ನನಗೆ ತೊಂದರೆ ಕೊಟ್ಟವರು ಇನ್ನೂ ಅನುಭವಿಸುತ್ತಾರೆ ಎಂದಿದ್ದೇಕೆ ಕೆಎಸ್ ಈಶ್ವರಪ್ಪ
Similarly, the former Deputy CM asked the state government whether it would close down such schools as there are no children in Urdu schools in the state now.
SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 3, 2025
ಶಿವಮೊಗ್ಗ | ರಾಜ್ಯ ಸರ್ಕಾರ ನಿನ್ನೆ ರಾಜ್ಯದಲ್ಲಿ ಗೋವುಗಳು ಗೋಶಾಲೆಗೆ ಬರತ್ತಿಲ್ಲ ಎಂದು ಗೋಶಾಲೆಯನ್ನ ಬಂದ್ ಮಾಡುವ ನಿರ್ಣಯವನ್ನು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಆದರೆ ಅದೇ ರೀತಿ ರಾಜ್ಯದ ಉರ್ದು ಶಾಲೆಯಲ್ಲಿ ಈಗ ಮಕ್ಕಳಿಲ್ಲ ಅಂತಹ ಶಾಲೆಗಳನ್ನು ಮುಚ್ಚುತ್ತಿರಾ ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದಿನ ಸರ್ಕಾರ ಇದ್ದಾಗ ಪ್ರತಿ ಜಿಲ್ಲೆಗೂ ಗೋಶಾಲೆ ಬೇಕು ಎಂಬ ನಿರ್ಣಯವನ್ನ ಜಾರಿಗೆ ತಂದಿತ್ತು. ಆ ಅವಧಿಯಲ್ಲಿ 14 ಗೋಶಾಲೆ ಸಹ ಆರಂಭಿಸಲಾಗಿತ್ತು. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಉಳಿದ 24 ಗೋಶಾಲೆಗಳನ್ನು ರಾಜ್ಯಸರ್ಕಾರ ರಾಜ್ಯದಲ್ಲಿ ಆರಂಭ ಮಾಡುವ ನಿರ್ಣಯ ತೆಗೆದುಕೊಳ್ಳುತ್ತದೆ ಎಂದುಕೊಂಡಿದ್ದೆವು. ಆದರೆ ನಿನ್ನೆ ರಾಜ್ಯ ಸರ್ಕಾರ ನಾವು ಗೋಶಾಲೆ ಮಾಡಲ್ಲ ಎಂಬ ನಿರ್ಣಯ ತೆಗೆದುಕೊಂಡಿದೆ. ಅಷ್ಟೇ ಅಲ್ಲದೆ ಗೋವುಗಳು ಗೋಶಾಲೆಗೆ ಬಾರದ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಅನೇಕ ಉರ್ದು ಶಾಲೆಗಳಲ್ಲಿ ಈಗ ಮಕ್ಕಳಿಲ್ಲ ಮಕ್ಕಳಿಲ್ಲ ಎಂಬ ಕಾರಣದಿಂದ ಉರ್ದು ಶಾಲೆಯನ್ನು ಮುಚ್ಚುತ್ತೀರ ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದರು.
ಹಿಂದೂ ಸಮಾಜದ ಮೇಲೆ ಯಾವಾಗಲೂ ದಬ್ಬಾಳಿಕೆ ಮಾಡ್ತೀರಾ. ಹಿಂದೂ ಸಮಾಜದ ವಿರುದ್ಧ ಏನೇ ಮಾಡಿದ್ರೂ ಹಿಂದೂಗಳು ಏನು ಮಾಡಲ್ಲ ಎಂಬ ನಂಬಿಕೆ ನಿಮ್ಮದು. ಈ ಹಿನ್ನಲೆ ನಾನು ಎಚ್ಚರಿಗೆ ಕೊಡುತ್ತಿದ್ದೇನೆ ಹಿಂದೂ ಸಮಾಜವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಗೋಶಾಲೆ ತೆರೆಯುವುದಿಲ್ಲ ಎಂಬ ಕಾನೂನನ್ನು ಹಿಂದೆತೆಗೆದುಕೊಳ್ಳಿ ಎಂದರು. ಅಷ್ಟೇ ಅಲ್ಲದೆ ರಾಜ್ಯದ ಮುಖ್ಯಮಂತ್ರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಹಿನ್ನಲೆ ರಾಜ್ಯದಲ್ಲಿ ಏನೇ ಅಹಿತಕರ ಘಟನೆಗಳು ನಡೆದರು ಅದಕ್ಕೆ ನೀವೇ ಕಾರಣರು ಎಂದು ಎಚ್ಚರಿಸಿದರು.
ನೇತ್ರಾವತಿ ನದಿಗೆ ಗೋಮಾಂಸ ತ್ಯಾಜ್ಯ ಎಸೆದಿರುವ ವಿಚಾರದ ಬಗ್ಗೆ ಮಾತನಾಡಿ ಗೋಮಾಂಸ ತ್ಯಾಜ್ಯ ವಸ್ತುಗಳನ್ನು ಕಿಡಿಗೇಡಿಗಳು ನೇತ್ರಾವತಿ ನದಿಗೆ ಎಸೆದು ಅಪವಿತ್ರ ಗೊಳಿಸುತ್ತಿದ್ದಾರೆ. ಪುಣ್ಯ ನದಿಯಲ್ಲಿ ಹಿಂದೂಗಳು ಪವಿತ್ರ ವಾಗಿ ಸ್ನಾನ ಮಾಡಲು ದುಷ್ಕರ್ಮಿಗಳು ಬಿಡುವುದಿಲ್ಲ. ಗೋಹತ್ಯೆ ನಿಷೇಧ ಕಾನೂನು ನಮ್ಮ ಸರ್ಕಾರದಲ್ಲಿ ಜಾರಿಗೆ ಬಂದಿದೆ. ಆದ್ರೂ ಕೂಡಾ ಈ ರೀತಿಯ ಘಟನೆಗಳು ನಡೆಯುತ್ತಿವೆ. ಹಿಂದೂಗಳ ಮನಸನ್ನು ನೋಯಿಸುವ ಕೃತ್ಯವ್ಯನ್ನು ನಾವು ಎಂದಿಗೂ ಸಹಿಸುವಂತಿಲ್ಲ. ಇಂಥಹ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕ್ರಮ ತೆಗೆದುಕೊಳ್ಳಬೇಕು ಎಂದರು.
ಪ್ರಿಯಾಂಕ್ ಖರ್ಗೆ ವಿಚಾರದ ಬಗ್ಗೆ ಮಾತನಾಡಿ ಅವರ ಆತ್ಮೀಯರು ಮಾಡಿರುವ ಕಾರ್ಯ ನಿಮಗೆಲ್ಲ ತಿಳಿದೇ ಇದೆ. ಸಚಿವರು ಹೇಳುತ್ತಾರೆ ಡೆತ್ ನೋಟ್ ನಲ್ಲಿ ನನ್ನ ಹೆಸರಿಲ್ಲ ಎಂದು ಆದ್ರೆ ಬಿಜೆಪಿ ನಾಯಕರು ಡೆತ್ ನೋಟ್ ನಲ್ಲಿ ಪ್ರಿಯಾಂಕ್ ಖರ್ಗೆಅವರ ಹೆಸರಿರುವುದನ್ನ ತೋರಿಸಿದ್ದಾರೆ.ಈ ಹಿಂದೆಯು ಸಹ ವಿನಾಕಾರಣ ನನ್ನ ಮೇಲೆ ಮಾಡದ ತಪ್ಪಿಗೆ ಇಂತಹದ್ದೇ ಅಪವಾದ ಬಂದಿತ್ತು. ಆ ಕೂಡಲೇ ಹೈಕಮಾಂಡ್ ಒಪ್ಪಿಗೆ ತೆಗೆದುಕೊಂಡು ನಾನು ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟೆ. ನಂತರ ತನಿಖೆಯಲ್ಲಿ ನಾನು ನಿರ್ದೋಷಿ ಎಂದು ತಿಳಿದು ಬಂತು. ಆ ಸಂದರ್ಭದಲ್ಲಿ ನನಗೆ ಯಾರ್ಯಾರು ತೊಂದ್ರೆ ಕೊಟ್ರೂ ಅವರೆಲ್ಲರು ಇಂದು ಅನುಭವಿಸುತ್ತಿದ್ದಾರೆ. ಇನ್ನು ಮುಂದೆಯೂ ಅವರು ಅನುಭವಿಸುತ್ತಾರೆ. ನನ್ನನ್ನು ರಾಜಕಾರಣದಲ್ಲಿ ಮುಗಿಸಬೇಕೆಂದು ಅನೇಕ ಜನರು ಅಂದುಕೊಂಡಿದ್ದರು. ನಾನು ದೇವರು ಸಾಧು ಸಂತರನ್ನ ನಂಬಿಕೊಂಡು ಜೀವನ ನಡೆಸುತ್ತಿರುವವನು ಆದ್ದರಿಂದ ನನ್ನ ಪರವಾಗಿ ತೀರ್ಪು ಬಂತು ದೇವರು ನನ್ನನ್ನು ಕೈ ಬಿಡಲಿಲ್ಲ ಎಂದರು.
SUMMARY | Similarly, the former Deputy CM asked the state government whether it would close down such schools as there are no children in Urdu schools in the state now.
KEYWORDS | Deputy CM, eshwarappa, politics, state govt,