ಬಾಂಗ್ಲಾದಲ್ಲಿ ಹಿಂದೂ ವಿರೋಧಿ ನಡೆ | ಶಿವಮೊಗ್ಗದಲ್ಲಿ ಪ್ರತಿಭಟನೆ
Hindu Hitarakshana Samiti staged a protest in Shivamogga today against the atrocities on minority Hindus in Bangladesh and the arrest of Hindu saint Chinmay Das.
SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 3, 2024
ಶಿವಮೊಗ್ಗ | ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಹಿಂದೂ ಸಂತ ಚಿನ್ಮಯ್ ದಾಸ್ ಬಂಧನ ಖಂಡಿಸಿ ಇಂದು ಶಿವಮೊಗ್ಗದಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ಕೈ ಗೊಳ್ಳಲಾಯಿತು.
ಮಥುರಾ ಹೋಟೆಲ್ ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಬಾಂಗ್ಲಾದೇಶ ಸರಕಾರದ ವಿರುದ್ದ ಘೋಷಣೆ ಕೂಗಿದ ಕಾರ್ಯಕರ್ತರು, ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗೆ ರಕ್ಷಣೆಯಿಲ್ಲ ಎಂದು ಅಲ್ಲಿನ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಆ ಬಳಿಕ ಹಿಂದೂಗಳ ರಕ್ಷಣೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು.
SUMMARY| The Hindu Hitarakshana Samiti staged a protest in Shivamogga today against the atrocities on minority Hindus in Bangladesh and the arrest of Hindu saint Chinmay Das.
KEYWORDS | Hindu Hitarakshana Samiti, protest, Bangladesh, shivamogga,