ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನಕ್ಕೆ ಹಿರಿಯ ಪತ್ರಕರ್ತ ಸಾಹಿತಿ ಶಿವಾನಂದ ಕರ್ಕಿ

Senior journalist and writer Shivananda Karki  , Karki Shivanna ,Thirthahalli taluk  new member of the Kuppali Rashtrakavi Kuvempu Foundation 

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನಕ್ಕೆ ಹಿರಿಯ ಪತ್ರಕರ್ತ ಸಾಹಿತಿ ಶಿವಾನಂದ ಕರ್ಕಿ
Senior journalist and writer Shivananda Karki  , Karki Shivanna ,Thirthahalli taluk  new member of the Kuppali Rashtrakavi Kuvempu Foundation 

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 15, 2024 ‌‌

ಶಿವಮೊಗ್ಗ ಜಿಲ್ಲೆಯಲ್ಲಿರುವ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ನೂತನ ಪದಾಧಿಕಾರಿಯಾಗಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಶಿವಾನಂದ ಕರ್ಕಿ (ಕರ್ಕಿ ಶಿವಣ್ಣ)  ಆಯ್ಕೆಯಾಗಿದ್ದಾರೆ. ಇವರನ್ನ ಮುಂದಿನ ಮೂರು ವರ್ಷದ ಅವಧಿಗೆ ನೇಮಕ ಮಾಡಲಾಗಿದೆ. 

 

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾಗಿ ಡಾ.ಬಿ.ಎಲ್.ಶಂಕರ್‌, ಪದನಿಮಿತ್ತ ಕಾರ್ಯದರ್ಶಿಯಾಗಿ ಶಿವಮೊಗ್ಗ ಜಿಲ್ಲಾಧಿಕಾರಿ, ಸಮಕಾರ್ಯದರ್ಶಿಯಾಗಿ ಕಡಿದಾಳ್‌ ಪ್ರಕಾಶ್‌, ಖಜಾಂಚಿಯಾಗಿ ಡಿ.ಎಂ.ಮನುದೇವ್‌ ನೇಮಕಗೊಂಡಿದ್ದಾರೆ.ಇನ್ನೂ ಸದಸ್ಯರಾಗಿ ಸಾಹಿತಿ ಶಿವಾನಂದ ಕರ್ಕಿ, ಸಿ.ಬಸವಲಿಂಗಯ್ಯ, ಎಸ್.ವಿ.ದಯಾನಂದ, ಡಾ.ಚಿದಾನಂದಗೌಡ, ಎಂ.ಸಿ.ನರೇಂದ್ರ ನೇಮಕವಾಗಿದ್ದಾರೆ. ಪದನಿಮಿತ್ತ ಸದಸ್ಯರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ನಿರ್ದೇಶಕರು, ಶಿವಮೊಗ್ಗ ಉಪ ಅರಣ್ಯ ಸಂಕ್ಷಣಾಧಿಕಾರಿ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರು, ಲೋಕೋಪಯೋಗಿ ಇಲಾಖೆ ಶಿವಮೊಗ್ಗ ವೃತ್ತ ಅಧೀಕ್ಷಕ ಇಂಜಿನಿಯರ್‌, ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು, ಸರ್ಕಾರದ ಆರ್ಥಿಕ ಇಲಾಖೆ ಕಾರ್ಯದರ್ಶಿ, ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಆಹ್ವಾನಿತ ಸದಸ್ಯರಾಗಿ ತೀರ್ಥಹಳ್ಳಿ ಕ್ಷೇತ್ರದ ಶಾಸಕರು, ಹಂಪಿ ಕನ್ನಡ ವಿವಿ ಕುಲಪತಿ, ತೀರ್ಥಹಳ್ಳಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರನ್ನು ನೇಮಿಸಿ ಆದೇಶಿಸಲಾಗಿದೆ.

 

SUMMARY |  Senior journalist and writer Shivananda Karki (Karki Shivanna) from Thirthahalli taluk has been elected as the new member of the Kuppali Rashtrakavi Kuvempu Foundation.

 

KEY WORDS |Senior journalist and writer Shivananda Karki  , Karki Shivanna ,Thirthahalli taluk  new member of the Kuppali Rashtrakavi Kuvempu Foundation