ಹೆಬ್ರಿಯಲ್ಲಿ ವಿಕ್ರಂಗೌಡ ಎನ್ ಕೌಂಟರ್ | ISD IGP ರೂಪಾ ಹೇಳಿದ್ದೇನು..
Vikram gowda
ಉಡುಪಿ ಜಿಲ್ಲೆ ಹೆಬ್ರಿಯ ಪೀತ ಬೈಲ್ ನಲ್ಲಿ ನಡೆದ ವಿಕ್ರಂಗೌಡ ಎನ್ ಕೌಂಟರ್ ಪ್ರಕರಣದ ಸಂಬಂಧ ಐಎಸ್ ಡಿ ಮುಖ್ಯಸ್ಥೆ ರೂಪಾ ಮಾತನಾಡಿದ್ದಾರೆ...ಸ್ಥಳದಲ್ಲಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಮೋಸ್ಟ್ ವಾಂಟೆಡ್ ನಕ್ಸಲ್ ಆಗಿದ್ದ ವಿಕ್ರಂಗೌಡ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದರು
ಮೂಲತಹ ಕಾರ್ಕಳದವನಾಗಿರುವ ವಿಕ್ರಂಗೌಡ ನಾಲ್ಕನೆ ತರಗತಿಯವರೆಗು ಓದಿದ್ದಾನೆ..ನಕ್ಸಲ್ ಚಟುವಟಿಕೆಗಳಲ್ಲಿ ಆತ ಪಾಲ್ಗೊಂಡಿದ್ದ ಕಬಿನಿ ದಳ ಎಂಬ ಟೀಂ ಲೀಡ್ ಮಾಡುತ್ತಿದ್ದ..ಈತನ ಮೇಲೆ ಆರವತ್ತೈದು ಕೇಸ್ ಗಳಿವೆ ..ನೆರೆಯ ಕೇರಳದಲ್ಲಿ ಹತ್ತೊಂಬತ್ತು ಕೇಸ್ ಗಳಿದ್ದವು ಎಂದು ಮಾಹಿತಿ ನೀಡಿದರು
ಕಳೆದ ನವೆಂಬರ್ ಹತ್ತರಿಂದಲೆ ಈ ಟೀಂನ ಓಡಾಟದ ಬಗ್ಗೆ ಅನುಮಾನ ಮೂಡಿತ್ತು..ಹೀಗಾಗಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದೆವು..ಎಎನ್ಎಫ್ ಎಸ್ಪಿ ಜಿತೇಂದ್ತ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶಿವಮೊಗ್ಗದ ಇಪ್ಪತ್ತೈದು ಮಂದಿ ಶಿವಮೊಗ್ಗ ಪೊಲೀಸ್ ಕೆಐಎಸ್ಎಫ್ ನ ಎಪ್ಪತ್ತೈದು ಮಂದಿ ಪಾಲ್ಗೊಂಡಿದ್ದರು..
ಕಾರ್ಯಾಚರಣೆಯ ವೇಳೆ ನಕ್ಸಲ್ ಟೀಂ ಎದುರಾಗಿ ಗುಂಡಿನ ಚಕಮಕಿ ನಡೆದಿದೆ. ವಿಕ್ರಂಗೌಡ ಮೃತರಾಗಿದ್ದಾರೆ..ಈ ಬಗ್ಗೆ ಇನ್ನಷ್ಟು ತನಿಖೆ ನಡೆಯಲಿದೆ..ಹೀಗಾಗಿ ಆಪರೇಷನ್ ನಲ್ಲಿ ಯಾರಾದಾರೂ ಗಾಯಾಳು ಆಗಿದ್ದಾರಾ ಎಂಬುದನ್ನ ಇನ್ನಷ್ಟೆ ಗಮನಿಸಬೇಕಿದೆ...ತನಿಖಾ ಕಾರಣಕ್ಕಾಗಿಯೇ ಯಾವುದೆ ಹೆಚ್ಚಿನ ಮಾಹಿತಿ ನೀಡಲಾಗದು ಎಂದು ರೂಪಾ ತಿಳಿಸಿದರು..
ಮೇಲಾಗಿ ಮೃತದೇಹವಿದ್ದ ಸ್ಥಳಕ್ಕೆ ಮಾದ್ಯಮಪ್ರವೇಶವನ್ನ ನಿರಾಕರಿಸಿದ ರೂಪಾ, ಮತ್ತಷ್ಟು ಮಾಹಿತಿ ಮುಂದೆ ನೀಡಲಾಗುವುದು ಎಂದರು.