KSRTC | ಹಬ್ಬಕ್ಕಾಗಿ 1500 ವಿಶೇಷ ಬಸ್‌ ಕಲ್ಪಿಸಿದ ಕೆಎಸ್‌ಆರ್‌ಟಿಸಿ | ಎಲ್ಲಿಗೆಲ್ಲಾ ಹೆಚ್ಚುವರಿ ಸೇವೆ? ಇಲ್ಲಿದೆ ವಿವರ

KSRTC to operate 1,500 additional buses for festival rush , ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ,  ಹೊಸಪೇಟೆ, ಕಲಬುರಗಿ, ರಾಯಚೂರು ಸೇರಿದಂತೆ ಹಲವೆಡೆ ಈ ಬಸ್‌ ಸೇವೆ ಲಭಿಸಲಿದೆ

KSRTC | ಹಬ್ಬಕ್ಕಾಗಿ 1500 ವಿಶೇಷ ಬಸ್‌ ಕಲ್ಪಿಸಿದ ಕೆಎಸ್‌ಆರ್‌ಟಿಸಿ | ಎಲ್ಲಿಗೆಲ್ಲಾ ಹೆಚ್ಚುವರಿ ಸೇವೆ? ಇಲ್ಲಿದೆ ವಿವರ

SHIVAMOGGA | MALENADUTODAY NEWS | Sep 3, 2024  ಮಲೆನಾಡು ಟುಡೆ 

ಇನ್ನೇನು ಗಣೇಶೋತ್ಸವಕ್ಕೆ ಕೆಲವೇ ದಿನ ಬಾಕಿ ಇದೆ. ಈ ನಡುವೆ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದ ವಿವಿದೆಡೆ ಸಂಚರಿಸಿಲು ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳನ್ನ ರಸ್ತೆಗಿಳಿಸಿದೆ. 

ಈ ಸಂಬಂಧ  ಕೆಎಸ್‌ಆರ್‌ಟಿಸಿ 1,500ಕ್ಕೂ ಅಧಿಕ ವಿಶೇಷ ಬಸ್‌ಗಳನ್ನು ಓಡಿಸಲು ತೀರ್ಮಾನಿಸಿದೆ. ಈ ಬಸ್‌ಗಳು ಇದೇ ಸೆಪ್ಟೆಂಬರ್‌ ಐದನೇ ತಾರೀಖಿನಿಂದ ಪ್ರಯಾಣ ಆರಂಭಿಸಲಿದೆ. ಸೆಪ್ಟೆಂಬರ್‌ ಏಳವರೆಗೂ ಬೆಂಗಳೂರಿನಿಂದ ರಾಜ್ಯ ವಿವಿಧ ಕಡೆಗಳಲ್ಲಿ ಬಸ್‌ಗಳು ಸಂಚರಿಸಲಿದೆ. ಅಂತಿಮವಾಗಿ ಸೆಪ್ಟೆಂಬರ್‌ 8 ರಂದು ಬೆಂಗಳೂರಿಗೆ ವಾಪಸ್‌ ಆಗಲಿವೆ ಎಂದು ಕೆಎಸ್‌ಆರ್‌ಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಕೆಎಸ್‌ಆರ್‌ಟಿಸಿ

ಕರ್ನಾಟಕ ಸಾರಿಗೆ, ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಇ.ವಿ. ಪವರ್ ಪ್ಲಸ್, ಅಂಬಾರಿ ಕ್ಲಬ್ ಕ್ಲಾಸ್, ಅಂಬಾರಿ ಉತ್ಸವ್ ಹಾಗೂ ಪಲ್ಲಕ್ಕಿ ಸಾರಿಗೆ ಸೇವೆಗಳ ಜೊತೆಗೆ ಹೆಚ್ಚುವರಿ ಬಸ್‌ಗಳ ಸಂಚಾರ ಇರಲಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದ್ದು, ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಬಸ್‌ಗಳು ಹೊರಡಲಿವೆ ಎಂದು ಮಾಹಿತಿ ನೀಡಿದೆ. 

ಎಲ್ಲಿಗೆಲ್ಲಾ ಹೆಚ್ಚುವರಿ ಬಸ್

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ,  ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಹಾಗೂ ನೆರೆಯ ರಾಜ್ಯಗಳ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮದುರೈ, ಪಣಜಿ, ಶಿರಡಿ, ಪುಣೆ, ಎರ್ನಾಕುಲಂ, ಪಾಲ್ಘಾಟ್ 



 ಜೂನ್‌, ಜುಲೈ, ಆಗಸ್ಟ್‌ | ಮೂರು ತಿಂಗಳಿನಲ್ಲಿ ರಾಜ್ಯದಲ್ಲಿ ಎಷ್ಟು ಮಳೆಯಾಗಿದೆ? | ಗುಡ್‌ ನ್ಯೂಸ್‌ ಇಲ್ಲಿದೆ



ಇನ್ನಷ್ಟು ಸುದ್ದಿಗಳು

ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?

ಅಗ್ನಿವೀರ್‌ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?

Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?