ಇದೊಂದು ವಿಚಾರದಲ್ಲಿ BSY ಪರ ನಿಂತ KS ಈಶ್ವರಪ್ಪ | ಬೈರತಿ ಸುರೇಶ್‌, ಶೋಭಾ ಕರಂದ್ಲಾಜೆ ಕ್ಷಮೆ ಕೇಳಲಿ

Former Deputy Chief Minister KS Eshwarappa has said that minister Byrathi Suresh's statement on the death of former Chief Minister BS Yediyurappa's wife is not correct and he should apologise. Shoba Karandlaje, who spoke about the death of Siddaramaiah's son, should also apologise

ಇದೊಂದು ವಿಚಾರದಲ್ಲಿ BSY ಪರ ನಿಂತ KS ಈಶ್ವರಪ್ಪ | ಬೈರತಿ ಸುರೇಶ್‌, ಶೋಭಾ ಕರಂದ್ಲಾಜೆ ಕ್ಷಮೆ ಕೇಳಲಿ
Former Deputy Chief Minister KS Eshwarappa, minister Byrathi Suresh, statement on the death of mytradevi,  former Chief Minister BS Yediyurappa wife, Shoba Karandlaje, death of Siddaramaiah son, 

SHIVAMOGGA | MALENADUTODAY NEWS | ಮಲೆನಾಡು ಟುಡೆ Oct 24, 2024  

ಸಚಿವ ಬೈರತಿ ಸುರೇಶ್‌ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪನವರ ಪತ್ನಿಯವರ ಸಾವಿನ ವಿಚಾರದ ಬಗ್ಗೆ ಆಡಿದ ಮಾತು ಸರಿಯಲ್ಲ ಅವರು ಕ್ಷಮೆ ಕೇಳಬೇಕು ಎಂದು ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ಹೇಳಿದ್ದಾರೆ. 

ಶಿವಮೊಗ್ಗದಲ್ಲಿ ಮಾತನಾಡಿದ ಅವರು ರಾಜಕಾರಣದಲ್ಲಿ ತುಂಬಾ ನೋವಾಗಿರುವ ಘಟನೆ ಎಂದರೆ ಭೈರತಿ ಸುರೇಶ್ ಮೈತ್ರಾ ದೇವಿ ಸಾವಿನ ಬಗ್ಗೆ ಪ್ರಶ್ನೆ ಮಾತಾಡಿದಕ್ಕೆ ತುಂಬಾ ನೋವಾಗಿದೆ. ಸ್ವತಃ ನಮ್ಮ ಅಕ್ಕನ ರೀತಿಯಲ್ಲಿ ಮೈತ್ರಾದೇವಿಯವರಿದ್ದರು.  ಮೈತ್ರಾದೇವಿ ಸಾವು ಆಕಸ್ಮಿಕ

ನನಗೆ ಇಷ್ಟು ನೋವಾಗಿದೆ ಎಂದರೆ ಮೈತ್ರಾದೇವಿಯ ಹೆಣ್ಣುಮಕ್ಕಳಿಗೆ ಎಷ್ಟು ನೋವಾಗಿರಬೇಡ. ಮಂತ್ರಿ ಆಗಿರುವವರು ತಮ್ಮ ಮೇಲಿನ ಆಪಾದನೆಗಳನ್ನು ಮುಚ್ಚಿಹಾಕಲು ಮೈತ್ರಾದೇವಿ ಸಾವಿನ ಬಗ್ಗೆ ಪ್ರಸ್ತಾಪಿಸಿರೋದು ನನಗೆ ನೋವಾಗಿದೆ ಎಂದರು 

ನಿಮ್ಮ ರಾಜಕಾರಣಕ್ಕಾಗಿ ಏನು ಬೇಕಾದರೂ ಮಾತಾಡಿ ಆದ್ರೆ ಸ್ವರ್ಗದಲ್ಲಿ ಇರುವ ಆ ತಾಯಿಯ ಬಗ್ಗೆ ಮಾತಾಡಬೇಡಿ, ಭೈರತಿ ಸುರೇಶ್ ಮಾತಾಡಿದ್ರೂ  ಅಂತ ಶೋಭಾ ಕರಂದ್ಲಾಜೆ  ಸಿದ್ದರಾಮಯ್ಯ ಮಗನ ಸಾವಿನ ಬಗ್ಗೆ ಹೇಳಿದ್ದಾರೆ. ಇದರಿಂದ ಮೊದಲೇ ನೋವಲ್ಲಿ ಇರುವ ಪಾರ್ವತಮ್ಮಗೆ ಇನ್ನೆಷ್ಟು ನೋವಾಗಿರಬಹುದು.ಇವರಿಬ್ಬರ ಹೇಳಿಕೆಯನ್ನು ಸಹ  ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

ಸ್ವಲ್ಪನಾದರೂ ನೈತಿಕತೆ ಇಟ್ಟುಕೊಂಡು ರಾಜಕಾರಣ ಮಾಡಿ ಎಂದ ಈಶ್ವರಪ್ಪನವರು ಬೈರತಿ ಸುರೇಶ್‌ರಿಗೆ ದೊಡ್ಡತನ ಇದ್ರೆ ರಾಜ್ಯದ ಜನರ ಕ್ಷೇಮೆ ಕೇಳಲಿ ಎಂದ ಈಶ್ವರಪ್ಪನವರು ಪೇಜಾವರ ಶ್ರೀಗಳ ಬಗ್ಗೆ ಮಾತಾಡೋಕೆ ಬಿ.ಕೆ ಹರಿಪ್ರಸಾದ್ ಗೆ ಯೋಗ್ಯತೆ ಇದೆಯಾ ಎಂದು ಪ್ರಶ್ನಿಸಿದ್ದಾರೆ. 

ಜಾತಿಗಣತಿ ಬಗ್ಗೆ ಅನೇಕ ಸ್ವಾಮೀಜಿಗಳು ಅವರ ಅಭಿಪ್ರಾಯ ಹೇಳಿದ್ದಾರೆ, ರಕ್ತವನ್ನು ಬೇವರ ರೂಪದಲ್ಲಿ ಸುರಿಸಿ ಇಂದು ಅಯೋಧ್ಯೆಯಲ್ಲಿ ರಾಮಮಮಂದಿರ ಕಟ್ಟಿದ್ದಾರೆ, ಅಯೋಧ್ಯೆ ಬಗ್ಗೆ ಮಾತಾಡೋಕೆ ಹರಿಪ್ರಸಾದ್ ಗೆ ಯೋಗ್ಯತೆ ಇಲ್ಲ, ಹರಿಪ್ರಸಾದ್ ಸಾಧು ಸಂತರ ಬಗ್ಗೆ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಎಚ್ಚರಿಸಿದರು. ಮುಖ್ಯಮಂತ್ರಿ ಸ್ಥಾನ ಹೋಗುತ್ತೆ ಅಂತ ಜಾತಿಗಣತಿ ಜಾರಿಗೆ ತರುತ್ತಿಲ್ವ ಎಂದು ವ್ಯಂಗ್ಯವಾಡಿದ ಕೆಎಸ್‌ ಈಶ್ವರಪ್ಪನವರು ಪೇಜಾವರ ಮಠದ ಶ್ರೀಗಳ ಬಗ್ಗೆ ಹಗುರವಾಗಿ ಮಾತಾಡಿದಕ್ಕೆ ಕ್ಷೇಮೆ ಕೇಳಬೇಕು ಎಂದು ಆಗ್ರಹಿಸಿದರು

ಯೋಗೆಶ್ವರ್ ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ ರಾಜಕಾರಣದಲ್ಲಿ ಯಾರು ಶಾಶ್ವತ  ಶತ್ರುಗಳಲ್ಲ ಮಿತ್ರರೂ ಅಲ್ಲ ಎಂದ ಮಾಜಿ ಸಚಿವರು ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಮಗನಿಗೆ ಟಿಕೆಟ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ  ಬಿಜೆಪಿಯಲ್ಲಿ ಈಗ ಸಿದ್ದಾಂತವೇ ಇಲ್ಲದಂತಾಗಿದೆ ಎಂದು ಟೀಕಿಸಿದರು. 

ಮೂರು ಪಕ್ಷದಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ. ಮೋದಿಯವರಿಗೆ ಅಪಮಾನ ಮಾಡುವ ರೀತಿಯಲ್ಲಿ ಬಿಜೆಪಿಯಲ್ಲಿ ನಡೆಯುತ್ತಿದೆ. ಕೇವಲ ಬೊಮ್ಮಾಯಿ ಮಗನಿಗೆ ಟಿಕೆಟ್ ನೀಡಿರೋ ಬಗ್ಗೆ ಅಲ್ಲ. ಹಿಂದೂತ್ವ ಇಲ್ಲದೇ ಕೇವಲ ಕುಟುಂಬ ರಾಜಕಾರಣ ನಡೆಯುತ್ತಿದೆ. ಜಗ್ನನಾಥ್ ಜೋಷಿ ಅಂತವರು ಮಂಡಕ್ಕಿ ತಿಂದು ಪಕ್ಷ ಕಟ್ಟಿದ್ದಾರೆ. ಹಿಂದೂತ್ವದ ಮೂಲಭೂತ ಸಿದ್ದಾಂತ ಇಟ್ಟುಕೊಂಡು ಬಿಜೆಪಿ ಪಕ್ಷ ಬೆಳೆದಿದ್ದು, ಈ ಎಲ್ಲಾ ಸಿದ್ದಾಂತಗಳು ಇಂದು ಬಿಜೆಪಿಯಿಂದ ಪಕ್ಕಕ್ಕೆ ಹೋಗುತ್ತಿದೆ ಎಂದು ದೂರಿದರು.

ಬಿಜೆಪಿಯಿಂದ ಕಾಂಗ್ರೆಸ್ ಗೆ ಇನ್ನೂ ಆರೆಳು ಜನ ಬರುವರಿದ್ದಾರೆ ಎನ್ನುವ ಡಿ ಕೆ ಸುರೇಶ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಬಾಂಬ್ ಹೊಡಿಯುವ ಕೆಲಸ  ಡಿಕೆ ಸುರೇಶ್ ಮಾಡೊದು ಬೇಡ. ಆ ಆರೇಳು ಜನ ಯಾರೇಂದು ಹೆಸರು ಹೇಳಲಿ ನೋಡೋಣ ಎಂದರು. ಇದೇ ವೇಳೆ ರಾಜಕಾರಣದಲ್ಲಿ ಇರುವವರು ಸ್ವಾರ್ಥಕ್ಕಾಗಿ ಸಿದ್ದಾಂತ ಮರೆಯುತ್ತಿದ್ದಾರೆ ಎಂದ ಅವರು,  ಜಾತಿರಾಜಕಾರಣ,ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಗೆಲ್ಲೋದಲ್ಲ ಎಂದರು   

ಇಂದಲ್ಲಾ ನಾಳೆ ಬಿಜೆಪಿ ಪಕ್ಷ ಶುದ್ದೀಕರಣ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಕೆಎಸ್‌ ಈಶ್ವರಪ್ಪ ಬ್ರೀಗೇಡ್ ಸ್ಥಾಪನೆ ವಿಚಾರವಾಗಿ ಮಾತನಾಡ್ತಾ ಹಿಂದೂತ್ವ ಹಾಗು ರಾಷ್ಟಭಕ್ತಿ ಬೆಳೆಸುವ ನಿಟ್ಟಿನಲ್ಲಿ ಸಂಘಟನೆ ಆಗಲಿದೆ ಎಂದರು.  ಎಲ್ಲಾ ಸಮುದಾಯದವರು ಈ ಸಂಘಟನೆಯಲ್ಲಿ ಇರಲಿದ್ದಾರೆ. ಸಕ್ರಾಂತಿ ಸಂದರ್ಭದಲ್ಲಿ ಸಾವಿರ ಜನ ಸಾಧು ಸಂತರು ಹಾಗೂ ಒಂದು ಲಕ್ಷ ಜನ ದೇಶ ಭಕ್ತರು ಸೇರಲಿದ್ದಾರೆ ಎಂದು ತಿಳಿಸಿದ ಅವರು, ಸಂಗೋಳ್ಳಿ ರಾಯಣ್ಣ ಬ್ರೀಗೆಡ್‌ ನಿಲ್ಲಿಸಿ ಈ ಹಿಂದೆ ದೊಡ್ಡ ತಪ್ಪು ಮಾಡಿದ್ದೇನೆ ಎಂದರು

 

SUMMARY |  Former Deputy Chief Minister KS Eshwarappa has said that minister Byrathi Suresh's statement on the death of former Chief Minister BS Yediyurappa's wife is not correct and he should apologise. Shoba Karandlaje, who spoke about the death of Siddaramaiah's son, should also apologise




KEYWORDS | Former Deputy Chief Minister KS Eshwarappa, minister Byrathi Suresh, statement on the death of mytradevi,  former Chief Minister BS Yediyurappa wife, Shoba Karandlaje, death of Siddaramaiah son,