ಜೋಗ್‌ ಫಾಲ್ಸ್‌ ಗೆ ಎಂಟ್ರಿ ಕೊಟ್ಟ ಕೆಡಿ ಟೀಂ | ದ್ರುವಾ ಸರ್ಜಾ ಸಿನಿಮಾ ಶೂಟಿಂಗ್‌ ಶಿವಮೊಗ್ಗದಲ್ಲಿ | ಪ್ರೇಮ್‌ ಹೇಳಿದ್ದೇನು?

Sandalwood star director Prem has arrived at Jog Falls in Shivamogga along with the KD team for the shooting of the film

ಜೋಗ್‌ ಫಾಲ್ಸ್‌ ಗೆ ಎಂಟ್ರಿ ಕೊಟ್ಟ ಕೆಡಿ ಟೀಂ | ದ್ರುವಾ ಸರ್ಜಾ ಸಿನಿಮಾ ಶೂಟಿಂಗ್‌ ಶಿವಮೊಗ್ಗದಲ್ಲಿ | ಪ್ರೇಮ್‌ ಹೇಳಿದ್ದೇನು?
KD's arrival at Jog Falls

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 21, 2024

ಶಿವಮೊಗ್ಗ | ಸ್ಟಾರ್‌ ಡೈರೆಕ್ಟರ್‌ ಪ್ರೇಮ್‌ ರ ಅಪ್‌ಕಮ್ಮಿಂಗ್‌ ಸಿನಿಮಾ ಕೆ.ಡಿ (KD)̤ ಸದ್ಯ ವಿಶೇಷ ಅಂದರೆ, ಈ ಸಿನಿಮಾದ ಬಗ್ಗೆ ಸ್ವತಃ ನಿರ್ದೇಶಕ ಪ್ರೇಮ್‌ ಅಪ್‌ಡೇಟ್‌ವೊಂದನ್ನ ನೀಡಿದ್ದಾರೆ. ಅದೇನಂದರೆ ಈ ಸಿನಿಮಾದ ಚಿತ್ರೀಕರಣ ಶಿವಮೊಗ್ಗದಲ್ಲಿ ನಡೆಯುತ್ತಿದೆ. ಅದರಲ್ಲಿಯು ಸಾಗರ ತಾಲ್ಲೂಕು ಜೋಗ್‌ ಫಾಲ್ಸ್‌ನಲ್ಲಿ ಸಿನಿಮಾದ ಶೂಟಿಂಗ್‌ ಪ್ರಾರಂಭವಾಗಿದೆ. ಈ ಬಗ್ಗೆ ವಿಡಿಯೋ ಅಪ್‌ಡೇಟ್‌ ನೀಡಿರುವ ನಿರ್ದೇಶಕ ಪ್ರೇಮ್‌ ಶಾರ್ಟ್‌ ವಿಡಿಯೋವೊಂದನ್ನ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. 

 

ಚಿತ್ರದ  ಶೂಟಿಂಗ್‌ಗಾಗಿ ಸಿನಿಮಾ ತಂಡದೊಂದಿಗೆ ಶಿವಮೊಗ್ಗದ ಜೋಗ್‌ ಫಾಲ್ಸ್‌ ಗೆ ಆಗಮಿಸಿರುವ ನಿರ್ದೇಶಕ  ಪ್ರೇಮ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಅದರ ಬಗ್ಗೆ ವಿಡಿಯೋ  ಮಾಹಿತಿ ನೀಡಿದ್ದಾರೆ. ಆ ವಿಡಿಯೋದಲ್ಲಿ ನಮ್ಮ ತಂಡವೆಲ್ಲ ಇಂದು ಕೆಡಿ ಶೂಟಿಂಗ್‌ ಗಾಗಿ ಶಿವಮೊಗ್ಗದ ಜೋಗ್‌ ಫಾಲ್ಸ್‌ ಗೆ ಭೇಟಿ ನೀಡಿದ್ದೇವೆ ಎಂದಿದ್ದಾರೆ. 

 

ಈ ಹಿಂದೆ ಪ್ರೇಮ್‌ ಚಿಕ್ಕಮಗಳೂರಿಗೆ ಕೆಡಿ ಶೂಟಿಂಗ್‌ ಆಗಮಿಸಿದ್ದರು, ಹಾಗೆಯೇ ಅದರ ವಿಡಿಯೋವನ್ನು ಹಂಚಿಕೊಂಡಿದ್ದರು, ಇದೀಗ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಇನ್ನೂ  ಕೆಡಿ ಚಿತ್ರದಲ್ಲಿ ದ್ರುವ ಸರ್ಜಾ ನಾಯಕನಾಗಿ ನಟಿಸುತ್ತಿದ್ದು, ಈ ಚಿತ್ರಕ್ಕೆ ಕೆವಿಎನ್‌ ಸಂಸ್ಥೆ ಬಂಡವಾಳ ಹೂಡಿದೆ, ಈ ಚಿತ್ರ 2025 ರಿಲೀಸ್‌ ಆಗಲಿದೆ.

 

SUMMARY|Sandalwood star director Prem KD has arrived at Jog Falls in Shivamogga along with the team for the shooting of the film.



KEY WORDS| kd movie, director prem, Jog Falls, Shivamogga, kannadanews,