ಶಿವಮೊಗ್ಗದಲ್ಲಿ ಹಾಸನ ವ್ಯಕ್ತಿಗೆ 5 ಲಕ್ಷ ದೋಖಾ | ಗೋಲ್ಡ್‌ ಕಾಯಿನ್‌ ಕೇಸ್‌ನಲ್ಲಿ ಸಿಕ್ಕಿಬಿದ್ದ ಆರೋಪಿ

Shivamogga, Shiralakoppa Police Station , shivamogga police solved a fake gold coin fraud case, Hassan man was cheated in Shivamogga,fake gold coin fraud case

ಶಿವಮೊಗ್ಗದಲ್ಲಿ ಹಾಸನ ವ್ಯಕ್ತಿಗೆ 5 ಲಕ್ಷ ದೋಖಾ | ಗೋಲ್ಡ್‌ ಕಾಯಿನ್‌ ಕೇಸ್‌ನಲ್ಲಿ ಸಿಕ್ಕಿಬಿದ್ದ ಆರೋಪಿ
Shivamogga, Shiralakoppa Police Station , shivamogga police solved a fake gold coin fraud case, Hassan man was cheated in Shivamogga,fake gold coin fraud case

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 30, 2025 ‌‌ 

ಶಿವಮೊಗ್ಗ ಪೊಲೀಸರು ಚಿನ್ನದ ನಾಣ್ಯದ ಹೆಸರಲ್ಲಿ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಅರೆಸ್ಟ್‌ ಮಾಡಿದ್ದಾರೆ. ಇತ್ತೀಚೆಗೆ ಜಿಲ್ಲೆಯಲ್ಲಿ ನಕಲಿ ಚಿನ್ನದ ನಾಣ್ಯಕೊಟ್ಟು ಹೊರಜಿಲ್ಲೆ ಹಾಗೂ ಹೊರರಾಜ್ಯದ ವ್ಯಕ್ತಿಗಳಿಗೆ ಮೋಸ ಮಾಡಿರುವ ಆರೋಪ ಸಂಬಂಧ ಹಲವು ದೂರುಗಳು ದಾಖಲಾಗಿದ್ದವು. ವಿವಿಧ ತಾಲ್ಲೂಕುಗಳಲ್ಲಿ ದಾಖಲಾದ ಎಫ್‌ಐಆರ್‌ ಪೈಕಿ ಶಿರಾಳಕೊಪ್ಪ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಕೇಸ್‌ ಇದೀಗ ಇತ್ಯರ್ಥ ಕಂಡಿದೆ. ಇಲ್ಲಿನ ಅಧಿಕಾರಿಗಳು ಸೊರಬ ತಾಲ್ಲೂಕಿನ ಆರೋಪಿಯೊಬ್ಬನನ್ನು ಅರೆಸ್ಟ್‌ ಮಾಡಿದ್ದಾರೆ. 

ಶಿರಾಳಕೊಪ್ಪ ಪೊಲೀಸ್‌ ಠಾಣೆ 

ದಿನಾಂಕಃ 29-12-2024 ರಂದು ಹಾಸನದ ವ್ಯಕ್ತಿಯೊಬ್ಬರು ತಮಗೆ ಧರ್ಮಸ್ಥಳದಲ್ಲಿ ಚಂದ್ರು ಅಂತಾ ಪರಿಚಯವಾಗಿದ್ದರು. ಆ ಬಳಿಕ ಅವರು ತಮ್ಮ ಮನೆ ಪಕ್ಕದಲ್ಲಿ ಪಾಯ ಅಗೆಯುವಾಗ ಚಿನ್ನದ ನಾಣ್ಯ ಸಿಕ್ಕಿದೆ. ಅದನ್ನು ಬೇಕಾದರೆ ನಿಮಗೆ ಕೊಡುತ್ತೇನೆ ಎಂದು ಹೇಳಿದ್ದರು. ಅದರಂತೆ ಶಿರಾಳಕೊಪ್ಪಕ್ಕೆ ಬಂದಾಗ ಕೊಟ್ಟ ಒಂದು ಚಿನ್ನದ ನಾಣ್ಯ ಅಸಲಿಯಾಗಿತ್ತು. ಅದನ್ನು ನಂಬಿಕ  08-01-2025  ರಂದು ಶಿರಾಳಕೊಪ್ಪಕ್ಕೆ ಬಂದು ಚಂದ್ರು ಮತ್ತು ನವೀನ್ ಇಬ್ಬರಿಗೆ ಐದು ಲಕ್ಷ ಹಣವನ್ನು ನೀಡಿ ಅವರಿಂದ 800 ಗ್ರಾಂ ತೂಕದ ನಾಣ್ಯಗಳನ್ನು ತೆಗೆದುಕೊಂಡು ಹೋಗಿದ್ದೆ. ಆನಂತರ ಅವುಗಳು ನಕಲಿ ಎಂದು ಗೊತ್ತಾಗಿದೆ, ಹೀಗಾಗಿ ಆರೋಪಿಗಳನ್ನ ಪತ್ತೆ ಮಾಡಿ ಮತ್ತು ತಾವು ಕಳೆದುಕೊಂಡ ಹಣ ವಾಪಸ್‌ ಕೊಡಿಸುವಂತೆ ಶಿರಾಳಕೊಪ್ಪ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.  ಕಲಂ 318 (4)  ಬಿ.ಎನ್.ಎಸ್ ಕಾಯ್ದೆ ಅಡಿ ಕೇಸ್‌ ದಾಖಲಾಗಿತ್ತು. 

ಪ್ರಕರಣ ಸಂಬಂಧ ಪ್ರಶಾಂತ್ ಪಿಎಸ್ಐ ಶಿರಾಳಕೊಪ್ಪ ಪೊಲೀಸ್ ಠಾಣೆ, ಸಿ.ಹೆಚ್.ಸಿ ಸಂತೋಷ್ ಕುಮಾರ್, ಸಿಪಿಸಿ ಸಲ್ಮಾನ್, ರಾಕೇಶ್, ಕಾರ್ತಿಕ್, ಕಾಂತೇಶ್ ಹಾಗೂ ಜಿಲ್ಲಾ ಪೊಲೀಸ್ ಕಛೇರಿ ತಾಂತ್ರಿಕ ವಿಭಾಗದ ಸಿಬ್ಬಂಧಿಗಳಾದ ಸಿ.ಹೆಚ್.ಸಿ ಗುರುರಾಜ್, ಇಂದ್ರೇಶ್ ಹಾಗೂ ವಿಜಯ್ ರವರ ತಂಡ ಪ್ರಕರಣದ ತನಿಖೆ ಆರಂಭಿಸಿತ್ತು.ಈ ತಂಡದ ಶ್ರಮಕ್ಕೆ ಇದೀಗ ಫಲ ಸಿಕ್ಕಿದ್ದು, ಸೊರಬ ತಾಲ್ಲೂಕು ತತ್ತೂರು ಗ್ರಾಮದ ನಿವಾಸಿಯನ್ನ ಅರೆಸ್ಟ್‌ ಮಾಡಲಾಗಿದೆ. ಅಲ್ಲದೆ ವಂಚಿಸಿದ 5,00,000 ರೂಪಾಯಿಯನ್ನು ಸಹ ಜಪ್ತು ಮಾಡಲಾಗಿದೆ. 

 

SUMMARY  |  Shivamogga Shiralakoppa Police Station staff have solved a fake gold coin fraud case. A Hassan man was cheated in Shivamogga,

KEY WORDS | Shivamogga, Shiralakoppa Police Station , shivamogga police solved a fake gold coin fraud case, Hassan man was cheated in Shivamogga,fake gold coin fraud case