ಬಳ್ಳಾರಿ ಜೈಲಲ್ಲಿಯು ದರ್ಶನ್‌ಗೆ ಸಿಗುತ್ತಾ ಅದೆಲ್ಲಾ?! | ಸೆರೆವಾಸ ಅನುಭವಿಸಿದ ರೌಡಿ ಲೋಕ ಏನು ಹೇಳುತ್ತೆ? JP EXCLUSIVE

Jp exclusive story on darshan | ಬಳ್ಳಾರಿ ಜೈಲಿಗೆ ಇಂದು ಬೆಳಗ್ಗೆ ದರ್ಶನ್‌ ತೂಗುದೀಪರವರನ್ನ ಶಿಫ್ಟ್‌ ಮಾಡಲಾಗಿದೆ. ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಗಿದೆ

ಬಳ್ಳಾರಿ ಜೈಲಲ್ಲಿಯು ದರ್ಶನ್‌ಗೆ ಸಿಗುತ್ತಾ ಅದೆಲ್ಲಾ?! |  ಸೆರೆವಾಸ ಅನುಭವಿಸಿದ ರೌಡಿ ಲೋಕ ಏನು ಹೇಳುತ್ತೆ? JP EXCLUSIVE
darshan thoogudeepa photo, parappana Agrahara, ದರ್ಶನ್‌ ತೂಗುದೀಪ, ಪರಪ್ಪನ ಅಗ್ರಹಾರ , ಬಳ್ಳಾರಿ ಜೈಲು,

SHIVAMOGGA | MALENADUTODAY NEWS | Aug 29, 2024  

ನಟ ದರ್ಶನ್‌ ತೂಗುದೀಪ ಬಳ್ಳಾರಿ ಜೈಲಿಗೆ ಶಿಫ್ಟ್‌ ಆಗಿದ್ದಾರೆ. ಹಾಗಾದರೆ ಪರಪ್ಪನ ಅಗ್ರಹಾರದಲ್ಲಿ ಸಿಕ್ಕ ಅನಧಿಕೃತ ಸವಲತ್ತುಗಳು ಅಲ್ಲಿ ಸಿಗೋದಿಲ್ವಾ? ಈ ಬಗ್ಗೆ ರೌಡಿ ವಲಯ ಏನು ಹೇಳುತ್ತದೆ? ಅದನ್ನೆ ಹೇಳುತ್ತೇವೆ ಓದಿ 

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ #dboss ದರ್ಶನ್‌ ತೂಗುದೀಪರವರಿಗೆ ರಾಜಾತಿಥ್ಯ ನೀಡಲಾಗ್ತಿದೆ ಅನ್ನೋದಕ್ಕೆ ವೈರಲ್‌ ವಿಡಿಯೋ ಹಾಗೂ ಫೋಟೋಗಳು ಸಾಕ್ಷ್ಯ ಹೇಳಿದ ಬೆನ್ನಲ್ಲೆ ಸರ್ಕಾರ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನ ಬೇರೆ ಬೇರೆ ಜೈಲಿಗೆ ಶಿಫ್ಟ್‌ ಮಾಡಿದೆ. 

ಈ ಪೈಕಿ ದರ್ಶನ್‌ ಇವತ್ತು ಬಳ್ಳಾರಿ ಜೈಲಿಗೆ ಶಿಫ್ಟ್‌ ಆಗಿದ್ದಾರೆ. ಕೈದಿ ನಂಬರ್‌ 511ನ್ನ ಪಡೆದುಕೊಂಡಿರುವ ದರ್ಶನ್‌ಗೆ  ಸ್ವತಂತ್ರ ಪೂರ್ವದಲ್ಲಿ ನಿರ್ಮಾಣವಾದ ಬಳ್ಳಾರಿ ಜೈಲು ಕಷ್ಟ ಕಷ್ಟ ಎನಿಸುತ್ತಾ? ಬ್ರಿಟೀಷ್‌ ಜಮಾನದಲ್ಲಿ ಬಂಧನಕೊಳಗಾದ ಕೈದಿಗಳ ಪಾಲಿಗೆ ಕಠಿಣ ಸಜೆಯ ಕಾರಾಗೃಹವಾಗಿದ್ದ ಜೈಲು ದರ್ಶನ್‌ಗೆ ಈಗಲೂ ಬಳ್ಳಾರಿಯ ಬಿಸಿಲ ರುಚಿ ತೋರಿಸುತ್ತಾ? 

ಹೀಗೊಂದು ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಾಗ ಸಿಕ್ಕಿದ್ದು, ಬೇರೆಯದ್ದೆ ಉತ್ತರ ಹೌದು, ಬಳ್ಳಾರಿ ಜೈಲು ಅನ್ನೋದಕ್ಕೆ  ಕ್ರೈಂ ವಲಯದಲ್ಲಿ ಬೇರೆಯದ್ದೆ ವ್ಯಾಖ್ಯಾವನವಿದೆ.ರಾಜ್ಯದಲ್ಲಿರುವ ಎಲ್ಲಾ ಜೈಲುಗಳಿಗಿಂತ ಎಲ್ಲ ಜೈಲುಗಳಿಗಿಂತ ಅತ್ಯಂತ ಈಸಿ ಅಕ್ಸಸೇಬಲ್ ಜೈಲ್ ಅನ್ನೋದಿದ್ರೆ ಅದು ಬಳ್ಳಾರಿ ಜೈಲ್ ಎನ್ನುತ್ತಿದೆ ಪಾತಕ ಲೋಕ  

ಇತ್ತೀಚಿನ ವರ್ಷಗಳಲ್ಲಿ ಬಂದಂತಹ ಬಹುತೇಕ ರೌಡಿಗಳು ಬಳ್ಳಾರಿ ಜೈಲಿನಲ್ಲಿಯೇ ರಾಜಾತಿಥ್ಯ ಪಡೆದುಕೊಂಡಿದ್ದಾರೆ. ಅಲ್ಲಿ ಎಣ್ಣೆ ಗಾಂಜಾ ಸಿಗರೇಟು ಎಲ್ಲವೂ ಕೂಡ ದುಡ್ಡು ಕೊಟ್ಟರೆ ಅನಯಾಸವಾಗಿ ಸಿಗುತ್ತದೆ ಎನ್ನುತ್ತಿದ್ದಾರೆ ಕ್ರೈಂ ಲೋಕದ ಮಂದಿ



ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಾದರೆ ಅದು ರಾಜಧಾನಿಯ ಕೇಂದ್ರ ಸ್ಥಾನದಲ್ಲಿರುವುದರಿಂದ ಅಲ್ಲಿ ಹೇಳುವವರು ಕೇಳುವವರು ಇದ್ದಾರೆ. ಅಲ್ಲದೆ ಅಲ್ಲಿನ ಡಿಮ್ಯಾಂಡ್‌ಗಳನ್ನ ಯಾರೇ ಆದರೂ ಪೂರೈಸುವುದು ಕಷ್ಟ. ಆ ಕಾರಣ ದೊಡ್ಡ ದೊಡ್ಡ ವಿಐಪಿ ಗಳಿಗೆ ಮಾತ್ರ ಅಲ್ಲಿ ರಾಜಾತಿಥ್ಯ ಸಿಗುತ್ತದೆ ಎನ್ನಲಾಗುತ್ತದೆ. 

ಆದರೆ ಬಳ್ಳಾರಿ ಜೈಲಿನಲ್ಲಿ ಇಂತಹ ರೌಡಿಗಳಿಗೆ ಎಲ್ಲ ವ್ಯವಸ್ಥೆಗಳು ಅನಾಯಾಸವಾಗಿ ಸಿಗುತ್ತದೆಯಂತೆ. ಬೆಂಗಳೂರಿಗೆ ಹೋಲಿಸಿದರೆ ಕಡಿಮೆ ವೆಚ್ಚದಲ್ಲಿಯೇ ಇಲ್ಲಿನ ವಿಚಾರಣಾದೀನ ಕೈದಿಗಳು ಹಾಗೂ ಸಜಾ ಬಂಧಿಗಳು ತಮಗೆ ಬೇಕಿರೋದನ್ನ ಪಡೆಯುತ್ತಾರೆ. ಇನ್ನೂ ದರ್ಶನ್‌ರಂತಹ ಸೂಪರ್‌ ಸ್ಟಾರ್‌ಗೆ ಬಳ್ಳಾರಿ ಜೈಲು ಸಸ್ತಾ ವ್ಯಾಪಾರ ಇದ್ದಾಗೆ ಅನ್ನುತ್ತಾರೆ ಬಳ್ಳಾರಿ ಜೈಲಿನಿಂದ ಹಿಂದೆಯೇ ಬಿಡುಗಡೆಯಾದ ವ್ಯಕ್ತಿಯೊಬ್ಬರು



ಮತ್ತೊಂದೆಡೆ ಬಳ್ಳಾರಿ ಜೈಲುವಾಸ ಕಂಡಂತಹ ಮಾಜಿ ರೌಡಿ ಒಬ್ಬರು ರಾಜ್ಯದಲ್ಲಿಯೇ ಎಲ್ಲ ಜೈಲುಗಳಿಗಿಂತ  ಬಳ್ಳಾರಿ ಜೈಲು ಕೈದಿಗಳಿಗೆ ಸ್ವರ್ಗ ಇದ್ದಂತೆ ಎನ್ನುತ್ತಾ ನಗುತ್ತಾರೆ. ಇದೇ ಮಾತನ್ನ ಮಲೆನಾಡು ಟುಡೆಗೆ ಪಾತಕ ಲೋಕದ ಹಲವು ಮಂದಿ ಹೇಳಿದ್ದಾರೆ. 

ಅಧಿಕಾರಿಗಳೇ ಆಗಲಿ, ಸಿಬ್ಬಂದಿಯೇ ಆಗಲಿ ಸಲ್ಲದನ್ನ ಕೊಟ್ಟು ಸಸ್ಪೆಂಡ್‌ ಆಗೋದಕ್ಕೆ ಇಷ್ಟ ಪಡೋದಿಲ್ಲ. ಸೀಕ್ರೆಟ್‌ ಆಗಿ ನಡೆಯುವ ವಹಿವಾಟು ಬಹಿರಂಗಗೊಂಡು ಪರಪ್ಪನ ಅಗ್ರಹಾರದ ಸ್ಟಾರ್‌ ಗಳು ಅಮಾನತ್ತಾಗಿದ್ದಾರೆ. ಕಾರಾಗೃಹ ಇಲಾಖೆಗೆ ಶಶಿಕಲಾ ಮಾದರಿಯ ಇನ್ನೊಂದು ಉದಾಹರಣೆ ದರ್ಶನ್‌ರದ್ದಾಗಿದೆ. ಬೆಂಗಳೂರಿನಲ್ಲಿ ನಡೆದ ಹಾಗೆ ಬಳ್ಳಾರಿಯಲ್ಲಿ ಆಗುವ ಸಾಧ್ಯತೆ ಕಡಿಮೆಯೇ. ಆದಾಗ್ಯು ಬಂಧಿಖಾನೆಯ ಒಳಗೆ ಮತ್ತೆ ತಪ್ಪು ನಡೆಯಬಾರದೆಂದರೆ, ಕೊನೆಪಕ್ಷ ಇಲಾಖೆ ಹಾಗೂ ಸರ್ಕಾರ ಎಚ್ಚರಿಕೆ ವಹಿಸಬೇಕಿದೆ. 

ಇನ್ನಷ್ಟು ಸುದ್ದಿಗಳು