KS Eshwarappa | ಶಿವಮೊಗ್ಗ ಪಾಲಿಕೆಯ 35 ವಾರ್ಡ್‌ಗಳಲ್ಲಿಯು ಸ್ಪರ್ಧೆ | ಬಿಜೆಪಿ ಎಲ್ಲಿದೆ ಎಂದು ಕೇಳಿದ್ದೇಕೆ ಕೆಎಸ್‌ ಈಶ್ವರಪ್ಪ

KS Eshwarappa's Rashtrabhakta Balaga contest in 35 wards of Shivamogga city Corporation | ರಾಷ್ಟ್ರ ಭಕ್ತ ಬಳಗದ ಅಭ್ಯರ್ಥಿಗಳು ಪ್ರತ್ಯೇಕ ಚಿಹ್ನೆಯಡಿಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಕೆಎಸ್‌ ಈಶ್ವರಪ್ಪ ತಿಳಿಸಿದರು

KS Eshwarappa | ಶಿವಮೊಗ್ಗ ಪಾಲಿಕೆಯ 35 ವಾರ್ಡ್‌ಗಳಲ್ಲಿಯು ಸ್ಪರ್ಧೆ | ಬಿಜೆಪಿ ಎಲ್ಲಿದೆ ಎಂದು ಕೇಳಿದ್ದೇಕೆ ಕೆಎಸ್‌ ಈಶ್ವರಪ್ಪ
KS Eshwarappas Rashtrabhakta Balaga , ಕೆಎಸ್‌ ಈಶ್ವರಪ್ಪ, ರಾಷ್ಟ್ರ ಭಕ್ತ ಬಳಗ

SHIVAMOGGA | MALENADUTODAY NEWS | Aug 16, 2024  ಮಲೆನಾಡು ಟುಡೆ  

ಶಿವಮೊಗ್ಗ ಮಹಾನಗರ ಪಾಲಿಕೆಯ ಎಲ್ಲಾ 35 ವಾರ್ಡ್‌ಗಳಲ್ಲಿ ಸ್ಪರ್ಧಿಸುತ್ತೇವೆ ಅಂತಾ ರಾಷ್ಟ್ರ ಭಕ್ತ ಬಳಗದ ಮುಖಂಡ ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಷ್ಟ್ರಭಕ್ತ ಬಳಗದಿಂದ 35 ವಾರ್ಡ್ ಗಳಲ್ಲಿ ಸ್ಪರ್ಧಿಸುತ್ತೇವೆ ಎಂದಿದ್ದಾರೆ. ಅಲ್ಲದೆ ರಾಷ್ಟ್ರ ಭಕ್ತ ಬಳಗ ರಾಜಕೀಯ ಸಂಘಟನೆ ಎಂದು ಇನ್ನೂ ರಿಜಿಸ್ಟ್ರೇಷನ್ ಆಗಿಲ್ಲ. ಈ ಕಾರಣಕ್ಕೆ ಬಳಗ ಸ್ಪರ್ಧಿಗಳು ಬೇರೆ ಬೇರೆ ಚಿಹ್ನೆಯಡಿಯಲ್ಲಿ ಸ್ಪರ್ಧಿಸುತ್ತಾರೆ ಎಂದು ತಿಳಿಸಿದರು. 

ಕೆಎಸ್‌ ಈಶ್ವರಪ್ಪ/ KS Eshwarappa

ಇದೇ ಈ ಕೂಡಲೇ ಚುನಾವಣೆ ಘೋಷಣೆಯಾಗಬೇಕು ಎಂದು ಆಗ್ರಹಿಸಿದ ಅವರು, ಕಳೆದ ವರ್ಷ ನವೆಂಬರ್‌ ನಲ್ಲಿ ಪಾಲಿಕೆ ಅವಧಿ ಮುಗಿದಿದ್ದು, ವಾರ್ಡ್‌ ವಿಂಗಡಣೆಗೆ ಇನ್ನೆಷ್ಟು ಸಮಯ ಬೇಕಿದೆ ಎಂದು ಪ್ರಶ್ನಿಸಿದರು. ಇದೀಗ ಚುನಾವಣೆ ನಡೆಸಿ ಆನಂತರ ವಾರ್ಡ್‌ ಹೆಚ್ಚಿಸಲಿ ಎಂದು ತಿಳಿಸಿದರು. 

ಇದೇ ವೇಳೆ ರಾಷ್ಟ್ರ ಭಕ್ತ ಬಳಗದ ವತಿಯಿಂದ ನಮ್ಮ ಸಿದ್ದಾಂತ ಒಪ್ಪಿಕೊಂಡು ಬರುವಂತಹ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡುವುದಾಗಿ ತಿಳಿಸಿದರು. ಅಲ್ಲದೆ ಶಿವಮೊಗ್ಗದಲ್ಲಿ ಬಿಜೆಪಿ ಎಲ್ಲಿದೆ ಎಂದು ಪ್ರಶ್ನಿಸಿದ ಕೆಎಸ್‌ ಈಶ್ವರಪ್ಪ ಶಿಕಾರಿಪುರ ಪುರಸಭೆ, ಡಿಸಿಸಿ ಬ್ಯಾಂಕ್‌ ಹಾಗೂ ಶಿಮುಲ್‌ ಚುನಾವಣೆಯನ್ನು ಉದಾಹರಣೆಯಾಗಿ ಬಳಸಿಕೊಂಡು ಎಲ್ಲೆಡೆ ಬಿಜೆಪಿ ಇದ್ದು ಸಹ ಇಲ್ಲವಾಗಿದೆ ಎಂದಿದ್ದಾರೆ. 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ