ಸಂಪುಟ ಪುನಾರಚನೆ | ಯಾರ ಮಂತ್ರಿಗಿರಿ ಹೋಗುತ್ತೆ ?| ಶಿವಮೊಗ್ಗದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಭವಿಷ್ಯ ನುಡಿ| ಏನದು
Laxmi Hebbalkar statement on cabinet reshuffle | ಲಕ್ಷ್ಮೀ ಹೆಬ್ಬಾಳ್ಕರ್ , ಸಂಪುಟ ಪುನಾರಚನೆ, ಬಿ ಕೆ ಸಂಗಮೇಶ್, ಮಧು ಬಂಗಾರಪ್ಪ, Lakshmi Hebbalkar, Cabinet Reshuffle, B K Sangamesh, Madhu Bangarappa,
SHIVAMOGGA | MALENADUTODAY NEWS | Aug 12, 2024 ಮಲೆನಾಡು ಟುಡೆ
ರಾಜ್ಯ ಸಚಿವ ಸಂಪುಟ ಪುನರ್ ರಚನೆ ಆಗಲಿದೆಯಾ? ಸಚಿವ ಮಧು ಬಂಗಾರಪ್ಪರವರ ಅಧಿಕಾರ ಹೋಗಲಿದ್ಯಾ? ಅಥವಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಪದವಿ ಬಿಟ್ಟುಕೊಡಲಿದ್ದಾರಾ? ಹೀಗೊಂದು ಕುತೂಹಲದ ಮಾತುಕತೆ ನಿನ್ನೆ ದಿನ ಭದ್ರಾವತಿಯಲ್ಲಿ ನಡೆದಿದೆ.
ಭದ್ರೆಗೆ ಬಾಗಿನ
ಭದ್ರಾ ಡ್ಯಾಮ್‌ಗೆ ಬಾಗೀನ ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ (Department of Women and Child Development )ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರು ತಮ್ಮ ಭಾಷಣದ ವೇಳೆ ಇಂತಹದ್ದೊಂದು ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಬಿ ಕೆ ಸಂಗಮೇಶ್
ಸ್ವಾಮೀಜಿಯವರು ತಮ್ಮನ್ನ ಕೇಳಿದರು, ಏನಮ್ಮ ಸಂಗಮೇಶ್‌ರವರು ಮಂತ್ರಿಯಾಗಬೇಕಿತ್ತು ಎಂದು ಕೇಳಿದರು. ಈ ವೇಳೆ ನಾನು ಹೇಳಿದೆ, ಇನ್ನೊಂದು ಆರು ತಿಂಗಳು ಒಳಗೆ ಕ್ಯಾಬಿನೆಟ್ ರಿಷಫಲ್ ಆಗುತ್ತಿದೆ. ಪುನರ್ ರಚನೆ ಆಗುವ ಸಂದರ್ಭದಲ್ಲಿ ಹೈಕಮಾಂಡ್ ಮನಸ್ಸು ಮಾಡಬಹುದು ಗುರುಗಳೇ ಎಂದು ತಿಳಿಸಿದೆ.
ಲಕ್ಷ್ಮಿ ಹೆಬ್ಬಾಳ್ಕರ್
ಆ ಹೊತ್ತಿನಲ್ಲಿ ಗುರುಗುಳ ಲಕ್ಷ್ಮಿ ಹೆಬ್ಬಾಳ್ಕರ್ ಕೊಡಿಸುತ್ತಾರೆ ಎಂದು ಹೇಳಿದರು, ಅದೇ ಸಮಯದಲ್ಲಿ ಪಕ್ಕದಲ್ಲಿ ಕುಳಿತಿದ್ದ ಮಧು ಬಂಗಾರಪ್ಪನವರು ನಾನು ಸೀಟು ಬಿಟ್ಟುಕೊಡಬೇಕಾ, ಅಥವಾ ನೀವು ಬಿಟ್ಟುಕೊಡಬೇಕಾ ಎಂದು ಪ್ರಶ್ನಿಸಿದ್ರು. ಯಾವಾಗ ಲಕ್ಷ್ಮೀ ಹೆಬ್ಬಾಳ್ಕರ್ ಹೀಗೆ ಹೇಳಿದರು ಸೇರಿದ ಸಭೆಯಲ್ಲಿ ನಗೆಯ ಹೊನಲು ಮೂಡಿತು.
ಮಧು ಬಂಗಾರಪ್ಪ
ಇನ್ನು ಮಾತು ಮುಂದುವರಿಸಿದ ಲಕ್ಷ್ಮೀ ಹೆಬ್ಬಾಳ್ಕರ್‌ರವರು ನಮ್ಮ ಪಕ್ಷ ಶಿಸ್ತಿನ ಪಕ್ಷ, ಇಲ್ಲಿ ಹೈಕಮಾಂಡ್ ಹೇಗೆ ಹೇಳುತ್ತೋ ಹಾಗೆ ನಡೆದುಕೊಳ್ಳುತ್ತೇವೆ, ಅದು ನಾನಾಗಿರಬಹುದು ಅಥವಾ ಮಧು ಬಂಗಾರಪ್ಪನವರಾಗಿರಬಹುದು, ಹೈಕಮಾಂಡ್ ತೀರ್ಮಾನ ಅಂತಿಮವಾಗಿರುತ್ತದೆ ಎಂದರು. ಅಲ್ಲದೆ ನಾಲ್ಕು ಸಲ ಎಂಎಲ್‌ಎ ಆಗಿರುವ ಸಂಗಮೇಶ್‌ರವರು ಮಂತ್ರಿಯಾಗಲಿ ಎಂದು ಹಾರೈಸಿದರು.
ತರೀಕೆರೆ ಶಾಸಕರಿಗೂ ಮಂತ್ರಿಗಿರಿ ಸಿಗಲಿ
ಇನ್ನೂ ಲಕ್ಷ್ಮೀ ಹೆಬ್ಬಾಳ್ಕರ್‌ರವರ ಮಾತಿನ ನಡುವೆ ಕಾರ್ಯಕ್ರಮದಲ್ಲಿ ನೆರದವರು ತರೀಕೆರೆಯ ಶಾಸಕ ಶ್ರೀನಿವಾಸ್‌ರವರಿಗೂ ಮಂತ್ರಿ ಸ್ಥಾನ ಸಿಗಲಿ ಎಂದು ಹೇಳಿ ಎಂದಾಗ, ಸಚಿವ ಲಕ್ಷ್ಮೀ ಹೆಬ್ಬಾಳ್ಕರ್‌ರವರು ಅವರಿಗೂ ಸಚಿವ ಸ್ಥಾನ ಸಿಗಲಿ ಎಂದು ಹಾರೈಸುತ್ತೇನೆ ಎಂದರು.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ