Holehonnuru | ನಾಯಿಯ ನಿಯತ್ತು | ಅಡ್ಮಿಟ್‌ ಆದ ಮಾಲೀಕಿನಿಗಾಗಿ ಆಸ್ಪತ್ರೆಯ ಬಾಗಿಲು ಕಾದ ನಾಯಿ | ಮನ ಕರಗಿಸಿದ ಪ್ರಸಂಗ

Holehonnuru dog story | ಆಸ್ಪತ್ರೆಗೆ ಅಡ್ಮಿಟ್‌ ಆದ ತನ್ನ ಮಾಲೀಕ ವಾಪಸ್‌ ಬರುವನೆಂದು ಆಸ್ಪತ್ರೆಯಲ್ಲಿಯೇ ಠಿಕಾಣಿ ಹೂಡಿದ ನಾಯಿಯ ಕುರಿತಾದ ವರದಿ

Holehonnuru | ನಾಯಿಯ ನಿಯತ್ತು | ಅಡ್ಮಿಟ್‌ ಆದ ಮಾಲೀಕಿನಿಗಾಗಿ ಆಸ್ಪತ್ರೆಯ ಬಾಗಿಲು ಕಾದ ನಾಯಿ | ಮನ ಕರಗಿಸಿದ ಪ್ರಸಂಗ
ಹೊಳೆಹೊನ್ನೂರು, ನಾಯಿಯ ನಿಯತ್ತು, Holehonnuru dog story

SHIVAMOGGA | MALENADUTODAY NEWS | Aug 18, 2024  ಮಲೆನಾಡು ಟುಡೆ  

ಎದೆನೋವಿನಿಂದ ಮಾಲೀಕ ದಾಖಲಾದ ಆಸ್ಪತ್ರೆಯಲ್ಲಿಯೇ ನಾಯಿಯೊಂದು ಠಿಕಾಣಿ ಹೂಡಿದ ಘಟನೆಯೊಂದು ಮನಸ್ಸನ್ನ ತಲ್ಲಣಗೊಳಿಸುತ್ತಿದೆ. ಇಂತಹದ್ದೊಂದು ಸನ್ನಿವೇಶಕ್ಕೆ ಶಿವಮೊಗ್ಗದ ಹೊಳೆಹೊನ್ನೂರು ಸಾಕ್ಷಿಯಾಗಿದೆ.  

ಕಳೆದ ಹದಿನೈದು ದಿನಗಳ ಹಿಂದೆ ಎದೆನೋವಿನಿಂದ ಬಳಲುತ್ತಿದ್ದ ಇಲ್ಲಿನ ಪಾಲಾಕ್ಷಪ್ಪ ಎಂಬುವವರನ್ನು ಹೊಳೆಹೊನ್ನೂರಿನ ಆಸ್ಪತ್ರೆಗೆ ಅಡ್ಮಿಟ್‌ ಮಾಡಲಾಗಿತ್ತು. ಅವರನ್ನ ತಪಾಸಣೆಗೆ ಕರೆತಂದ ಸಂದರ್ಭದಲ್ಲಿ ಅಲ್ಲಿಗೆ ಅವರ ಸಾಕು ನಾಯಿ ಬಂದಿತ್ತು. ಆ ಬಳಿಕ ನಡೆದಿದ್ದು ಬೇರೆ. 



ಇದನ್ನು ಸಹ ಓದಿ :ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ



ಹೃದಯಾಘಾತದಿಂದ ಅಸ್ವಸ್ಥಗೊಂಡಿದ್ದ ಪಾಲಾಕ್ಷಪ್ಪರನ್ನ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿತ್ತು. ಅಲ್ಲಿ ಅವರು ಸಾವನ್ನಪ್ಪಿದ್ದರು. ಆದರೆ ಸಾಕು ನಾಯಿ ತನ್ನ ಮಾಲೀಕ ಇನ್ನೂ ಹೊಳೆಹೊನ್ನೂರು ಆಸ್ಪತ್ರೆಯಲ್ಲಿಯೇ ಇದ್ದಾರೆ ಎಂದು ನಂಬಿತ್ತು. ಹಾಗಾಗಿ ಅಲ್ಲಿಯೇ ಓಡಾಡುತ್ತಿದ್ದ ನಾಯಿ ಆಸ್ಪತ್ರೆಯ ಒಳೆಗೆಲ್ಲಾ ಓಡಾಡಿ ತನ್ನ ಮಾಲೀಕನಿಗಾಗಿ ಹುಡುಕಾಡುತ್ತಿತ್ತು. ಈ ನಡುವೆ ತನ್ನ ಓಡಿಸಲು ಬಂದ ಆಸ್ಪತ್ರೆ ಸಿಬ್ಬಂದಿಯನ್ನೆ ನಾಯಿ ಹೆದರಿಸುತ್ತಿತ್ತು. 

ಅತ್ತ ನಾಯಿ ತನ್ನ ಮಾಲೀಕನನ್ನ ಹುಡುಕಾಡುತ್ತಿದ್ದರೇ, ಇತ್ತ ಆಸ್ಪತ್ರೆ ಆವರಣದಲ್ಲಿ ನಾಯಿ ಓಡಾಡುವುದು ಆಸ್ಪತ್ರೆ ಸಿಬ್ಬಂದಿಗೆ ಉಪಟಳವಾಗಿ ಪರಿಣಮಿಸಿತು. ಹೀಗಾಗಿ ಇಲ್ಲಿನ ವೈದ್ಯ  ಡಾ.ದೇವಾನಂದ್‌ ಪಟ್ಟಣ ಪಂಚಾಯತ್‌   ಮುಖ್ಯಾಧಿಕಾರಿಗೆ ನಾಯಿಯ ಉಪದ್ರವ ತಪ್ಪಿಸುವಂತೆ ಮನವಿ ಮಾಡಿದ್ದಾರೆ. ಅವರ ಮನವಿ ಮೇರೆಗೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ನಾಯಿಯನ್ನು ಸುರಕ್ಷಿತವಾಗಿ ಹಿಡಿದು ಅದನ್ನು ತ್ಯಾಜ್ಯ ವಿಲೇವಾರಿ ಘಟಕದ ನಾಯಿಗಳ ಗುಂಪಿನೊಂದಿಗೆ ಬಿಟ್ಟಿದ್ದಾರೆ.  

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ