shivamogga live news | ಗೃಹಿಣಿ ಸಾವು, ಕೊಲೆ? ಆತ್ಮಹತ್ಯೆ ? ಅನುಮಾನ | ಕೇಳಿ ಪಡೀತಾರ ತಾಳಿ ಸರ ಹುಷಾರ್ | ಇನ್ನಷ್ಟು ಸುದ್ದಿಗಳು
Holehonnur, Holehonnur Police Station, Soraba Taluk News, Soraba Police Station, Doctors, Doddapete Police Station, Shimoga News
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 6, 2025
ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ ವೈದ್ಯ ಸಹ ಆಗಿರುವ ಪತಿಯ ವಿರುದ್ಧ ಕೇಸ್ ದಾಖಲಾಗಿದೆ. ಬೆಂಗಳೂರಿನ ನಿವಾಸಿ ಡಾಕ್ಟರ್ ಒಬ್ಬರ ಜೊತೆ ಶಿವಮೊಗ್ಗದ ಮಹಿಳೆ ಮದುವೆಯಾಗಿದ್ದರು. ಸದ್ಯ ಮಹಿಳೆ ಪ್ರಗ್ನೆಂಟ್ ಇದ್ದಾರೆ. ಈ ನಡುವೆ ಪತಿಯು ಮದ್ಯಪಾನ ಮಾಡಿ ಜಗಳ ತೆಗೆಯುತ್ತಿದ್ದರು. ಅಲ್ಲದೆ ಪರಸ್ತ್ರಿಯ ಜೊತೆ ಸಂಬಂಧ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಏಫ್‌ಐಆರ ಸಹ ದಾಖಲಾಗಿದೆ.
ಇನ್ನೊಂದು ಘಟನೆಯಲ್ಲಿ ಸೊರಬ ತಾಲ್ಲೂಕುನಲ್ಲಿ 28 ವರುಷದ ಗೃಹಿಣಿಯೊಬ್ಬರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರನ್ನ ಅತ್ತೆ ಹಾಗೂ ಪತಿ ಕೊಲೆ ಮಾಡಿ ನೇಣಿಗೆ ಹಾಕಿದ್ದಾರೆ ಅಂತಾ ಮೃತರ ಕುಟುಂಬಸ್ಥರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಸೊರಬ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಇತ್ತ ಹೊಳೆಹೊನ್ನೂರು ಪೇಟೆಯಲ್ಲಿ ಮಹಿಳೆಯೊಬ್ಬರನ್ನ ಅಡ್ಡಗಟ್ಟಿದ ಅಪರಿಚಿತರು, ಈ ಬೀದಿಯಲ್ಲಿ ನಿನ್ನೆ ಕಳ್ಳತನವಾಗಿದೆ, ನಿಮ್ಮ ಸರವನ್ನ ಭದ್ರ ಮಾಡಿಟ್ಟುಕೊಳ್ಳಿ. ನಾವು ಪೊಲೀಸರು ಎಂದು ಎಚ್ಚರಿಸಿದ್ದಾರೆ. ಆ ಬಳಿಕ ಮಹಿಳೆಯ ಮಾಂಗಲ್ಯ ಸರವನ್ನು ಅವರಿಂದ ಬಿಚ್ಚಿಸಿ ಅದನ್ನು ಪೇಪರ್ ನಲ್ಲಿ ಕಟ್ಟಿಕೊಡುವಂತೆ ನಾಟಕ ಮಾಡಿ, ಪೇಪರ್‌ನಲ್ಲಿ ಕಲ್ಲು ತುಂಬಿಸಿ ಕೊಟ್ಟಿದ್ದಾರೆ. ಈ ಸಂಬಂಧ ಮೋಸ ಹೋಗಿರುವುದು ಗೊತ್ತಾದ ತಕ್ಷಣ ಮಹಿಳೆ ಹೊಳೆಹೊನ್ನೂರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
SUMMARY | Shivamogga short news
KEY WORDS | Holehonnur, Holehonnur Police Station, Soraba Taluk News, Soraba Police Station, Doctors, Doddapete Police Station, Shimoga News