗ್ರಾಮ ಪಂಚಾಯತಿ ಅವರಣದಲಿ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದ್ದಾರೆ. ಆ ಪುತ್ಥಳಿ ನಿರ್ಮಾಣಕ್ಕೆ ಸರ್ಕಾರದಿಂದ ಹಾಗು ನಮ್ಮಿಂದ ವ್ಯಯಕ್ತಿಕವಾಗಿ ಏನೂ ಬೇಕೋ ಆ ಸಹಕಾರವನ್ನು ಮಾಡುತ್ತೇವೆ.
SUMMARY | Education Minister Madhu Bangarappa said that if a soldier dies, all the family members of the country have lost a son.
KEYWORDS | Education Minister, Madhu Bangarappa, soldier dies, hosangara,