BSY ವಿರುದ್ದ ಕಿರುಕುಳದ ದೂರು ದಾಖಲಿಸಿದ್ದ ಮಹಿಳೆಯ ಸಾವಿನ ಕುರಿತು ತನಿಖೆಗೆ ಸೂಚನೆ !?

Karnataka State Women’s Commission instruction to police ̧ ಬಿಎಸ್‌ ಯಡಿಯೂರಪ್ಪನವರ ವಿರುದ್ಧ ದೂರಿದ್ದ ಮಹಿಳೆಯ ಸಾವಿನ ಪ್ರಕರಣದ ಸಂಬಂಧ ತನಿಖೆಗೆ ಸೂಚಿಸಲಾಗಿದೆ

BSY ವಿರುದ್ದ ಕಿರುಕುಳದ ದೂರು ದಾಖಲಿಸಿದ್ದ ಮಹಿಳೆಯ ಸಾವಿನ ಕುರಿತು ತನಿಖೆಗೆ ಸೂಚನೆ !?
Karnataka State Women’s Commission, ಬಿಎಸ್‌ ಯಡಿಯೂರಪ್ಪ

SHIVAMOGGA | MALENADUTODAY NEWS | Sep 2, 2024  ಮಲೆನಾಡು ಟುಡೆ 

ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪನವರು ತಮ್ಮ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ದೂರಿದ್ದ ಮಹಿಳೆಯ ಸಾವು ಹಾಗೂ ಆಕೆಯ ಅಂತ್ಯಕ್ರಿಯೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಮಹಿಳಾ ಆಯೋಗ ಸೂಚಿಸಿದೆ.ಈ ಬಗ್ಗೆ ಇಂಡಿಯಾ ಟುಡೆ ವರದಿ ಮಾಡಿದೆ. 

ರಾಷ್ಟ್ರೀಯ ಮಾಧ್ಯಮ ಇಂಡಿಯಾ ಟುಡೆಯ ವರದಿಯ ಪ್ರಕಾರ, ರಾಜ್ಯ ಮಹಿಳಾ ಆಯೋಗ (Karnataka State Women’s Commission) ಅಧ್ಯಕ್ಷ ನಾಗಲಕ್ಷ್ಮೀ ಚೌದರಿಯವರು ಈ ಸಂಬಂಧ ಬೆಂಗಳೂರು ಪೊಲೀಸ್‌ ಕಮಿಷನರ್‌ಗೆ ಪತ್ರ ಬರೆದಿದ್ದು ದೂರುದಾರ ಮಹಿಳೆಯ ಸಾವು ಹಾಗೂ ಆಕೆಯ ಅಂತ್ಯಕ್ರಿಯೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ತಿಳಿಸಿದ್ದಾರೆ 

ಬಿಎಸ್‌ ಯಡಿಯೂರಪ್ಪನವರ ವಿರುದ್ದ ದೂರು ನೀಡಿದ್ದ ಮಹಿಳೆ ಕಳೆದ ಮೇ ತಿಂಗಳಿನಲ್ಲಿ ಸಾವನ್ನಪ್ಪಿದ್ದರು. ಅವರ ಸಾವಿಗೆ ಶ್ವಾಸಕೋಶದ ಕ್ಯಾನ್ಸರ್‌ ಕಾರಣ ಎನ್ನಲಾಗಿತ್ತು. ಇದರ ನಡುವೆ ಕಳೆದ ಮೇ ನಲ್ಲಿ ದೂರುದಾರ ಮಹಿಳೆಯ ಅಂತ್ಯಕ್ರಿಯೆಯನ್ನು ಪೋಸ್ಟ್‌ ಮಾರ್ಟಮ್‌ ನಡೆಸದೇ ನಿರ್ವಹಿಸಲಾಗಿದೆ ಎಂದು ದೂರು ದಾಖಲಾಗಿತ್ತು. ಈ ಸಂಬಂಧ ಇದೀಗ ಮಹಿಳೆಯ ಸಾವು ಹಾಗೂ ಮಹಿಳೆಯ ಅಂತ್ಯಕ್ರಿಯೆಯ ಸುತ್ತಮುತ್ತ ಇರುವ ಅನುಮಾನಗಳ ಬಗ್ಗೆ ತನಿಖೆ ನಡೆಸುವಂತೆ ಮಹಿಳಾ ಆಯೋಗ ಸೂಚಿಸಿದೆ. 

 ಜೂನ್‌, ಜುಲೈ, ಆಗಸ್ಟ್‌ | ಮೂರು ತಿಂಗಳಿನಲ್ಲಿ ರಾಜ್ಯದಲ್ಲಿ ಎಷ್ಟು ಮಳೆಯಾಗಿದೆ? | ಗುಡ್‌ ನ್ಯೂಸ್‌ ಇಲ್ಲಿದೆ



ಇನ್ನಷ್ಟು ಸುದ್ದಿಗಳು

ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?

ಅಗ್ನಿವೀರ್‌ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?

Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?