ಮಾರುಕಟ್ಟೆಗೆ ಬಂತು ಬರೊಬ್ಬರಿ ಮೈಲೇಜ್ ಕೊಡುವ ಹ್ಯುಂಡೈ ಕ್ರೆಟಾ
The car will be launched at the Bharat Mobility Expo on January 17. This car is designed just like the usual design.

SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 4, 2025
ಪ್ರಸ್ತುತ ಎಲೆಕ್ಟ್ರಿಕ್ ಕಾರು ಹಾಗೂ ಬೈಕ್‌ಗಳಿಗೆ ವಿಪರೀತವಾದ ಬೇಡಿಕೆ ಉಂಟಾಗಿದ್ದು, ದೊಡ್ಡ ದೊಡ್ಡ ಕಂಪನಿಗಳು ಎಲೆಕ್ಟ್ರಿಕ್ ಕಾರ್ ಹಾಗೂ ಬೈಕ್‌ಗಳನ್ನು ಮಾರುಕಟ್ಟೆಗೆ ಪ್ರಸ್ತುತ ಪಡಿಸುತ್ತಿವೆ. ಇದರ ನಡುವೆ ಹ್ಯುಂಡೈ ಕಂಪನಿ ಸಹ ಇದೀಗ ಕ್ರೆಟಾ ಇವಿ ಕಾರನ್ನು ಬಿಡುಗಡೆಗೊಳಿಸುತ್ತಿದೆ.
ಈ ಕಾರನ್ನು ಇದೇ ಜನವರಿ 17 ರಂದು ಭಾರತ್ ಮೊಬಿಲಿಟಿ ಎಕ್ಸ್ಪೋ ಬಿಡುಗಡೆಗೊಳಿಸುತ್ತಿದೆ. ಈ ಕಾರನ್ನು ಸಾಮಾನ್ಯ ವಿನ್ಯಾಸ ಹೊಂದಿದೆ. ಇದರಲ್ಲಿ 42 kwh ಬ್ಯಾಟರಿ ಹಾಗೂ 51.4 KWH ಬ್ಯಾಟರಿಯೊಂದಿಗೆ 2 ಮಾದರಿಯ ಬ್ಯಾಟರಿ ಲಭ್ಯವಿರಲಿದೆ, 42 kwh ಬ್ಯಾಟರಿಯಲ್ಲಿ ಈ ಕಾರನ್ನು ಒಮ್ಮೆ ಚಾರ್ಜ್ ಮಾಡಿದರೆ ಸರಿಸುಮಾರು 390 ಕಿಲೋಮೀಟರ್ ಪ್ರಯಾಣಿಸಬಹುದು ಹಾಗೆಯೇ 51.4 KWH ಬ್ಯಾಟರಿಯಲ್ಲಿ ಒಮ್ಮೆಲೆ 473 ಕಿಲೋಮೀಟರ್ ಮೈಲೇಜ್‌ನ್ನು ಈ ಕಾರ್ ನೀಡುತ್ತದೆ. ಇದನ್ನು ಡಿಸಿ ಚಾರ್ಜ‌್ರನೊಂದಿಗೆ ಕೇವಲ 58 ನಿಮಿಷಗಳಲ್ಲಿ ಶೇ 10ರಿಂದ ಶೇ 80ರವರೆಗೆ ಚಾರ್ಜ್ ಮಾಡಬಹುದು. ಅದೇ 11kW AC ಹೋಮ್ ಚಾರ್ಜ‌್ರನೊಂದಿಗೆ, ಶೇ 10ರಿಂದ ಶೇ 100 ರಷ್ಟು ಚಾರ್ಜ್ ಮಾಡಲು 4 ಗಂಟೆಗಳು ಬೇಕಾಗುತ್ತದೆ.
ಈ ಕಾರಿನಲ್ಲಿ ಚಾರ್ಜಿಂಗ್ ಪಾಯಿಂಟ್‌ನ್ನು ಮುಂಬಾಗದಲ್ಲಿ ನೀಡಲಾಗಿದ್ದು, ಇದರಲ್ಲಿ 360 ಡಿಗ್ರಿ ಕ್ಯಾಮರ ಡಿಜಿಟಲ್ ಕೀ ಸೇರಿದಂತೆ ಮುಂತಾದ ಪ್ರಮುಖ ಸೌಲಭ್ಯಗಳನ್ನು ನೀಡಲಾಗಿದೆ. ಆದರೆ ಕಂಪನಿ ಕಾರಿನ ಅದೀಕೃತ ಬೆಲೆಯನ್ನು ಇನ್ನೂ ಬಹಿರಂಗ ಗೊಳಿಸಿಲ್ಲ.
SUMMARY | The car will be launched at the Bharat Mobility Expo on January 17. This car is designed just like the usual design.
KEYWORDS | Bharat Mobility Expo, hyundai, creta, ev,