ಹೊಸವರುಷದಲ್ಲಿ ತೇಜಸ್ವಿ ಸೂರ್ಯರ ಮದುವೆ ಫಿಕ್ಸ್ | ವಧು ಯಾರು ಗೊತ್ತಾ
MP Tejaswi Surya marry Shivasri Skanda Prasad , Chennai, Tamil Nadu
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 1, 2025
ಸಂಸದ ತೇಜಸ್ವಿ ಸೂರ್ಯ ಹೊಸವರುಷದಲ್ಲಿ ಮದುವೆಯಾಗಲಿದ್ದಾರೆ. ಅವರು ತಮಿಳುನಾಡಿನ ಚೆನ್ನೈ ಮೂಲದ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ರವರ ಜೊತೆ ವಿವಾಹವಾಗಲಿದ್ದು, ಅವರ ಕುಟುಂಬದ ಜತೆ ವಿವಾಹ ಮಾತುಕತೆ ನಡೆಯುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ. ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ವೇಳೆ ಪೂಜಿಸಲೆಂದೇ ಹೂಗಳ ತಂದೆ ಎಂಬ ಹಾಡನ್ನು ಶಿವಶ್ರೀ ಸ್ಕಂದಪ್ರಸಾದ್ ಹಾಡಿದ್ದರು. ತಮ್ಮದೆ ಯೂಟ್ಯೂಬ್ ಅಕೌಂಟ್ ಹೊಂದಿರುವ ಶಿವಶ್ರೀ ಕೆಲವು ಸಿನಿಮಾಗಳಿಗೂ ಹಾಡನ್ನ ಹಾಡಿದ್ದಾರೆ. ಇವರನ್ನ ತೇಜಸ್ವಿ ಸೂರ್ಯ ವರಿಸಲಿದ್ದಾರೆ ಎಂಬ ಮಾಹಿತಿಯನ್ನು ರಾಜ್ಯದ ಪ್ರಮುಖ ಮಾಧ್ಯಮಗಳು ವರದಿ ಮಾಡಿದ್ದು ಬರುವ ಮಾರ್ಚ್ ನಾಲ್ಕರಂದು ಇವರಿಬ್ಬರ ವಿವಾಹ ನಿಶ್ಚಯವಾಗಿದೆ ಎಂದು ಹೇಳಲಾಗುತ್ತಿದೆ.
SUMMARY | MP Tejaswi Surya to marry Shivasri Skanda Prasad from Chennai, Tamil Nadu
KEY WORDS |MP Tejaswi Surya marry Shivasri Skanda Prasad , Chennai, Tamil Nadu