ಛೇ ಹೀಗಾಗಬಾರದಿತ್ತು | ಮಷಿನ್‌ ಮನೆಗೆ ಹೋಗಿದ್ದ ಯುವಕ ಅಲ್ಲಿಯೇ ಸಾವು | ಕನಸಿನ ಕಟ್ಟೆಯಲ್ಲಿ ನಡೆದಿದೇನು?

young man died , kanasina katte , Holehonnur in Bhadravati taluk, Holehonnur police station

ಛೇ ಹೀಗಾಗಬಾರದಿತ್ತು | ಮಷಿನ್‌ ಮನೆಗೆ ಹೋಗಿದ್ದ ಯುವಕ ಅಲ್ಲಿಯೇ ಸಾವು | ಕನಸಿನ ಕಟ್ಟೆಯಲ್ಲಿ ನಡೆದಿದೇನು?
young man died , kanasina katte , Holehonnur in Bhadravati taluk, Holehonnur police station

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 6, 2025 ‌‌ 

ಅಡಕೆ ತೋಟಕ್ಕೆ ತೆರಳಿದ್ದ ಯುವಕನೊಬ್ಬ ಅಲ್ಲಿಯೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು ಆ ಬಳಿಕ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಸಾವನ್ನಪ್ಪಿದ ಘಟನೆ  ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಕನಸಿನಕಟ್ಟೆ ಗ್ರಾಮದಲ್ಲಿ ಜನವರ 5 ರ ಸಂಜೆ ನಡೆದಿದೆ. ದರ್ಶನ್ (20) ಮೃತಪಟ್ಟ ವಿದ್ಯಾರ್ಥಿ. ಹೊಳೆಹೊನ್ನೂರು ಸರ್ಕಾರಿ ಕಾಲೇಜ್‌ನಲ್ಲಿ, ಅಂತಿಮ ವರ್ಷದ ಬಿಕಾಂ ಅಭ್ಯಾಸ ಮಾಡುತ್ತಿದ್ದ

ಕಳೆದ ಭಾನುವಾರ ಕಾಲೇಜ್‌ಗೆ ರಜೆಯಿದ್ದ ಕಾರಣದಿಂದ, ಸಂಜೆ 4.30 ರ ಸುಮಾರಿಗೆ ತಮ್ಮ ಅಡಕೆ ತೋಟಕ್ಕೆ ನೀರು ಹಾಯಿಸಲೆಂದು ದರ್ಶನ್ ತೆರಳಿದ್ದ. ಅಲ್ಲಿ ಪಂಪ್‌ಸೆಂಟ್‌ ಬಳಿ ಆತ ಪ್ರಜ್ಞೆ ತಪ್ಪಿ ಬಿದ್ದಿದ್ದ. ಇದನ್ನ ಕಂಡ ಆತನ ಸಂಬಂಧಿಕರೊಬ್ಬರು ವಿಷಯ ಎಲ್ಲರಿಗೂ ತಿಳಿಸಿ ಆತನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಅಷ್ಟರಲ್ಲಿ ಆತ ಸಾವನ್ನಪ್ಪಿದ್ದ  

ತೋಟದಲ್ಲಿ ಪಂಪ್ ಸೆಟ್ ಆನ್ ಮಾಡುವ ವೇಳೆ, ವಿದ್ಯುತ್ ಶಾಕ್ ನಿಂದ ದರ್ಶನ್ ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ

 

SUMMARY | young man died in a kanasina katte  near Holehonnur in Bhadravati taluk, Holehonnur police station

KEY WORDS | young man died , kanasina katte , Holehonnur in Bhadravati taluk, Holehonnur police station