2-3 ಸಾವಿರಕ್ಕೆ ಕದ್ದ ಗಾಡಿ ಅಡವಿಡುತ್ತಿದ್ದ ಅಪ್ಪು ಅರೆಸ್ಟ್ | 16 ಬೈಕ್ ಸೀಜ್
Haveri, Ranebennur, Davangere, Malebennur, Ranebennur, Byadgi, Haveri police, bike thief Appu,

SHIVAMOGGA | MALENADUTODAY NEWS | ಮಲೆನಾಡು ಟುಡೆ Jan 17, 2025
ಹಾವೇರಿ ಜಿಲ್ಲೆ ಪೊಲೀಸರು ಒಂದು ಕೇಸ್‌ನ ಬೆನ್ನತ್ತಿ ಬರೋಬ್ಬರಿ 16 ಬೈಕ್‌ಗಳನ್ನು ಕದ್ದಿದ್ದ ಅಪ್ಪು ಬಸವಣ್ಣೆಪ್ಪ ನಾಗೇನಹಳ್ಳಿ ಎಂಬವನನ್ನು ಬಂಧಿಸಿದ್ದಾರೆ. ರಾಣೆಬೆನ್ನೂರು ತಾಲ್ಲೂಕಿನ ಕವಲೆತ್ತು ಗ್ರಾಮದ ಅಪ್ಪು, ಹಲವು ವರ್ಷಗಳಿಂದ ಬೈಕ್‌ಗಳನ್ನು ಕದಿಯುವುದೇ ಅಭ್ಯಾಸ ಮಾಡಿಕೊಂಡಿದ್ದ ಈತನಿಂದ ₹5.15 ಲಕ್ಷ ಮೌಲ್ಯದ 16 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.
ಈತ, ಹಾವೇರಿ, ರಾಣೆಬೆನ್ನೂರ, ಬ್ಯಾಡಗಿ ಸೇರಿದಂತೆ ಹಲವೆಡೆ ಬೈಕ್ ಕಳ್ಳತನ ಮಾಡಿದ್ದ ಆರೋಪಿ ಅವುಗಳನ್ನು ಎರಡು ಮೂರು ಸಾವಿರ ರೂಪಾಯಿಗೆ ಅಡವಿಡುತ್ತಿದ್ದ. ಆ ಬಳಿಕ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದ,ಹೀಗೆ ಸುಮಾರು 16 ಬೈಕ್‌ಗಳನ್ನು ಕದ್ದು ಆರಾಮಾಗಿ ಓಡಾಡಿಕೊಂಡಿದ್ದ ಆರೋಪಿ ದಾವಣಗೆರೆ ಮಲೆಬೆನ್ನೂರುನಲ್ಲಿ ಕಳ್ಳತನವೆಸಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
SUMMARY | Haveri, Ranebennur, Davangere, Malebennur, Ranebennur, Byadgi, Haveri police, bike thief Appu,
KEY WORDS | Haveri, Ranebennur, Davangere, Malebennur, Ranebennur, Byadgi, Haveri police, bike thief Appu,