ಮರದಲ್ಲಿಯೇ ಹಣ್ಣಾದ ಅಡಿಕೆ, ಹೆಚ್ಚಾದ ಗೊರಬಲು, ಕಡಿಮೆಯಾದ ಬೆಲೆ | ಚೇಣಿ ಚೀಲದಲ್ಲಿ ಈ ಸಲ ನುಕ್ಸಾನ್ ಜಾಸ್ತಿ?!
arecanut, growers, suffering losses, excessive rains,

SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 25, 2025
ವರದಿ : ಗಬಡಿ ಪ್ರತಾಪ್
ಅಡಿಕೆ ಬೆಳೆ ಎಂದರೆ ಮಲೆನಾಡಿಗರಿಗೆ ಬಂಗಾರ ಇದ್ದಂತೆ. ಒಂದು ರೀತಿಯಲ್ಲಿ ಮಲೆನಾಡಿಗರ ಜೀವನಾಡಿ. ಆದರೆ ಈ ಬಾರಿಮಳೆ ಹೆಚ್ಚಾಗಿದ್ದೆ ದೊಡ್ಡ ಸಮಸ್ಯೆ ಕಣ್ರಿ. ಒಂದೆಡೆ ಕೊಳೆ ರೋಗದ ಕಾಟ ಆದರೆ ಇನ್ನೊಂದು ಕಡೆ, ಅಡಿಕೆಗಳಲ್ಲಿ ಗೊರಬಲು ಹೆಚ್ಚಾಗಿ ಸಿಗ್ತಿದೆ. ಹೀಗಾಗಿ ಈ ಸಲ ಅಡಕೆ ವ್ಯಾಪಾರ ಮೇಲೆ ಕೆಳಗೆ ಆಗುತ್ತೆ ಎನ್ನುವ ಚಿಂತೆಯಲ್ಲಿದ್ದಾರೆ ಮಲ್ನಾಡ್‌ನ ಚೇಣಿದಾರರು.
ಗೋರಬಲು ಅಡಿಕೆ ಎಂದರೇನು.?
ಅಡಿಕೆಯಲ್ಲಿ ಹಣ್ಣಾದ ಅಡಿಕೆಯನ್ನು ತಂದು ಮಶಿನ್‌ಗ ಹಾಕಿದಾಗ ಆ ಅಡಿಕೆಯಿಂದ ಸಿಪ್ಪೆ ಪೂರ್ಣ ಪ್ರಮಾಣದಲ್ಲಿ ಬೇರ್ಪಡುವುದಿಲ್ಲ. ನಂತರ ಅದನ್ನು ಸಂಸ್ಕರಣೆ ಮಾಡಿ ಒಣಗಿಸಿದಾಗ ಅರೆಸಿಪ್ಪೆಯ ಅಡಿಕೆ ದೊರೆಯುತ್ತದೆ ಅದನ್ನೇ ಗೊರಬಲು ಎನ್ನುತ್ತಾರೆ.
ಕಮ್ಮಿ ಆಗಿದೆ ಗೊರಬಲು ರೇಟು
ಕಳೆದ ವರ್ಷ ಪ್ರತಿ ಕ್ವಿಂಟಾಲ್ 30 ರಿಂದ 36ರ ಸಾವಿರದ ಆಸು ಪಾಸಿನಲ್ಲಿದ್ದ ಗೊರಬಲು ದರ ಈ ಸರ್ತಿ 18 ರಿಂದ 25 ಸಾವಿರಕ್ಕೆ ಬಂದಿಳಿದಿದೆ. ಕೆಲವು ಮಂಡಿಗಳು ಪೇಪರ್ ನಲ್ಲಿ ಹೆಚ್ಚು ರೇಟ್ ಅನ್ನು ತೋರಿಸಿದರೂ ಸಹ ಪೇಪರ್ ನಲ್ಲಿ ನಿಗದಿಪಡಿಸಿದ್ದಕ್ಕಿಂತ ಕಡಿಮೆ ರೇಟ್ ಅನ್ನು ಕೊಡುತ್ತಾರೆ ಎನ್ನುವುದು ಗೊತ್ತಿರುವ ಸತ್ಯವೆ. ಇದು ರೇಟಿನ ವಿಚಾರವಾದರೆ, ಈ ಸಲ ಅಡಕೆ ಬೇರ್ಪಡಿಸುವ ಸಂದರ್ಭದಲ್ಲಿ ಚೇಣಿದಾರರಿಗೆ ದೊಡ್ಡ ದೊಡ್ಡ ಅಡಿಕೆ ಬೆಳಗಾರರಿಗೆ ಗೊರಬಲು ಜಾಸ್ತಿ ಸಿಗ್ತಿದೆ. ರೇಟು ಕೊನೆ ನೆಲಕ್ಕೆ ಬಿದ್ದಾಗೆ ಕುಸಿದು ಬಿದ್ದಿರುವ ನಡುವೆ ಗೊರಬಲೇ ಜಾಸ್ತಿ ಸಿಕ್ಕ ನುಕ್ಸಾನ್ ಖಚಿತ ಸದ್ಯ ಮಲ್ನಾಡ್‌ನ ಅಡಿಕೆ ವಲಯದಲ್ಲಿ ಇದೆ ಚರ್ಚು ಶುರುವಾಗಿದೆ.
ಗೊರಬಲು ಹೆಚ್ಚಾದ ಕಥೆ
ಚೇಣಿದಾರರು ಹಲವಾರು ವಿಧದಲ್ಲಿ ಅಡಿಕೆಯನ್ನು ಚೇಣಿ ಹಿಡಿಯುತ್ತಾರೆ. ಆ ಪೈಕಿ ಹಸಿ ಅಡಿಕೆಯನ್ನು ತೂಕ ಲೆಕ್ಕದಲ್ಲಿ ತೆಗೆದುಕೊಳ್ಳುವುದು ಒಂದು ವಿಧಾನ. ಈ ಪ್ರಕಾರವಾಗಿ ಒಂದು ಕ್ವಿಂಟಾಲ್‌ಗೆ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಇಡಿ ಅಡಿಕೆ ರೇಟಿಗೆ ಇರುವ ದರಕ್ಕೆ ಹೋಲಿಸಿ, ಪರ್ಸೆಂಟೇಜ್ ಲೆಕ್ಕಾ ಹಾಕಿ, ಇಂತಿಷ್ಟು ಅಂತಾ ರೇಟು ಕೊಟ್ಟು ಹಸಿ ಅಡಿಕೆಯನ್ನ ಖರೀದಿಸಲಾಗುತ್ತೆ. ಈ ಸಲ 1 ಕ್ವಿಂಟಾಲ್ ಹಸಿ ಅಡಿಕೆಗೆ , ಪ್ರಸ್ತುತ 5400 ರೂಪಾಯಿ ನಡೆಯುತ್ತಿದೆಯಂತೆ. ಹೀಗೆ ಹಸಿ ಅಡಿಕೆ ತಗೊಂಡು, ಅದನ್ನು ಬೇಯಿಸಿ ಒಣಗಿಸಿ ಬೇರ್ಪಡಿಸಿ ಮಾರಿ ಲಾಭ ಪಡೆಯಬೇಕು. ವಿಷಯ ಅಂದರೆ, ಕಳೆದ ಸಲದ ಚೇಣಿಯಲ್ಲಿ 50 ರಿಂದ 60 ಕ್ವಿಂಟಲ್ ಅಡಿಕೆಯಲ್ಲಿ ಹೆಚ್ಚೆಂದರೆ 8 ರಿಂದ 10 ಕ್ವಿಂಟಲ್ ಗೊರಬಲು ಸಿಗುತ್ತಿತ್ತು. ಆದರೆ ಈ ಸಲ 50 ಕ್ವಿಂಟಲ್ ಅಡಿಕೆಯಲ್ಲಿ ಅರ್ಧಕ್ಕೆ ಅರ್ಧ ಗೊರಬಲು ಸಿಗುತ್ತಿದೆ.
ಈ ಬಾರಿ ಗೊರಬಲು ಹೆಚ್ಚಾಗಲು ಕಾರಣವೇನು
ಪ್ರತಿ ಬಾರಿ ಅಕ್ಟೋಬರ್ ತಿಂಗಳಲ್ಲಿ ತೆಗೆಯಬೇಕಾಗಿದ್ದ ಮೊದಲ ಕೊಯ್ಲಿನ ಕೊನೆಯನ್ನು ಈ ಬಾರಿ ಮಳೆ ಕೈಕೊಟ್ಟ ಪರಿಣಾಮ ರೈತರು ನವೆಂಬರ್ ಡಿಸೆಂಬರ್ ತಿಂಗಳಲ್ಲಿ ತೆಗೆದಿದ್ದಾರೆ. ಅದರಿಂದಾಗಿ ಅಡಿಕೆ ಪೂರಾ ಹಣ್ಣಾಗಿ ಅರ್ಧಕರ್ಧ ಗೋರಬಲು ಅಗಿದೆ. ಮಳೆ ಕಾರಣಕ್ಕೆ ಅಡಿಕೆ ಬೆಳೆಗಾರರು ಕೊಳೆ ಸಮಸ್ಯೆಯಿಂದ ನಷ್ಟವನ್ನು ಅನುಭವಿಸಿದರೆ ಇತ್ತ ಅಡಿಕೆ ಚೇಣಿದಾರರು ಗೊರಬಲಿಗೆ ಬೆಲೆ ಕಡಿಮೆ ಕಡಿಮೆಯಾಗಿರುವುದರಿಂದ ನಷ್ಟವನ್ನು ಅನುಭವಿಸುವಂತಾಗಿದೆ. ಸಾಲದು ಅಂತಾ ಈ ಸಲು ಮಾರುಕಟ್ಟೆಯಲ್ಲಿ ಗೊರಬಲು ರೇಟ್ 25 ಸಾವಿರ ಇರುವುದರಿಂದ ಚೇಣಿದಾರ ನಷ್ಟದ ಹಾದಿ ಹಿಡಿದಿದ್ದಾನೆ. ಈಗಿರುವ ಗೊರಬಲು ರೇಟಿನಲ್ಲಿ ಆತ ಅಡಿಕೆ ಬೆಳೆಗಾರರಿಗೆ ಹಣ ಕೊಡುವುದೋ ಕೆಲಸಗಾರರಿಗೆ ಸಂಬಳ ಕೊಡುವುದೋ ಹಾಗೆಯೇ ತಾನು ಮಂಡಿಯಲ್ಲಿ ತೆಗೆದ ಸಾಲವನ್ನು ತೀರಿಸುವುದೂ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ.
ಯಾರು ಏನು ಹೇಳುತ್ತಾರೆ
ಕಳೆದ ಬಾರಿ ನಮ್ಮ ತೋಟದಲ್ಲಿ ಉತ್ತಮ ಪಸಲು ಬಂದಿತ್ತು. ಆದರೆ ಈ ಭಾರಿ ಬೂದುಕೊಳೆ ರೋಗದಿಂದಾಗಿ ಅರ್ಧಕ್ಕೆ ಅರ್ಧಪಸಲು ಕೈಕೊಟ್ಟಿದೆ. ಹಾಗಾಗಿ ತೋಟದ ನಿರ್ವಹಣೆ ಹಾಗು ಮಂಡಿದಾರರಿಂದ ಪಡೆದ ಸಾಲವನ್ನು ಪಾವತಿಸುವುದು ಕಷ್ಟವಾಗಿದೆ
ಗಬಡಿ ಪ್ರಖ್ಯಾತ್
ಈ ಬಾರಿ ಅಡಿಕೆ ಜಾಸ್ತಿನೆ ಹಣ್ಣಾಗಿದೆ . ಕಾರಣ ಮಳೆ. ಮಳೆ ಬಿಡದೇನೆ ಕೊನೆ ತೆಗೆಯುವುದು ತುಂಬಾ ತಡವಾಯಿತು. ಅಲ್ಲದೆ ಅಡಿಕೆ ಒಣಗಿಸುವುದು ತಾಪತ್ರಯವಾಯಿತು. ಅಡಿಕೆ ಪೂರ ಹಣ್ಣಾಗಿ ಗೊರಬಲು ಹೆಚ್ಚು ಬರ್ತಿದೆ.
ಪೂರ್ಣೇಶ್ ಕೊನೆಗಾರರು
ಚೇಣಿ ಹಿಡಿಯುವ ಸಂದರ್ಭದಲ್ಲಿ ಗೊರಬಲು ರೇಟು ಚೆನ್ನಾಗಿಯೇ ಇತ್ತು ಆದರೆ ಈ ಒಂದೆರಡು ತಿಂಗಳಲ್ಲಿ ಬಹಳ ಕಮ್ಮಿಯಾಗಿದೆ. ಅಡಿಕೆ ಸುಲಿತದ ಸಂದರ್ಭದಲ್ಲಿ ಅಡಿಕೆ ಸಂಸ್ಕರಣೆ ವೆಚ್ಚ ಕಾರ್ಮಿಕರ ವೆಚ್ಚ ಬಹಳಷ್ಟು ತಗುಲುವುದರಿಂದ ಅದನ್ನು ನಿಭಾಯಿಸಿವುದು ಬಹಳಾ ಕಷ್ಟವಾಗಿದೆ
ಪ್ರಶಾಂತ್ ಚೇಣಿದಾರರು
SUMMARY | On the one hand, arecanut growers are suffering losses due to the disease due to excessive rains this time, while on the other hand, the chenidars are incurring losses due to increased arecanut snoring.
KEYWORDS | arecanut, growers, suffering losses, excessive rains,