ಉಚಿತ ಹೃದಯ ತಪಾಸಣೆಗೆ ಇಲ್ಲಿದೆ ಅವಕಾಶ | ವಿವರ ಹೀಗಿದೆ
On November 30, a free heart check-up clinic will be organized in association with Arice General and Dental Clinic and Serji Super Specialty Hospital, Shivamogga.
SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 28, 2024
ಶಿವಮೊಗ್ಗ | ನವಂಬರ್ 30 ರಂದು ಅರೈಸ್ ಜನರಲ್ ಮತ್ತು ಡೆಂಟಲ್ ಕ್ಲಿನಿಕ್ ಹಾಗೂ ಶಿವಮೊಗ್ಗದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಭಾಗಿತ್ವದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರವು ಶಿಕಾರಿಪುರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಮುಂಬಾಗದ ಅರೈಸ್ ಕ್ಲಿನಿಕ್ ಆವರಣದಲ್ಲಿ ನಡೆಯಲಿದೆ ಎಂದು ಅರೈಸ್ ಸಂಸ್ಥೆಯ ಆಡಳಿತಾಧಿಕಾರಿ ನಿರಂಜನ್ ಕೆ.ಪಿ ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು ನಮ್ಮ ಅರೈಸ್ ಜನರಲ್ ಮತ್ತು ಡೆಂಟಲ್ ಕ್ಲಿನಿಕ್ 3 ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಹಾಗಾಗಿ ಇದರ ಸಲುವಾಗಿ ಶಿವಮೊಗ್ಗದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರವನ್ನ ನಡೆಸುತ್ತಿದ್ದೇವೆ. ಈ ಶಿಬಿರದಲ್ಲಿ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹೃದಯ ತಜ್ಞರಾದ ಡಾ| ಹೆಚ್ ವಿಜೇತ್ ಹೃದಯ ತಪಾಸಣೆ ಮತ್ತು ಸಮಾಲೋಚನೆ ನಡೆಸಿಕೊಡಲಿದ್ದಾರೆ. ಎಲ್ಲರು ಆಗಮಿಸಿ ಉಚಿತವಾಗಿ ಹೃದಯ ತಪಾಸಣೆಯನ್ನು ಮಾಡಿಸಿಕೊಳ್ಳಿ ಎಂದರು.
ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹೃದಯ ತಜ್ಞರಾದ ಡಾ| ಹೆಚ್ ವಿಜೇತ್ ಹೆಚ್ ಮಾತನಾಡಿ ಈ ಶಿಬಿರವನ್ನು ಜನರಿಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಆಯೋಜಿಸಲಾಗಿದೆ. ಅನೇಕರು ಎದೆನೋವು ಬಂದಾಗ ಅದು ಗ್ಯಾಸ್ಟ್ರಿಕ್ ಸಮಸ್ಯೆ ಇರಬಹುದು ಎಂದು ನಿರ್ಲಕ್ಷಿಸುತ್ತಾರೆ. ಅದು ಮುಂದೆ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು. ನಾವು ಇಲ್ಲಿ ನೀಡುವ ಸಲಹೆ ತಪಾಸಣೆ ಮತ್ತು ಸಮಾಲೋಚನೆ ಉಚಿತವಾಗಿರುತ್ತದೆ ಎಂದರು
SUMMARY| On November 30, a free heart check-up clinic will be organized in association with Arice General and Dental Clinic and Serji Super Specialty Hospital, Shivamogga.
KEYWORDS| free heart check-up, Serji Super Specialty Hospital, Arice General and Dental Clinic Shivamogga,