ಸಕ್ರೆಬೈಲ್‌ ಕ್ಯಾಂಪ್‌ನಿಂದ ಖಾನಾಪುರದ ಆನೆ ಮತ್ತೆ ಕಾಡಿಗೆ? | ಬುದ್ಧಿವಂತ ಇಲಾಖೆಯ ಕ್ರಮದ ನಡುವೆ ಆನೆ ಕಥೆ ಏನು? JP ಬರೆಯುತ್ತಾರೆ

Khanapur elephant released back into the forest,  Sakrebail elephant camp

ಸಕ್ರೆಬೈಲ್‌ ಕ್ಯಾಂಪ್‌ನಿಂದ ಖಾನಾಪುರದ ಆನೆ ಮತ್ತೆ ಕಾಡಿಗೆ? | ಬುದ್ಧಿವಂತ ಇಲಾಖೆಯ ಕ್ರಮದ ನಡುವೆ ಆನೆ ಕಥೆ ಏನು? JP ಬರೆಯುತ್ತಾರೆ
Khanapur elephant released back into the forest,  Sakrebail elephant camp

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 21, 2025 ‌‌ 

ಖೆಡ್ಡಾಗೆ ಬಂದ ಕಾಡಾನೆಗೆ ಮಾನವ ಸಂಪರ್ಕ ಸಿಕ್ಕಿ ನಂತರ ಕಾಡಿಗೆ ಹೋಗುವ ಪರಿಸ್ಥಿತಿ ಬಂದಾಗ ಏನಾಗಬಹುದು ಗೊತ್ತಾ? ಅನುಭವಿ ನಿವೃತ್ತ ಮಾವುತರು ಹೇಳೋದೇನು?JP ಬರೆಯುತ್ತಾರೆ.

ಸಕ್ರೆಬೈಲು ಆನೆ ಬಿಡಾರದ ಇತಿಹಾಸದಲ್ಲಿಯೇ ಇದೆ ಮೊದಲ ಬಾರಿಗೆ ಸೆರೆ ಹಿಡಿದ ಕಾಡಾನೆಯೊಂದನ್ನು ಪುನಃ ಕಾಡಿಗೆ ಬಿಡುವ ಯೋಚನೆಯಲ್ಲಿದೆ ಅರಣ್ಯ ಇಲಾಖೆ. ಇಂತಹದ್ದೊಂದು ತೀರ್ಮಾನಕ್ಕೆ ಹಿರಿಯ ಅಧಿಕಾರಿಗಳು ಬಂದಂತಿದೆ. ಅಧಿಕಾರಿಗಳ ನಿರ್ಧಾರ ಫಲವಾಗಿ ಹಿಡಿದ ಕಾಡಾನೆಗೆ ಹತ್ತು ದಿನ ಕಳೆದರೂ ಪಳಗಿಸುವ ಪ್ರಕ್ರೀಯೆಗೆ ಚಾಲನೆ ನೀಡಿಲ್ಲ. 

ಆಳಕ್ಕಿಯುವ ಮುನ್ನ 

ಬೆಳಗಾವಿ ಜಿಲ್ಲೆಯ ಖಾನಾಪುರ ಕರಂಬಳ, ಚಾಪಗಾಂವ ಹಾಗೂ ಸುತ್ತಮುತ್ತಲಿನ ರೈತರಿಗೆ ತೊಂದರೆ ಕೊಡುತ್ತಿದ್ದ ಕಾಡಾನೆಯನ್ನು ಹಿಡಿಯುವ ಸಲುವಾಗಿ ಶಿವಮೊಗ್ಗದ ಸಕ್ರೆಬೈಲ್‌ ಆನೆ ಬಿಡಾರದಿಂದ ಬಾಲಣ್ಣ, ಸೋಮಣ್ಣ, ಬಹದ್ದೂರ್, ಸಾಗರ ಎಂಬ ಹೆಸರಿನ ನಾಲ್ಕು ಆನೆಗಳು ಬೆಳಗಾವಿಗೆ ತೆರಳಿದ್ದವು. ಪಶುವೈದ್ಯ ಡಾ ರಮೇಶ್ ಹಾಗೂ ಸಕ್ರೆಬೈಲ್‌ನ ಮಾವುತರು ಹಾಗೂ ಕಾವಾಡಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅಂದಾಜು 12 ಲಕ್ಷ ರೂಪಾಯಿ ಮೊತ್ತದ ಕಾರ್ಯಾಚರಣೆಯಲ್ಲಿ ಕಾಡಾನೆಯನ್ನು ಹಿಡಿದಿದ್ದ ಸಕ್ರೆಬೈಲ್‌ ಆನೆ ಬಿಡಾರದ ಟೀಂ, ಅಲ್ಲಿಂದ ಕಾಡಾನೆಯನ್ನು ಸಕ್ರೆಬೈಲ್‌ ಆನೆ ಕ್ಯಾಂಪ್‌ಗೆ ಶಿಫ್ಟ್‌ ಮಾಡಿತ್ತು. 

ಜನವರಿ 9 ರಂದು ಡಾರ್ಟ್ ಮಾಡಿದ ಕಾಡಾನೆಯನ್ನು ಜನವರಿ 10 ಕ್ಕೆ ಸಕ್ರೆಬೈಲ್‌ ಕ್ಯಾಂಪ್‌ ನ ಕ್ರಾಲ್ ಗೆ ಕರೆತರಲಾಗಿತ್ತು. ಸಕ್ರೆಬೈಲು ಇತಿಹಾಸದಲ್ಲಿ ಇಲ್ಲಿವರೆಗೂ ಕ್ರಾಲ್‌ಗೆ ಹೋದ ಆನೆ ಬಿಡಾರದ ಆನೆಯಾಗಿ ಬದಲಾಗುತ್ತಿತ್ತು. ಪುನಃ ಕಾಡಿಗೆ ಹೋದ ಉದಾಹರಣೆಗಳಿಲ್ಲ.ಹಾಗೆ ಕಾಡಿಗೆ ಬಿಡುವ ನಿರ್ಧಾರವಿದ್ದರೇ, ಹಿಡಿದ ಕಾಡಾನೆಯನ್ನು ದಟ್ಟ ಕಾಡಿನ ನಡುವೆ ಬಿಟ್ಟುಬರಲಾಗುತ್ತಿತ್ತೆ ಹೊರತು, ಬಿಡಾರಕ್ಕೆ ತರುತ್ತಿರಲಿಲ್ಲ. ಇದಕ್ಕೆ ಸಾಕ್ಷಿ  ಅಂದರೆ, ಈ ಹಿಂದೆ ದಾಂಡೆಲಿಯಲ್ಲಿ ಸೆರೆ ಹಿಡಿದ ಮರಿಯಾನೆಯನ್ನು ಅಲ್ಲಿಯೇ ಸಮೀಪದ ಕಾಡಿಗೆ ಬಿಡಲಾಗಿತ್ತು. 

ಇನ್ನು ಪ್ರಸ್ತುತ ಸೆರೆ ಹಿಡಿದ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಕಾಡಿಗೆ ಬಿಟ್ಟು, ಅದರ ಚಲನ ವಲನ ಅವಲೋಕಿಸುವ ಅಧ್ಯಯನ ಆಧರಿತ ವ್ಯವಸ್ತೆಯೊಂದಿದೆ. ಆದರೆ ತಜ್ಞರ ಪ್ರಕಾರ, ಇದು ಅರಣ್ಯ ಇಲಾಖೆಯ ಅವೈಜ್ಞಾನಿಕ ಕ್ರಮ. ಮೇಲಾಗಿ ರೇಡಿಯೋ ಕಾಲರ್ ಅಳವಡಿಸಿ ಕಾಡಿಗೆ ಬಿಟ್ಟ ಆನೆ ಪುನಃ ನೈಜ ತಾಣದಲ್ಲಿಯೇ ಕಾಣಿಸಿಕೊಂಡ ಉದಾಹರಣೆಗಳು ಕಣ್ಣ ಮುಂದಿದೆ. ಮಾನವ ಸಂಪರ್ಕ ಇಲ್ಲದ ಕಾಡಾನೆಯೊಂದು ಕ್ರಾಲ್ ಗೆ ಬಂದಾಗ ಸಹಜವಾಗಿಯೇ ಮಾವುತ ಕಾವಾಡಿ ಆನೆಗೆ ಆಹಾರ ಸೊಪ್ಪು ಸೆದೆ ಎಂದು ನೀಡುವ  ಮೂಲಕ ಅದಕ್ಕೆ ಹತ್ತಿರವಾಗುತ್ತಾನೆ. ಮಾನವ ಸಂಪರ್ಕಕ್ಕೆ ಬರುವ ಕಾಡಾನೆ ಕ್ರಾಲ್ ನಲ್ಲಿ ತನಗೆ ಅನಾಯಾಸವಾಗಿ ಸಿಗುವ ಆಹಾರ ಮಾವುತರ ಆರೈಕೆಯನ್ನು ಅಪ್ಪುಗೆಯಿಂದಲೇ ನೋಡುತ್ತದೆ. ಇದೊಂದು ರೀತಿಯಲ್ಲಿ ಆನೆ ಮಾವುತ ನಡುವಿನ ಭಾಂದವ್ಯಕ್ಕೆ ತೂಗು ಸೇತುವೆ ಎಂದರೂ ತಪ್ಪಾಗುವುದಿಲ್ಲ. ಈ ಸಂಪ್ರದಾಯಿಕ ಶೈಲಿಯ ಮೂಲಕ ಕಾಡಾನೆಯೊಂದರ ದೊಸ್ತಿ ಮಾಡಿಕೊಳ್ಳುವ ಮಾವುತರು ಕಾವಾಡಿಗಳು, ಹಾಡು ಸನ್ನೆ ಕೂಗುಗಳ ಮೂಲಕ ಕಾಡಾನೆಯೊಂದರ ನೆತ್ತಿ ಮೇಲೆ ಹತ್ತುವಷ್ಟು ಅಧಿಕಾರ ಪಡೆದುಕೊಳ್ಳುತ್ತಾರೆ. ಕಿವಿಗೆ ಕಾಲ ಬೆರಳ ತುದಿಯೊತ್ತಿ ತೋರಿದ ನಿಶಾನೆಯನ್ನು ಕಾಡಾನೆಯೊಂದು ಪಾಲಿಸುವ ಮಟ್ಟಕ್ಕೆ ತರಬೇತಿ ಪಡೆದುಕೊಳ್ಳುತ್ತದೆ. 

ಇದರ ಹೊರತಾಗಿ ಆನೆಗೆ ವೈಜ್ಞಾನಿಕಲಾಗಿ ತರಬೇತಿ ನೀಡಲು ಸಾಧ್ಯವೇ ಇಲ್ಲ. ಸಾಂಪ್ರಾದಾಯಿಕವಾಗಿ ತಲೆಮಾರುಗಳಿಂದ ಬಂದಿರುವ ಕಲೆಯಿಂದಲೇ ಪ್ರೀತಿ ಪ್ರಾಣ ಎರಡನ್ನು ಪಣಕ್ಕಿಟ್ಟು ಆನೆಯ ಮನಸ್ಸನ್ನು ಗೆಲ್ಲುವ ಮಾವುತ ಮಾತ್ರ ಅದರ ಮೇಲೆ ಸವಾರಿ ಮಾಡಲು ಸಾಧ್ಯ.ತಂತ್ರಜ್ಞಾನ ಎಷ್ಟೆ ಮುಂದುವರೆದಿದ್ದರೂ, ಆನೆ ತರಬೇತಿಗೆ ಈವರೆಗೂ ಯಾವುದೇ ರೋಬೋಟಿಕ್ ತರಬೇತಿ ಇಲ್ಲ ಎಂಬುದು ನಿರ್ವಿವಾದ. ಆದರೆ ಸದ್ಯ ಕ್ರಾಲ್‌ನಲ್ಲಿರುವ ಕಾಡಾನೆಯ ಅಲ್ಲಿ ಬಿಡಾರದ ಸಿಬ್ಬಂದಿ ಸಂಪರ್ಕದಲ್ಲಿದೆಯಾದರೂ, ಅದರ ದಿಕ್ಕು ದೆಸೆಗೆ ಉತ್ತರ ಸಿಗುತ್ತಿಲ್ಲ

ಹತ್ತು ದಿನಗಳ ಪ್ರೀತಿ ಪಡೆದ ಕಾಡಾನೆ ಪುನಃ ಕಾಡು ಸೇರವು ಸಾಧ್ಯವೇ? 

ಈಗ ಖಾನಾಪುರದಿಂದ ಬಂದಿರುವ ಕಾಡಾನೆ ಹತ್ತು ದಿನಗಳಿಂದ ಕ್ರಾಲ್ ನಲ್ಲಿ ಮಾವುತ ಕಾವಾಡಿಯ ಹಗಲು ರಾತ್ರಿಯ ಸೇವೆಯನ್ನು ಪಡೆಯುತ್ತಿದೆ. ಕಾಡಾನೆಯನ್ನು ಪಳಗಿಸದೇ ಇದ್ದರೂ, ದಿನದ ಇಪ್ಪತ್ತು ನಾಲ್ಕು ಗಂಟೆ ಮಾವುತ ಕಾವಾಡಿ ಅದರ ಸಂಪೂರ್ಣ ಜವಬ್ದಾರಿ ಹೊತ್ತಿದ್ದಾರೆ. ಕಾಡಾನೆಗೆ ನೀರು ಆಹಾರ ಎಲ್ಲಾ ರೀತಿ ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಈಗ ಆರೈಕೆ ಮಾಡುತ್ತಿರುವ ಮಾವುತ ಕಾವಾಡಿಗಳನ್ನು  ಕಂಡರೆ ಕಾಡಾನೆ ಪ್ರತಿಕ್ರಿಯಿಸುತ್ತಿದೆ ಎನ್ನಲಾಗುತ್ತದೆ

ಅನುಭವಿ ಮಾವುತರು ಎನನ್ನುತ್ತಾರೆ.?

ಇಂತಹ ಸನ್ನಿವೇಶದಲ್ಲಿ ಕ್ರಾಲ್ ಗೆ ಬಂದು ಹತ್ತು ದಿನ ಮಾನವ ಸಂಪರ್ಕದಲ್ಲಿರುವ ಕಾಡಾನೆಯನ್ನು ಪುನಃ ಕಾಡಿಗೆ ಬಿಟ್ಟರೆ, ಅದು ಪುನಃ ಮಾನವ ಸಂಪರ್ಕ ಯಾಚಿಸಿ ಬರುವ ಸಾಧ್ಯತೆ ಇದೆ. ತನ್ನನ್ನು ಬಿಡುವ ಕಾಡಿನಿಂದ ಹೊರಬಂದು ಅಲ್ಲಿಯೇ ಮನುಷ್ಯರಿರುವ ಜಾಗಕ್ಕೆ ಹೋಗುತ್ತದೆ ಎನ್ನುತ್ತಾರೆ ಅನುಭವಿ ನಿವೃತ್ತ ಮಾವುತರು. ಮನುಷ್ಯರ ರೂಢಿಯಾದ ಆನೆಯನ್ನು ಕಾಡಿಗೆ ಬಿಟ್ಟಾಗ ಹಾನಿ ಹೆಚ್ಚಾಗುತ್ತದೆ. ಕಾಡಿಗೆ ಬಿಟ್ಟರೂ ಆನೆ ಊರಿಗೆ ಬರುವ ಸಾಧ್ಯತೆಗಳು ಹೆಚ್ಚು .ಹೊಲಗದ್ದೆಗಳಿಗೆ ಘೀಳಿಡುವ ಕಾಡಾನೆಯನ್ನು ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಿ ಪುನಃ ಕಾಡಿಗೆ ಬಿಟ್ಟರೂ, ಅದು ಹಳೆ ಛಾಳಿಯನ್ನು ಬಿಡುವುದಿಲ್ಲ ಎಂಬುದು ವೈಲ್ಡ್‌ ಲೈಫ್‌ ತಜ್ಞರ ಅಭಿಪ್ರಾಯ

ಈ ಹಿಂದೆ ಮೂಡಿಗೆರೆಯಲ್ಲಿ ಸೆರೆ ಹಿಡಿದ ಕಾಡಾನೆಯನ್ನು ಸಕ್ರೆಬೈಲು ಕ್ರಾಲ್ ಗೆ ಹಾಕಲಾಗಿತ್ತು. ನಂತರ ಅದನ್ನು ಪುನಃ ಕಾಡಿಗೆ ಬಿಡಲು ಹಿರಿಯ ಅಧಿಕಾರಿಗಳು ನಿರ್ಧರಿಸಿದಾಗ ಬಿಡಾರದ ಸಿಬ್ಬಂದಿಗಳು ವಿರೋಧ ವ್ಯಕ್ತಪಡಿಸಿದ್ದರು. ಆಗ ಕಾಡಿಗೆ ಬಿಡುವ ನಿರ್ಧಾರ ಕೈಬಿಡಲಾಗಿತ್ತು. ಈಗ ಖಾನಾಪುರದ ಆನೆ ಕ್ರಾಲ್ ನಲ್ಲಿದ್ದು ಹತ್ತು ದಿನ ಕಳೆದಿದೆ. ಈಗ ಪುನಃ ಕಾಡಿಗೆ ಬಿಟ್ಟರೂ ಅದು ಜನರಿಗೆ ಸೈಟ್ ಆಗೋದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ. ಲಕ್ಷಾಂತರ ರೂಪಾಯಿ ಸರ್ಕಾರದ ಹಣ ಖರ್ಚು ಮಾಡಿ ಸೆರೆ ಹಿಡಿದ ಕಾಡಾನೆಯನ್ನ ಪಳಗಿಸಿ ತರಬೇತಿ ನೀಡುವುದು ಸೂಕ್ತ. ಇದರಿಂದ ಮಾವುತ ಕಾವಾಡಿಗೆ ಉದ್ಯೋಗ ಸಿಕ್ಕಿದಂತಾಗುತ್ತದೆ. ಇಲಾಖೆಯ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳುವುದಕ್ಕೂ ಸಾಧ್ಯವಾಗುತ್ತದೆ. ಕಾಡಿಗೆ ಬಿಡುವ ನಿರ್ಧಾರ ಸರ್ಕಾರ ಕೈಬಿಡಬೇಕು ಎಂದು ವೈಲ್ಡ್ ಟಸ್ಕರ್ ಸಂಸ್ಥೆ ಕೂಡ ಮನವಿ ಮಾಡಿದೆ.

SUMMARY | Khanapur elephant being released back into the wild from the Sakrebail elephant camp

KEY WORDS |Khanapur elephant released back into the forest,  Sakrebail elephant camp