ಕೇಂದ್ರ ಗೃಹ ಸಚಿವರ ಪುತ್ರ ಇನ್ಮುಂದೆ ಐಸಿಸಿ ಅಧ್ಯಕ್ಷ
Jay Shah, who is the secretary of the Board of Control for Cricket in India (BCCI), is currently elected as the president of the International Cricket Council (ICC)
SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 2, 2024
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿಯಾಗಿರುವ Jay Shah ಪ್ರಸ್ತುತ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಆಗಸ್ಟ್ ನಲ್ಲಿ ಜಯ್ ಶಾ ಐಸಿಸಿ ಯ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ಇದೀಗ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದಾರೆ.
ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅತಿ ಕಿರಿಯ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಜಯ್ ಶಾ ಪಾತ್ರರಾಗಿದ್ದು, ಈ ಹುದ್ದೆಗೇರಿದ 5ನೇ ಭಾರತೀಯರಾಗಿದ್ದಾರೆ. ಜಯ್ ಶಾಗಿಂತಲೂ ಮೊದಲು ರಾಜಕಾರಣಿ ಶರದ್ ಪವಾರ್, ಭಾರತೀಯರಾದ ಉದ್ಯಮಿ ದಿವಂಗತ ಜಗಮೋಹನ್ ದಾಲ್ಮಿಯಾ, ವಕೀಲ ಶಶಾಂಕ್ ಮನೋಹರ್ ಮತ್ತು ಕೈಗಾರಿಕೋದ್ಯಮಿ ಎನ್ ಶ್ರೀನಿವಾಸನ್ ಅವರು ವಿಶ್ವ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥರಾಗಿದ್ದರು. ಈ ಹಿಂದೆ ಜಯ್ ಶಾ 2019 ರಲ್ಲಿ ಬಿಸಿಸಿಐ ನ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದರು. ಪ್ರಸ್ತುತ ಐಸಿಸಿಯ ಅಧ್ಯಕ್ಷರಾಗಿದ್ದು, ಈ ಹಿಂದೆ ಇದ್ದ ಐಸಿಸಿ ಅಧ್ಯಕ್ಷರಾಗಿದ್ದ ಗ್ರೆಗ್ ಬಾರ್ಕ್ಲೇ ಅವರ ಸ್ಥಾನವನ್ನು ಇನ್ನು ಮುಂದೆ ಜಯ್ ಶಾ ತುಂಬಲಿದ್ದಾರೆ. ಇದುವರೆಗೆ ಬಿಸಿಸಿಐ ನ ಕಾರ್ಯದರ್ಶಿಯಾಗಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ ಜಯ್ ಶಾ ರಿಗೆ ಮುಂದೆ ಕ್ರಿಕೆಟ್ ಅನ್ನು ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ಒಲಿಂಪಿಕ್ ಕ್ರೀಡೆಯನ್ನಾಗಿಸುವ ಹಾಗೆಯೇ ಮುಂಬರುವ ಚಾಂಪಿಯನ್ಸ್ ಟ್ರೋಫಿಯ ಸುತ್ತಲಿನ ಬಿಕ್ಕಟ್ಟನ್ನು ಕೊನೆಗೊಳಿಸುವ ಜವಬ್ದಾರಿ ಇದೆ.
SUMMARTY| Jay Shah, who is the secretary of the Board of Control for Cricket in India (BCCI), is currently elected as the president of the International Cricket Council (ICC).
KEY WORDS| Jay Shah, Board of Control for Cricket in India, International Cricket Council, Cricket,