ಡ್ರಗ್ಸ್ ಕೇಸ್ | ರಾಗಿಣಿ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್ !
Drugs case, High Court quashes case, actress Ragini Dwivedi, Prashanth

SHIVAMOGGA | MALENADUTODAY NEWS | ಮಲೆನಾಡು ಟುಡೆ Jan 14, 2025
ಮಾದಕ ವಸ್ತು ಡ್ರಗ್ಸ್ ಕೇಸ್‌ನಲ್ಲಿ ತೀವ್ರ ಸುದ್ದಿಯಾಗಿದ್ದ ನಟಿ ರಾಗಿಣಿ ದ್ವಿವೇದಿ ಮೇಲಿನ ಪ್ರಕರಣವನ್ನು ಹೈಕೋರ್ಟ್ ಏಕಸದಸ್ಯ ಪೀಠ ರದ್ದುಗೊಳಿಸಿದೆ ಎಂದು ರಾಜ್ಯದ ಮಾಧ್ಯಮಗಳು ವರದಿ ಮಾಡಿವೆ. ಸ್ಟೇಟ್ ಮೀಡಿಯಾಗಳ ವರದಿ ಪ್ರಕಾರ, 2020 ರಲ್ಲಿ ನಡೆದಿದ್ದ, ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ವಿರುದ್ಧ ಆರೋಪ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಇಬ್ಬರು ಬಂಧನಕ್ಕೆ ಒಳಗಾಗಿ ಆ ಬಳಿಕ ರಿಲೀಸ್ ಆಗಿದ್ದರು. ತದನಂತರ ನಡೆದ ವಿಚಾರಣೆ ನಡೆದಿತ್ತು. ಈ ನಡುವೆ ಮಾದಕವಸ್ತು ಸೇವನೆ ಹಾಗೂ ಮಾರಾಟಕ್ಕೆ ರೇವ್ ಪಾರ್ಟಿ ಆಯೋಜಿಸಿದ್ದರು ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ರಾಗಿಣಿ ದ್ವಿವೇದಿ ಹಾಗೂ ನಾಲ್ಕನೇ ಆರೋಪಿ ಪ್ರಶಾಂತ್ ರಂಕ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ಭೌತಿಕ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾದ ಕಾರಣಕ್ಕೆ ಪ್ರಕರಣದಿಂದ ಉದ್ಭವಿಸಿದ್ದ ಎಲ್ಲ ಪ್ರಕ್ರಿಯೆಯನ್ನು ರದ್ದುಪಡಿಸಿರುವುದಾಗಿ ನ್ಯಾಯಾಲಯ ಹೇಳಿದೆ.
SUMMARY | Drugs case High Court quashes case against actress Ragini Dwivedi, Prashanth
KEY WORDS | Drugs case, High Court quashes case, actress Ragini Dwivedi, Prashanth