ಅರಣ್ಯ ಸಚಿವರ ಗಮನಕ್ಕೆ ಬರುತ್ತಿಲ್ಲವೇ ಮಲೆನಾಡಿನ ವೈಲ್ಡ್‌ ಅನಿಮಲ್‌ ರೆಸ್ಕ್ಯೂ ಸೆಂಟರ್‌ ಕಥೆ ವ್ಯಥೆ | JP ಬರೆಯುತ್ತಾರೆ

Wild Animal Rescue Centre in Malnad , ವೈಲ್ಡ್‌ ಅನಿಮಲ್‌ ರೆಸ್ಕ್ಯೂ ಸೆಂಟರ್‌, ಶಿವಮೊಗ್ಗ

ಅರಣ್ಯ ಸಚಿವರ ಗಮನಕ್ಕೆ ಬರುತ್ತಿಲ್ಲವೇ ಮಲೆನಾಡಿನ ವೈಲ್ಡ್‌ ಅನಿಮಲ್‌ ರೆಸ್ಕ್ಯೂ ಸೆಂಟರ್‌ ಕಥೆ ವ್ಯಥೆ |  JP ಬರೆಯುತ್ತಾರೆ
Wild Animal Rescue Centre in Malnad , ವೈಲ್ಡ್‌ ಅನಿಮಲ್‌ ರೆಸ್ಕ್ಯೂ ಸೆಂಟರ್‌, ಶಿವಮೊಗ್ಗ

SHIVAMOGGA | MALENADUTODAY NEWS | ಮಲೆನಾಡು ಟುಡೆ 

Oct 3, 2024  |  SHIVAMOGGA WILD LIFE |  ವೈಲ್ಡ್ ಅನಿಮಲ್ ರೆಸ್ಕ್ಯೂ ಸೆಂಟರ್ ನ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ, ಉದ್ಘಾಟನೆಗೊಳ್ಳಲು ವಿಳಂಬವೇಕೆ.?.ಕಬ್ಬಿಣ ತುಕ್ಕು ಹಿಡಿದ ನಂತರ ಟೇಪ್ ಕಟ್ ಮಾಡುವರೇ ಅರಣ್ಯ ಸಚಿವರು? ಜೆಪಿ ಬರೆಯುತ್ತಾರೆ

ಜೆಪಿ ಬರೆಯುತ್ತಾರೆ 

ಕೇಂದ್ರ ಹಾಗು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ, ಅರಣ್ಯ ಇಲಾಖೆಯ ಕಾಮಗಾರಿಯೊಂದು ನೆನೆಗುದಿಗೆ ಬಿದ್ದಿರುವುದು ತಡವಾಗಿ ಬೆಳಕಿಗೆ ಬಂದಿದೆ. ತ್ವರಿತಗತಿಯಲ್ಲಿ ಕಾಮಗಾರಿ ನಡೆದು ಪೂರ್ಣಗೊಂಡಿದ್ದರೆ..ಈ ಯೋಜನೆಗೆ ಅರಣ್ಯ ಮಂತ್ರಿಗಳು ಉದ್ಘಾಟನೆ ಮಾಡಿ ಆರು ತಿಂಗಳೇ ಕಳೆದಿರುತ್ತಿತ್ತು...ಮಲೆನಾಡಿನ ಬೇರೆಲ್ಲಾ ವಿಚಾರ ಸಮಸ್ಯೆಗಳ ಬಗ್ಗೆ ಗಮವ ಹರಿಸುತ್ತಿರುವ ಅರಣ್ಯ ಸಚಿವರು ವಿಳಂಬವಾಗಿರುವ ಈ ಕಾಮಗಾರಿಯ ಬಗ್ಗೆಯು ಗಮನಹರಿಸಬೇಕಿದೆ. ಆದಾಗ್ಯು ಅವರ ಕಣ್ಣಿಗೆ ಈ ವಿಚಾರ ಕಾಣದಿರುವುದು ಏಕೆ ಎಂಬುದು ಬಹುಮುಖ್ಯ ಸಂಗತಿ 

 ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ

ಶಿವಮೊಗ್ಗ ಹೊರವಲಯದ ತ್ಯಾವರೆಕೊಪ್ಪ ಹುಲಿಸಿಂಹಧಾಮದ ಪಕ್ಕದಲ್ಲಿ ವೈಲ್ಡ್ ಎನಿಮಲ್ ರೆಸ್ಕ್ಯೂ ಸೆಂಟರ್ ಕಾಮಗಾರಿ ನಡೆಯುತ್ತಿದೆ. ರಾಜ್ಯದಲ್ಲಿ ಮೈಸೂರು ಬನ್ನೆರುಘಟ್ಟ ಮತ್ತು ಹಂಪಿಯನ್ನು ಹೊರತು ಪಡಿಸಿದರೆ, ವೈಲ್ಡ್ ಅನಿಮಲ್ ರೆಸ್ಕ್ಯೂ ಸೆಂಟರ್ ನ್ನು ಮಲೆನಾಡಿನಲ್ಲಿ ತೆರೆಯಲಾಗುತ್ತಿದೆ.

ರಾಜ್ಯದಲ್ಲಿ ಅತೀ ಹೆಚ್ಚು ಅರಣ್ಯ ಮತ್ತು  ಅಭಯಾರಣ್ಯ ಹಾಗು ವನ್ಯಜೀವಿಗಳನ್ನು ಹೊಂದಿರುವ ಶಿವಮೊಗ್ಗ ಚಿಕ್ಕಮಗಳೂರು ಉತ್ತರ ಕನ್ನಡ ಭಾಗದ ವನ್ಯಜೀವಿಗಳಿಗೆ ಈ ರೆಸ್ಟ್ಯೂ ಸೆಂಟರ್ ಸಂಜೀವಿನಿಯಾಗಲಿದೆ. ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಈ ಜಿಲ್ಲೆಗಳಲ್ಲಿ ರಾಜ್ಯ ಹಾಗು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೊಗಿದ್ದು ವನ್ಯಜೀವಿಗಳಿಗೆ ವಾಹನ ಅಪಘಾತಗಳಾಗುವ ಸಂದರ್ಭ ಹೆಚ್ಚಿದೆ. ಹೀಗೆ ಅಪಘಾತಕ್ಕಿಡಾಗುವ ವನ್ಯಪ್ರಾಣಿಗಳನ್ನು ಇಲ್ಲಿಂದ ಮೈಸೂರಿನ ರೆಸ್ಕ್ಯೂ ಸೆಂಟರ್ ಗೆ ಸಾಗಿಸಬೇಕಾದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಸಾವಿಗೀಡಾಗಿವೆ. ಹಾಗಾಗಿ ಸ್ಥಳೀಯವಾಗಿ ವೈಲ್ಡ್‌ ಅನಿಮಲ್‌ ರೆಸ್ಕ್ಯೂ ಸೆಂಟರ್‌ ತೆರೆದರೆ, ಕಾಡು ಪ್ರಾಣಿಗಳ ಜೀವ ಉಳಿಸಲು ಸಹಕಾರಿಯಾಗಲಿದೆ ಎಂಬ ಕಾರಣಕ್ಕೆ ಇಂತಹದ್ದೊಂದು ಕಾಮಗಾರಿ ಆರಂಭಿಸಲಾಗಿತ್ತು. 

ವೈಲ್ಡ್‌ ಅನಿಮಲ್‌ ರೆಸ್ಕ್ಯೂ ಸೆಂಟರ್‌ 

ಮಾನವ ಮತ್ತು ಪ್ರಾಣಿ ಸಂಘರ್ಷದಲ್ಲಿ ಸಂಕಷ್ಟಕ್ಕೆ ಸಿಲುಕುವ ವನ್ಯಪ್ರಾಣಿಗಳಿಗೂ ಇಂತಹ ಸೆಂಟರ್ ನಲ್ಲಿ ಚಿಕಿತ್ಸೆ ನೀಡುವ ಉದ್ದೇಶ ಹೊಂದಲಾಗಿತ್ತು. ಬಾವಿ ಕೆರೆಯಲ್ಲಿ ಸಿಲುಕಿಕೊಂಡಿರುವ, ಅಪಘಾತಕ್ಕೀಡಾಗಿರುವ, ಜೀವನ ಸಂಧ್ಯಾಕಾಲದಲ್ಲಿರುವ ವನ್ಯಪ್ರಾಣಿಗಳಿಗೆ ಈ ಸೆಂಟರ್ ಆಶ್ರಯವಾಗಬೇಕಿತ್ತು. 

ಶಿವಮೊಗ್ಗ ಹೊರ ವಲಯದ ತ್ಯಾವರೆಕೊಪ್ಪ ಹುಲಿಸಿಂಹ ಧಾಮದ ಪಕ್ಕದಲ್ಲಿ ಸುಮಾರು ಐದು ಎಕರೆ ಪ್ರದೇಶದಲ್ಲಿ ಐದು ಕೋಟಿ ವೆಚ್ಚದಲ್ಲಿ ವೈಲ್ಡ್ ಎನಿಮಲ್ ರೆಸ್ಕ್ಯೂ ಸೆಂಟರ್ ಗೆ ಜಾಗ ಗುರುತಿಸಲಾಗಿದೆ, 2023-24 ರ ಸಾಲಿನಲ್ಲಿ ಟೆಂಡರ್ ಕರೆಯಲಾಗಿದ್ದು ಅದರಂತೆ ಆವರಣದೊಳಗೆ ಎರಡು ಚಿರತೆ ಒಂದು ಹುಲಿ ಹಾಗು ಒಂದು ಸಸ್ಯಹಾರಿ ವನ್ಯಪ್ರಾಣಿಗಳ ದೊಡ್ಡ ಕೇಜ್ ಗಳು ನಿರ್ಮಿಸಲಾಗಿದೆ. ಶೇಕಡಾ 90 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು ಸಣ್ಣಪುಟ್ಟ ಕಾಮಗಾರಿ ಬಾಕಿ ಇದೆ. 

ಪೂರ್ಣವಾಗದ ಕಾಮಗಾರಿ

ಅಂದುಕೊಂಡಂತೆ ಆಗಿದ್ದಲ್ಲಿ ಈ ಕಾಮಗಾರಿ ಪೂರ್ಣಗೊಂಡು ಎಂಟು ತಿಂಗಳು ಕಳೆದು, ವನ್ಯಪ್ರಾಣಿಗಳ ಆರೈಕೆಯ ಕೇಂದ್ರವಾಗಬೇಕಿತ್ತು. ಆದರೆ ಸಂಬಂಧಿಸಿದ ಅರಣ್ಯಾಧಿಕಾರಿಗಳಿಗೆ ಎಲ್ಲಿ ಏನು ತೊಡಕಾಗಿದೆಯೋ ಗೊತ್ತಿಲ್ಲ. ಬೃಹತ್‌ ಕೇಜ್‌ಗಳ ಒಳ ಆವರಣದ ಲಾಕ್‌ ಸಿಸ್ಟಮ್‌, ಇನ್ನರ್‌ ಕೇಜ್‌ ಇತ್ಯಾದಿಗಳ ಕೆಲಸ ಆಗಿಲ್ಲ. ಈ ಕಾಮಗಾರಿಗಳು ಪೂರ್ಣಗೊಂಡನಂತರ ಉದ್ಘಾಟನೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಆದರೆ ಅರಣ್ಯ ಇಲಾಖೆಯ ಒಳಕಿವಿಗಳಲ್ಲಿ ಬೇರೆಯದ್ದೆ ಸುದ್ದಿ ಕೇಳಿಬರುತ್ತಿದೆ. ಇದನ್ನ ಅರಣ್ಯ ಸಚಿವರೇ ಕೇಳಿ ತಿಳಿದುಕೊಳ್ಳಬೇಕಿದೆ. ಹಾಗೊಂದು ವೇಳೆ ಕಾಮಗಾರಿಗೆ ಕೇವಲ ಹಣಕಾಸು ತೊಂದರೆಯಿದ್ದರೆ, ಅರಣ್ಯ ಮಂತ್ರಿ ಈಶ್ವರ್ ಖಂಡ್ರೆ ಅದರ ಬಗ್ಗೆ ಗಮನ ಹರಿಸಲಿ ಎಂಬುದು ಅರಣ್ಯ ಪ್ರಿಯರ ಮನವಿ. 

ಮಳೆಕಾಡು ವನ್ಯಜೀವಿ ಸಂಶೋಧನಾ ಮತ್ತು ಅಧ್ಯಯನ ಕೇಂದ್ರ

ಭದ್ರಾ ಟೈಗರ್ ರಿಸರ್ವ್ 25 ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಅರಣ್ಯ. ಸಚಿವರು, ರೆಸ್ಕ್ಯೂ ಸೆಂಟರ್ ಗೂ ಒಮ್ಮೆ ಭೇಟಿ ನೀಡಿ ಸಾಧಕ ಭಾದಕಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿ ಎಂದು ನೇಚರ ಮಲೆನಾಡು ಮಳೆಕಾಡು ವನ್ಯಜೀವಿ ಸಂಶೋಧನಾ ಮತ್ತು ಅಧ್ಯಯನ ಕೇಂದ್ರ ಆಗ್ರಹಿಸುತ್ತದೆ.