ಕಿಚ್ಚಾ ಸುದೀಪ್‌ ಮ್ಯಾಕ್ಸ್ಸ್‌ ಮೂವಿ ರಿಲೀಸ್‌ ಡೇಟ್‌ ಫಿಕ್ಸ್

Kichcha Sudeep's much-awaited film Max is all set to hit the screens worldwide on December 25.

ಕಿಚ್ಚಾ ಸುದೀಪ್‌ ಮ್ಯಾಕ್ಸ್ಸ್‌ ಮೂವಿ ರಿಲೀಸ್‌ ಡೇಟ್‌ ಫಿಕ್ಸ್
Kichcha Sudeep's Max Movie Release Date Fixed

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 27, 2024

ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಮ್ಯಾಕ್ಸ್ ಚಿತ್ರ ಇದೇ ಡಿಸೆಂಬರ್ 25 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಈ ಕುರಿತು ಚಿತ್ರತಂಡ ಸರಿಗಮಪ ಯೂಟ್ಯೂಬ್ ಚಾನೆಲ್ ನಲ್ಲಿ ಸಣ್ಣದೊಂದು ಅನೌನ್ಸ್ ಮೆಂಟ್‌ ವಿಡಿಯೋ ಬಿಡುವ ಮೂಲಕ ಅಧಿಕೃತವಾಗಿ ಘೋಷಿಸಿದೆ.

ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾದ ನಂತರ ಯಾವುದೇ ಚಿತ್ರ ರಿಲೀಸ್ ಆಗಲಿಲ್ಲ. 2 ವರ್ಷಗಳಿಂದ ಕಿಚ್ಚ ಸುದೀಪ್ ಅಭಿಮಾನಿಗಳ ನೆಚ್ಚಿನ ನಟನ ಸಿನಿಮಾಗೆ ಕಾತರದಿಂದ ಕಾದು ಕುಳಿತಿದ್ದರು. ಆದ್ರೂ ಚಿತ್ರತಂಡ ಮ್ಯಾಕ್ಸ್ ಚಿತ್ರವನ್ನು ರಿಲೀಸ್ ಮಾಡುವುದನ್ನು ತಡ ಮಾಡುತ್ತಿತ್ತು. ಇದರಿಂದ ಕಿಚ್ಚ ಸುದೀಪ್ ಅಭಿಮಾನಿಗಳು ಚಿತ್ರತಂಡದ ಮೇಲೆ ಕೋಪಗೊಂಡಿದ್ದರು. ಈಗ ಚಿತ್ರತಂಡ  ಬಿಡುಗಡೆ ದಿನಾಂಕ ಘೋಷಿಸಿದ್ದು.‌ ಡಿಸೆಂಬರ್‌ 25 ರಂದು ಕಿಚ್ಚಾ ಅಭಿಮಾನಿಗಳಿಗೆ ಮಾಕ್ಸ್‌ ಮೂಲಕ ಮ್ಯಾಕ್ಸಿಮಮ್‌ ಮನರಂಜನೆ ನೀಡಲಿದ್ದಾರಾ ಎಂದು ಕಾದುನೋಡಬೇಕಿದೆ. 

ಈ ಹಿಂದೆ ಮ್ಯಾಕ್ಸ್ ಚಿತ್ರತಂಡ ಒಂದು ಸಾಂಗ್ ಹಾಗೂ ಟೀಸರ್ ಅನ್ನು ಬಿಟ್ಟಿತ್ತು. ಅದಾಗಿ ಕೆಲ ತಿಂಗಳ ನಂತರ ಈಗ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ.ಈ ಚಿತ್ರವನ್ನು ವಿಜಯ್ ಕಾರ್ತಿಕೇಯನ್ ನಿರ್ದೇಶಿಸುತ್ತಿದ್ದು, ಕಲೈಪುಲಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹಾಗೆಯೇ ಅಜನೀಶ್ ಬಿ ಲೋಕನಾಥ್  ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ

SUMMARY | Kichcha Sudeep's much-awaited film Max is all set to hit the screens worldwide on December 25.

 

KEYWORDS| | Kichcha Sudeep,  Max, kannadamovie,